ಸಾರಾಂಶ
ಬೀರೂರು ಪಟ್ಟಣ ವಲಯಮಟ್ಟದ ಪ್ರತಿಭಾ ಕಾರಂಜಿಕನ್ನಡಪ್ರಭ ವಾರ್ತೆ, ಬೀರೂರು
ಪ್ರತಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಸ್ಪರ್ಧೆಯಲ್ಲಿ ಪಾಲ್ಗೊಂಡು ವೇದಿಕೆ ಬಳಸಿಕೊಳ್ಳುವುದೇ ನಿಜವಾದ ಗೆಲುವು ಭಾಗವಹಿಸದಿರುವುದೇ ನಿಜವಾದ ಸೋಲು ಎಂದು ಪುರಸಭಾಧ್ಯಕ್ಷೆ ವನಿತಾ ಮಧು ಬಾವಿಮನೆ ತಿಳಿಸಿದರು.ಪಟ್ಟಣದ ಕೆ.ಎಲ್.ಕೆ ಸರಕಾರಿ ಪ್ರೌಡಶಾಲೆಯಲ್ಲಿ ಗುರುವಾರ ನಡೆದ ಬೀರೂರು ಪಟ್ಟಣ ವಲಯಮಟ್ಟದ ಪ್ರೌಡಶಾಲೆಗಳ ಪ್ರತಿಭಾ ಕಾರಂಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಆದ್ಯತೆ ನೀಡದೇ ಉತ್ತಮ ಹವ್ಯಾಸ ಬೆಳಸಿಕೊಂಡು ಸಾಧನೆಮಾಡಬೇಕು. ವಿಷಯಗಳನ್ನು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಿ ಸಾಧನೆಮಾಡಿ, ತಮ್ಮೊಳಗಿನ ವಿಷಯ ಜ್ಞಾನ ವಿಚಾರ ವಿನಿಮಯಕ್ಕೆ ಉತ್ತಮ ವೇದಿಕೆ ಬಳಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.ಉದ್ಘಾಟನೆ ನೆರವೇರಿಸಿ ಮಾತನಾಡಿದ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಜಯದೇವಪ್ಪ, ಶಿಕ್ಷಣ ಇಲಾಖೆ ಸರಕಾರದ ಆದೇಶದಂತೆ ಕ್ರೀಡಾಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿಭಾ ಕಾರಂಜಿ ರೂಪದಲ್ಲಿ ವಿವಿಧ ಹಂತಗಳಲ್ಲಿ ಆಯೋಜಿಸುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದು ಮಕ್ಕಳು ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದರು.ಕ್ಷೇತ್ರ ಶಿಕ್ಷಣ ಸಮನ್ಯಯಾಧಿಕಾರಿ ಶೇಖರಪ್ಪ ಮಾತನಾಡಿ, ಮಕ್ಕಳ ಭಾವನಾತ್ಮಕ ಸಾಂಸ್ಕೃತಿಕ ಕಲಾವಿಕಾಸಕ್ಕೆ ಪ್ರತಿಭಾ ಕಾರಂಜಿ ವೇದಿಕೆಯಾಗಿದೆ. ಕರೋನಾ ನಂತರ ಹಲವು ಸ್ಪರ್ಧೆಗಳಿಗೆ ಸೀಮಿತಗೊಂಡಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರಕಲಿದೆ ಎಂಬ ಆಶಯ ವ್ಯಕ್ತಪಡಿಸಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕರಾವ್ ಜಗಪತಿ ತಮ್ಮ ಶಾಲೆಗೆ ಸಿಕ್ಕ ಅವಕಾಶಕ್ಕೆ ಸಂತಸ ವ್ಯಕ್ತಪಡಿಸಿ, ಮಕ್ಕಳು ಗೆಲುವಿಗೆ ಹಿಗ್ಗದೇ ಸೋಲಿಗೆ ಕುಗ್ಗದೇ ಸಾಧನೆಯತ್ತ ಮನಸ್ಸನ್ನು ಕೇಂದ್ರಿಕರಿಸಿ ಶಾಲೆ ಮತ್ತು ಪೋಷಕರಿಗೆ ಕೀರ್ತಿ ತರುವ ಉತ್ತಮ ವಿದ್ಯಾರ್ಥಿಯಾಗಿರಿ ಎಂದರು.ಕಳೆದ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಸಾಧನೆ ಮಾಡಿದ ಬಿ.ಎಂ.ಜೀವನ್ ಹಾಗೂ ತರುಣ್ ಕೆ.ಎಸ್.ಇವರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ವಲಯದ 9 ಪ್ರೌಢಶಾಲೆಗಳ 350ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 23ವಿವಿಧ ಪ್ರಕಾರಗಳ ಸ್ಫರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ, ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯತೀಶ್, ಮೋಹನ್ರಾಜ್, ಶಶಿಕುಮಾರ್, ಕೆ.ಎಲ್.ಕೆ.ಕಟ್ಟಡ ದಾನಿ ಕುಟುಂಬದ ರೋಹಿಣೆ, ಶಿಕ್ಷಣ ಸಂಯೋಜಕ ಶಂಕ್ರಪ್ಪ,ನೂಡಲ್ ಅಧಿಕಾರಿ ಕೆಂಪೇಗೌಡ, ಗಂಗಪ್ಪ, ಕುಸುಮಾ, ವೈಶಾಲಿ, ಕೆ.ಎಲ್.ಕೆ ಶಾಲೆ ಉಪಪ್ರಾಚಾರ್ಯ ರಾಜಶೇಖರ್, ಸಾಹಿತಿ ಶಿಕ್ಷಕ ಹೊಸೂರು ಪುಟ್ಟರಾಜು, ರಾಜ್ಯ ಪರಿಷತ್‌ನ ಚಂದ್ರಪ್ಪ ಹಾಗೂ ವಿವಿಧ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕವೃಂದ ಇದ್ದರು.28ಬೀರೂರು01ಬೀರೂರು ಕೆ.ಎಲ್.ಕೆ ಸರಕಾರಿ ಪ್ರೌಡಶಾಲೆ ಆವರಣದಲ್ಲಿ ಗುರುವಾರ ನಡೆದ ಬೀರೂರು ಪಟ್ಟಣ ವಲಯಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟವನ್ನು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಜಯದೇವಪ್ಪ ಉದ್ಘಾಟಿಸಿದರು. ಪುರಸಭಾಧ್ಯಕ್ಷೆ ವನಿತಾ ಮಧು ಭಾವಿಮನೆ ಇದ್ದರು.