ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಛತ್ರಸಾಲ ಗ್ರಾಮದಲ್ಲಿ ಕಳೆದ ೧೪ ವರ್ಷಗಳಿಂದ ಸ್ಥಾಪಿತವಾಗಿರುವ ವಿಕಾಟ ಕಲಬುರಗಿ ಸಿಮೆಂಟ್ ಕಂಪನಿಯಲ್ಲಿ ಜಮೀನು ಕಳೆದುಕೊಂಡವರಿಗೆ ಉದ್ಯೋಗ, ಮಕ್ಕಳಿಗೆ ಶಿಕ್ಷಣ ಹಾಗೂ ಮೂಲ ಸೌಕರ್ಯಗಳನ್ನು ನೀಡದೇ ಗಡಿಪ್ರದೇಶ ಜನರಿಗೆ ಕಂಪನಿ ವಂಚಿತಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಕಾಟ ಕಲಬುರಗಿ ಸಿಮೆಂಟ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.ವಿಕಾಟ ಕಲಬುರಗಿ ಸಿಮೆಂಟ ಕಂಪನಿ ಮುಂದೆ ಬುಧವಾರ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಬ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ,ವಿಕಾಟ ಕಲಬುರಗಿ ಸಿಮೆಂಟ ಕಂಪನಿ ಸ್ಥಾಪಿಸುವ ಸಂದರ್ಭದಲ್ಲಿ ರೈತರಿಂದ ೩ಸಾವಿರಕ್ಕೂ ಹೆಚ್ಚು ಜಮೀನು ಖರೀದಿಸಿದೆ. ಆದರೆ ರೈತರ ಮಕ್ಕಳಿಗೆ ಉದ್ಯೋಗ ಮತ್ತು ಶಿಕ್ಷಣ ನೀಡುವಲ್ಲಿ ರಾಜಕೀಯ ಮಾಡಲಾಗುತ್ತಿದೆ. ಬಡ ರೈತನ ಮಕ್ಕಳಿಗೆ ಶಿಕ್ಷಣ ಇಲ್ಲದೇ ಇರುವುದರಿಂದ ನಿರುದ್ಯೋಗಿಯಾಗಲು ಕಂಪನಿಯೇ ಮುಖ್ಯಕಾರಣವಾಗಿದೆ.ವಿಕಾಟ ಕಲಬುರಗಿ ಸಿಮೆಂಟ ಕಂಪನಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ. ಕರ್ಚಖೇಡ ಗ್ರಾಪಂಗೆ ಸರಿಯಾಗಿ ತೆರಿಗೆ ಭರಿಸುತ್ತಿಲ್ಲ.ಕಂಪನಿಯಲ್ಲಿ ಯೂನಿಯನ್ ರಚನೆ ಮಾಡುವಂತಿಲ್ಲ ಯಾರು ಇದರ ಬಗ್ಗೆ ಮಾತನಾಡಿದರು ಕಂಪನಿಯಿಂದ ನೌಕರಿ ತೆಗೆದು ಹಾಕಲಾಗುತ್ತಿದೆ.ಜಮೀನು ಕಳೆದುಕೊಂಡ ರೈತನ ಮಕ್ಕಳಿಗೆ ಶಿಕ್ಷಣ ಮತ್ತು ವಾಹನ ವ್ಯವಸ್ಥೆ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.
ವಿಕಾಟ ಕಲಬುರಗಿ ಸಿಮೆಂಟ ಕಂಪನಿಯೂ ಉಚಿತ ಆರೋಗ್ಯ ಶಿಬಿರದಲ್ಲಿ ಕೇವಲ ತಮ್ಮ ಕಾರ್ಮಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುತ್ತಿಲ್ಲ.ಕಂಪನಿಯಲ್ಲಿ ಸೌಲಭ್ಯಗಳು ಕೇಳಿದರೆ ೬೮ ಜನರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ. ಕರ್ಚಖೇಡ,ಬುರುಗಪಳ್ಳೀ,ಛತ್ರಸಾಲ,ಗಣಾಪೂರಗ್ರಾಮಗಳಲ್ಲಿ ೯೦ ಎಕರೆ ಸರಕಾರಿ ಜಮೀನು ಕಬಳೀಕೆ ಮಾಡಿಕೊಂಡಿದೆ.ಸರಕಾರ ಭೂಮಿ ದುರ್ಬಳಕೆ ಮಾಡಿಕೊಂಡು ಗಣಿ ಸಂಪತ್ತು ಲೂಟಿ ಮಾಡುತ್ತಿದೆ. ಗ್ರಾಮಸ್ಥರು ಯಾರು ಕಂಪನಿ ವಿರುದ್ದ ಮಾತನಾಡುವಂತಿಲ್ಲ ಇಂದಿನ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗವಹಿಸುತ್ತಿದ್ದರು ಆದರೆ ವಿರೋಧ ಪಕ್ಷದ ಕಾರ್ಯಕರ್ತರು ಗ್ರಾಮಗಳಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಗಿಫ್ಟ ನೀಡಿದ್ದಾರೆ ಎಂದು ಟೀಕಿಸಿದ ಅವರು ನಾನು ಎಂದಿಗೂ ರೈತರ ಪರವಾಗಿ ಹೋರಾಟ ನಡೆಸಿ ನ್ಯಾಯ ಕೊಡಿಸುತ್ತೇನೆ ನಮ್ಮ ಬೇಡಿಕೆಗೆ ಕಂಪನಿ ಸ್ಪಂದಿಸದಿದ್ದರೆ ಹಗಲುರಾತ್ರಿ ಇಲ್ಲಿಯೇ ಬಿಡಾರ ಹೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ಕಿಡಿಕಾರಿದರು.ಬೆಳಿಗ್ಗೆ ೯ಗಂಟೆಗೆ ಪ್ರಾರಂಭವಾದ ಪ್ರತಿಭಟನೆ ಸಂಜೆ ೫ಗಂಟೆತನಕ ನಡೆಯಿತುಆದರೆ ಪ್ರತಿಭಟನೆಕಾರರ ಬೇಡಿಕೆಗಳನ್ನು ಸ್ಪಂದಿಸಲು ಹಿಂದೇಟು ಹಾಕುತ್ತಿದ್ದ ಕಂಪನಿ ಮುಖ್ಯಸ್ಥ ಶಾಮವೈಷ್ಣವ್,ಎಚ್.ಆರ್.ಡಿ ಲಕ್ಷಿಕಾಂತರೆಡ್ಡಿ ವಿರುದ್ದ ಕೂಗಿ ಕಂಪನಿ ಬಾಗಿಲು ಮುರಿದು ಒಳನುಗ್ಗಲು ಪ್ರಯತ್ನಿಸಿ ಬಿಜೆಪಿ ಕಾರ್ಯಕರ್ತರನ್ನು ಡಿವೈಎಸ್ಪಿ ಎಸ್,ಎಸ್,ಹಿರೇಮಠ,ಸಿಪಿಐ ಅಂಬಾರಾಯ ಕಮಾನಮನಿ,ಪಿಎಸ್‌ಐ ಎ.ಎಸ.ಪಟೇಲ,ಮಂಜುನಾಥರೆಡ್ಡಿಸೇಡಂ ತಡೆದರು.ಕೆಲವು ಬಿಜೆಪಿ ಕಾರ್ಯಕರ್ತರು ಬಾಗಿಲು ಮುರಿಯುವ ಪ್ರಯತ್ನ ನಡೆಸಿ ಹೈಡಾಮ್ರಾ ನಡೆಯಿತು. ವಿಕಾಟ ಕಲಬುರಗಿ ಸಿಮೆಂಟ ಕಂಪನಿ ಮುಂದೆ ಸೇಡಂ,ಚಿಂಚೋಳಿ,ಮಿರಿಯಾಣ,ಸುಲೇಪೇಟ,ಕುಂಚಾವರಂ ಪೋಲಿಸ ಠಾಣೆ ಪೋಲಿಸರು ಭಾರಿ ಬಿಗಿ ಬಂದೋಬಸ್ತ ವ್ಯವಸ್ಥೆಗೊಳಿಸಿದ್ದರು.ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಬೇಡಿಕೆಗಳ ಬಗ್ಗೆ ಕಂಪನಿ ಮುಖ್ಯಸ್ಥ ಶಾಮವೈಷ್ಣವ ಮಾತುಕತೆ ನಡೆಸಿದರು ಸಹಾ ಒಪ್ಪದಿರುವ ಕಾರಣ ಪ್ರತಿಭಟನೆ ೮ಗಂಟೆಗೆ ತನಕ ಮುಂದುವರಿದಿತ್ತು.ಪ್ರತಿಭಟನೆಯಲ್ಲಿ ಶಿವಕುಮಾರ ಪಾಟೀಲ ತೇಲ್ಕೂರ,ಮಲ್ಲಿಕಾರ್ಜುನ ಕೊಡದೂರ,ಪಿತಂಬರ ಗಣಾಪೂರ,ಬಸಪ್ಪ ಹೆಂಡಿ,ನಾಗಪ್ಪ ಕೊಳ್ಳಿ,ಮೋಯಿನಪಾಶಾ,ಅಶೋಕ ಪವಾರ,ವಿಜಯಕುಮಾರ ಆಡಕಿ,ಮಲ್ಲಿಕಾರ್ಜುನ ಪಾಟೀಲ,ನಾರಾಯಣರೆಡ್ಡಿ ಭಕ್ತಂಪಳ್ಳಿ,ನಾಗೂರಾವ ಬಸೂದೆ,ರೇವಣಸಿದ್ದಪ್ಪ ಕೆರೋಳಿ ಇನ್ನಿತರಿದ್ದರು.