ಗ್ರಾಪಂ ನೌಕರರ ಪ್ರತಿಭಟನೆ ವಾಪಸ್

| Published : Oct 14 2024, 01:21 AM IST

ಸಾರಾಂಶ

ಗ್ರಾಮೀಣಾಬೀವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಯಾಂಕ್‌ ಖರ್ಗೆ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಬೇಡಿಕೆಗಳನ್ನು ನೌಕರರು ಮಂಡಿಸಿದ್ದು ಇದಕ್ಕೆ ಅತ್ಯುತ್ತಮವಾಗಿ ಸ್ಪಂದನೆ ನೀಡಿದ ಹಿನ್ನೆಲೆಯಲ್ಲಿ ನೌಕರರು ಮತ್ತು ಸಿಬ್ಬಂದಿ ಅನಿರ್ದಿಷ್ಟ ಹೋರಾಟವನ್ನು ಹಿಂಪಡೆಯಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿ ಕಳೆದ 7ದಿನಗಳಿಂದ ಹೋರಾಟ ಮಾಡುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರ ಪ್ರತಿಭಟನೆ ಸಚಿವರೊಂದಿಗೆ ನಡೆಸಿದ ಸಂಧಾನ ಸಫಲವಾಗಿದೆ.ಅಂತೂ ಇಂತೂ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಂದೆ ಏಕಕಾಲದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಹೋರಾಟಕ್ಕೆ ತೆರೆಬಿದ್ದಿದೆ.ಗ್ರಾಮೀಣಾಬೀವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಯಾಂಕ್‌ ಖರ್ಗೆ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಬೇಡಿಕೆಗಳನ್ನು ನೌಕರರು ಮಂಡಿಸಿದ್ದು ಇದಕ್ಕೆ ಅತ್ಯುತ್ತಮವಾಗಿ ಸ್ಪಂದನೆ ನೀಡಿದ ಹಿನ್ನೆಲೆಯಲ್ಲಿ ನೌಕರರು ಮತ್ತು ಸಿಬ್ಬಂದಿ ಅನಿರ್ದಿಷ್ಟ ಹೋರಾಟವನ್ನು ಹಿಂಪಡೆಯಲಾಗಿದೆ ಎಂದು ಸಂಘಧ ಜಿಲ್ಲಾಧ್ಯಕ್ಷ ಮೋಹನ್‌ ಕುಮಾರ್ ತಿಳಿಸಿದ್ದಾರೆ.

ಎಲ್ಲರೂ ಕೆಲಸಕ್ಕೆ ಹಾಜರಾಗಿ

ಎಲ್ಲರೂ ಯಥಾವತ್ತಾಗಿ ಗ್ರಾಮ ಪಂಚಾಯಿತಿ ಕೆಲಸ ಗಳಿಗೆ ಹಾಜರಾಗಬೇಕು. ಹೋರಾಟದ ಅವಧಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹಾಜರಾತಿ ಕೊಡಲಾಗುವುದು. ಹೋರಾಟದ ಅವಧಿಯಲ್ಲಿ ನೌಕರರ ವಿರುದ್ಧ ಮಾಡಿದ ಎಲ್ಲಾ ಆದೇಶಗಳನ್ನು ಹಿಂಪಡೆಯುವುದು. ಮುಂದುವರೆದು ಎಲ್ಲಾ ವೃಂದ ಸಂಘಗಳ ರಾಜ್ಯಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಪ್ಲಾನ್ ಎ ಮತ್ತು ಬಿ ಮುಕ್ತಾಯವಾಗಿದ್ದು, ಪ್ಲಾನ್ ಸಿ ಯನ್ನು, ಸರ್ಕಾರ ಮತ್ತು ಇಲಾಖೆಯ ನಡೆ ಗಮನಿಸಿಕೊಂಡು ತಮ್ಮೆಲ್ಲರ ಜೊತೆ ಚರ್ಚಿಸಿ ಸೂಕ್ತ ರೂಪರೇಷವನ್ನು ಕೂಡ ಮುಂದಿನ ದಿನಗಳಲ್ಲಿ ತಯಾರಿಸಲಾಗುವುದು.

ಎಲ್ಲಾ ವೃಂದ ಸಂಘಗಳ ಪ್ರಮುಖ ಬೇಡಿಕೆ ಈಡೇರಿಸಿದ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನಾ ಸಮಾರಂಭವನ್ನು ರಾಜ್ಯದ ಎಲ್ಲಾ ಅಧಿಕಾರಿಗಳು ನೌಕರರು, ಸಿಬ್ಬಂದಿ ವರ್ಗ,ಹಾಗೂ ಸದಸ್ಯರನ್ನು ಸೇರಿಸಿ ರಾಜ್ಯ ಮಟ್ಟದಲ್ಲಿ ಅದ್ಧೂರಿಯಾಗಿ ಮಾಡುವುದು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ.