ಸಾರಾಂಶ
ಲಕ್ಷ್ಮೇಶ್ವರ: ಮಗುವಿನಲ್ಲಿ ಮಾನವೀಯ ಮೌಲ್ಯ ಜಾಗೃತಗೊಳಿಸುವುದೇ ಶಿಕ್ಷಣದ ಪ್ರಮುಖ ಉದ್ದೇಶ. ಶಿಕ್ಷಕರು ಪಠ್ಯ ವಿಷಯಕ್ಕೆ ಮಾತ್ರ ಸೀಮಿತರಾಗದೆ ವಿದ್ಯಾರ್ಥಿಗಳನ್ನು ಹೊರ ಜಗತ್ತಿಗೆ ಸಮನ್ವಯಗೊಳಿಸುವ ಕಾರ್ಯ ಮಾಡಬೇಕು ಎಂದು ಶಿರಹಟ್ಟಿಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 2, ಸ.ಮಾ.ಪ್ರಾ.ಹೆ.ಮ ಶಾಲೆ ಹಾಗೂ ತಾ.ಪಾ.ಮ.ಬ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಹಮ್ಮಿಕೊಂಡ 2024-25ರ ಶಾಲಾ ಪ್ರಾರಂಭೋತ್ಸವದ ತಾಲೂಕು ಮಟ್ಟದ ಸಾಂಕೇತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಾರ್ಯಾಲಯದ ಎಪಿಸಿಓ ಎಸ್.ಕೆ.ಹವಾಲ್ದಾರ ಮಾತನಾಡಿ, 2024-25ರ ಶೈಕ್ಷಣಿಕ ವರ್ಷದಲ್ಲಿ ಡಿಡಿಪಿಐ ಅವರು ಶೈಕ್ಷಣಿಕ ಬಲವರ್ಧನೆಗಾಗಿ ಐದು ಅಂಶಗಳ ಕಾರ್ಯಕ್ರಮ ಯೋಜಿಸಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.
ನೌಕರರ ಸಂಘದ ತಾಲೂಕಾಧ್ಯಕ್ಷ ಡಿ.ಎಚ್. ಪಾಟೀಲ ಪ್ರಭಾತಪೇರಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಹೂಗುಚ್ಛ ನೀಡಿ ಸ್ವಾಗತ ನೀಡಲಾಯಿತು.ಶಿಕ್ಷಕರ ಹಾಗೂ ನೌಕರರ ಸಂಘಟನೆಗಳ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರ ವಿತರಿಸಿದರು. ನೂತನ ಬಿಇಓ ಎಚ್.ಎ. ನಾಯಕ್ ಅವರನ್ನು ಶಿಕ್ಷಕರ ವೇದಿಕೆ ಮುಖಾಂತರ ಸನ್ಮಾನಿಸಲಾಯಿತು. ಸ.ಮಾ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಎಸ್. ಜಿರಂಕಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ಹರ್ಲಾಪುರ ಮಾತನಾಡಿದರು.
ಈ ವೇಳೆ ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಂ. ಹವಳದ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎನ್. ಮುಳಗುಂದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರು ನೇಕಾರ, ಇ.ಸಿ.ಓ ಉಮೇಶ ಹುಚ್ಚಯ್ಯನಮಠ, ಸಂಘದ ಪದಾಧಿಕಾರಿ ಎಚ್.ಎಂ.ಗುತ್ತಲ, ಎನ್.ಎನ್.ಸುಣಗಾರ, ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಎಂ. ಶಿರಹಟ್ಟಿ, ಡಿ.ಎನ್. ದೊಡ್ಡಮನಿ, ಪಿ.ಎಚ್. ಕೊಂಡಾಬಿಂಗಿ ಇದ್ದರು.ಸ.ಮಾ.ಪ್ರಾ.ಹೆ.ಮ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ. ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸಿ.ಎಫ್. ಪಾಟೀಲ, ಕೆ.ಆರ್. ಮುದಕಣ್ಣವರ, ಪಿ.ಎಂ. ಅಡ್ನೂರ ಪ್ರಾರ್ಥಿಸಿದರು. ಉತ್ತರ ವಲಯದ ಸಿ.ಆರ್.ಪಿ ಉಮೇಶ ನೇಕಾರ ನಿರೂಪಿಸಿದರು. ದಕ್ಷಿಣ ವಲಯದ ಸಿ.ಆರ್.ಪಿ ಸತೀಶ ಬೋಮಲೆ ವಂದಿಸಿದರು.