- ಹೊನ್ನಾಳಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ
- - -ಹೊನ್ನಾಳಿ: ಮಹಾಪುರುಷ, ದಾರ್ಶನಿಕರ ಜಯಂತಿ ಆಚರಿಸುವ ಮೂಲ ಉದ್ದೇಶವೇ ಸನಾತನ ಧರ್ಮ, ಪರಂಪರೆ, ಸಂಸ್ಕತಿ ಆಚರಣೆಗಳನ್ನು ಮುಂದಿನ ಯುವಪೀಳಿಗೆಗೆ ಪರಿಚಯಿಸುವುದಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕು ಕಚೇರಿಯಲ್ಲಿ ಭಾನುವಾರ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ, ಭಕ್ತಿ ಸಮರ್ಪಿಸಿ ಅವರು ಮಾತನಾಡಿದರು. ಜಗದ್ಗುರು ರೇಣುಕಾಚಾರ್ಯರಾದಿಯಾಗಿ ಎಲ್ಲ ಗುರುಗಳು ಮನುಕುಲದ ಉದ್ಧಾರಕ್ಕಾಗಿ ಅವತರಿಸಿದವರು. ಅವರ ಜಯಂತಿ ಆಚರಣೆ ಮೂಲಕ ನಾವೆಲ್ಲರೂ ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಂಗಮ ಸಮಾಜದ ಅಧ್ಯಕ್ಷ ಭೈರನಹಳ್ಳಿ ಎಂ.ಪಂಚಾಕ್ಷರಯ್ಯ ಮಾತನಾಡಿ, ಮಹಾತ್ಮರ ಜಯಂತಿ ಆಚರಣೆ ಮೂಲಕ ಸಮಾಜದ ಸಂಘಟನೆ ಬಲಪಡಿಸಬೇಕು. ಯಾವುದೇ ಬೇಡಿಕೆಗಳು ಸಾಂಘಿಕ ಹೋರಾಟಗಳಿಂದ ಮಾತ್ರ ಸರ್ಕಾರದ ಹಂತದಲ್ಲಿ ಈಡೇರಿಸಿಕೊಳ್ಳಲು ಸಾಧ್ಯ ಎಂದರು.
ಮಹಿಳಾ ಅಧ್ಯಕ್ಷೆ ಎಚ್.ಜಿ.ಹೇಮಲತಾ ಮಾತನಾಡಿ, ಸಾಮಾನ್ಯವಾಗಿ ಜಂಗಮ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆ ಉಪ ತಹಸೀಲ್ದಾರ್ ಜಯರಾಂ ಮಾತನಾಡಿದರು. ಸಮಾಜದ ಗೌರವ ಅಧ್ಯಕ್ಷ ಎಂ.ರುದ್ರಯ್ಯ, ಪ್ರಧಾನ ಕಾರ್ಯದರ್ಶಿ ಕುಳಘಟ್ಟೆ ರುದ್ರಸ್ವಾಮಿ, ಸಮಾಜದ ವಕ್ತಾರರಾದ ಎಂ.ಎಸ್. ಶಾಸ್ತ್ರಿ ಹೊಳೆಮಠ, ಸಮಾಜದ ಹಿರಿಯ ಮುಖಂಡ ಹಾಗೂ ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಂ. ಗಂಗಾಧರಯ್ಯ, ಡಾ.ಸಾಲಿಮಠ, ಕುಳಘಟ್ಟೆ ಬಸಯ್ಯ, ಬೆನಕನಹಳ್ಳಿ ಬಸಯ್ಯ, ಕುರುವ ಶಿವಯ್ಯ, ಬೆನಕಯ್ಯ ಶಾಸ್ತ್ರಿ, ಶಾಂತಾದೇವಿ ಹಿರೇಮಠ, ಸುನಂದ, ಅನೇಕ ಮುಖಂಡರು ಇದ್ದರು. ಶಿಕ್ಷಕ ಕೊಟ್ರೇಶ್ ಅವರು ಜಗದ್ಗುರು ರೇಣುಕಾಚಾರ್ಯ ಕುರಿತು ಉಪನ್ಯಾಸ ನೀಡಿದರು.
- - --1ಎಚ್.ಎಲ್.ಐ2.ಜೆಪಿಜಿ:
ಹೊನ್ನಾಳಿ ತಾಲೂಕು ಕಚೇರಿಯಲ್ಲಿ ಭಾನುವಾರ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಂಗಮ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಇದ್ದರು.