ಉಡುಪಿ: ಸತತ ಮೂರನೇ ದಿನವೂ ಮಳೆ ಕ್ಷೀಣ

| Published : Aug 08 2024, 01:31 AM IST

ಸಾರಾಂಶ

ಸತತ ಮೂರನೇ ದಿನವೂ ಮಳೆ ಕ್ಷೀಣವಾಗಿತ್ತು. ಮೋಡ ಕವಿದ ವಾತಾವರಣವಿದ್ದು ಒಂದೆರಡು ಭಾರಿ ಲಘ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇನ್ನು ಕೆಲವು ದಿನಗಳ ಮಳೆ ಬಿಡುವು ನೀಡಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸತತ 3ನೇ ದಿನ ಬುಧವಾರವೂ ಜಿಲ್ಲೆಯಲ್ಲಿ ಮಳೆ ಬಹಳ ಕ್ಷೀಣವಾಗಿತ್ತು. ಮೋಡ ಕವಿದ ವಾತಾವರಣವಿದ್ದು, ಒಂದೆರಡು ಬಾರಿ ಲಘುವಾಗಿ ಮಳೆಯಾಗಿದೆ.

ಮಂಗಳವಾರ ಕುಂದಾಪುರ ತಾಲೂಕಿನ ಕೇದೂರು ಗ್ರಾಮದ ರಾಘವೇಂದ್ರ ಶೆಟ್ಟಿ ಅವರ ಜಾನುವಾರು ಕೊಟ್ಟಿಗೆಯ ಕಚ್ಚಾ ಮಣ್ಣಿನ ಗೋಡೆ ಮಳೆಗಾಳಿಗೆ ಒದ್ದೆಯಾಗಿ ಬಿದ್ದು ಅವರಿಗೆ ಸುಮಾರು 5 ಸಾವಿರ ರು. ನಷ್ಟವಾಗಿರುವ ಬಗ್ಗೆ ವರದಿಯಾಗಿದೆ.

ಬುಧವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 17.70 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 12.40, ಕುಂದಾಪುರ 14.40, ಉಡುಪಿ 24.10, ಬೈಂದೂರು 29.30, ಬ್ರಹ್ಮಾವರ 10, ಕಾಪು 31. 60, ಹೆಬ್ರಿ 13. 60 ಮಿ.ಮೀ ಮಳೆ ಆಗಿರುತ್ತದೆ.