ಪ್ರಜಾಪ್ರಭುತ್ವ ಉತ್ತೇಜಿಸುವುದೇ ದಿನಾಚರಣೆ ಉದ್ದೇಶ: ವಿಶ್ವಾಸ ವೈದ್ಯ

| Published : Sep 16 2024, 01:59 AM IST

ಪ್ರಜಾಪ್ರಭುತ್ವ ಉತ್ತೇಜಿಸುವುದೇ ದಿನಾಚರಣೆ ಉದ್ದೇಶ: ವಿಶ್ವಾಸ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ದೇಶದ ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಮತ್ತು ಸಾರ್ವತ್ರಿಕ ಮೌಲ್ಯವಾಗಿದೆ. ಅದರ ರಕ್ಷಣೆ, ಮೌಲ್ಯಗಳನ್ನು ಉತ್ತೇಜಿಸಿವುದು ಹಾಗೂ ಪ್ರಜಾಪ್ರಭುತ್ವ ಅಲ್ಲದ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಬಲಿಸುವುದು ದಿನಾಚರಣೆಯ ಉದ್ದೇಶವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ನಮ್ಮ ದೇಶದ ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಮತ್ತು ಸಾರ್ವತ್ರಿಕ ಮೌಲ್ಯವಾಗಿದೆ. ಪ್ರಜಾಪ್ರಭುತ್ವ ರಕ್ಷಿಸುವುದು, ಅದರ ಮೌಲ್ಯಗಳನ್ನು ಉತ್ತೇಜಿಸಿವುದು ಹಾಗೂ ಪ್ರಜಾಪ್ರಭುತ್ವ ಅಲ್ಲದ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಬಲಿಸುವುದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಉದ್ದೇಶವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಸಂವಿಧಾನದ ಮಹತ್ವ ಹಾಗೂ ಅರಿವು ಮೂಡಿಸಲು ಸರ್ಕಾರ ಆಯೋಜಿಸಿದ್ದ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಮಾತನಾಡಿ, ನಮ್ಮ ಮುಂದಿನ ಯುವ ಪೀಳಿಗೆಗೆ ದಾರಿದೀಪ ಆಗಬೇಕು ಎಂದು ಹೇಳಿದರು.

ಡಿಎಸ್ಪಿ ಚಿದಂಬರ ವಿ.ಎಂ. ಸಿಪಿಐ ಐ.ಎಂ. ಮಠಪತಿ, ಸವದತ್ತಿ ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಅಬಕಾರಿ ಸಿಪಿಐ ಶ್ರೀಶೈಲ ಅಕ್ಕಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಆರ್. ಕುಲಕರ್ಣಿ, ಅರಣ್ಯ ಅಧಿಕಾರಿ ಸಂಜು ಸವಸುದ್ದಿ, ಆರ್.ಎಫ್.ಒ ನೇಹಾ ತೋರಗಲ್, ಪಪಂ ನಾಮನಿರ್ದೇಶಿತ ಸದಸ್ಯರಾದ ನಿಖಿಲ ಪಾಟೀಲ, ಹನುಮಂತ ಹಾರುಗೋಪ್ಪ, ಸಲಿಂಬೇಗ ಜಮಾದಾರ, ಶಿವಾನಂದ ಕರಿಗೋಣ್ಣವರ, ಶಾನೂರಬಿ ಡಿ.ಕೆ, ನೋಟರಿ ವಿ.ಜಿ. ಬಿರಾದಾರ ಪಾಟೀಲ, ವೈದ್ಯಾಧಿಕಾರಿ ಬಿ.ಎಸ್. ಬೆಳ್ಳೂರ, ಪಶುವೈದ್ಯಾಧಿಕಾರಿ ಎಂ.ವಿ. ಪಾಟೀಲ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.