ಸಾರಾಂಶ
ಮಾಧ್ಯಮಗೋಷ್ಠಿ । ರಾಜ್ಯ ಸರ್ಕಾರದ ಯಾವುದೇ ಕ್ರಮ ಇಲ್ಲಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಸೇರಿದಂತೆ ಇತರೆ ನಾನಾ ಸಮಸ್ಯೆಗಳಿದ್ದರೂ ಇದುವರೆಗೂ ಚುನಾಯಿತ ಪ್ರತಿನಿಧಿಗಳಿಂದ ಯಾವ ಸಮಸ್ಯೆಯೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಇವರ ವೈಫಲ್ಯವೇ ಕಾರಣ ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ೨೦೨೨ರ ನವೆಂಬರ್‌ನಲ್ಲಿ ಹೆಬ್ಬನಹಳ್ಳಿ ಗ್ರಾಮದಲ್ಲಿ ಆನೆ ದಾಳಿಗೆ ಮನು ಎನ್ನುವ ರೈತನು ಸಾವನಪ್ಪಿದ್ದು, ಆಗ ಸಂಘರ್ಷದಲ್ಲಿ ಆಹೋರಾತ್ರಿ ಕಾಡಿನಲ್ಲಿ ಶವ ಇಟ್ಟುಕೊಂಡು ಹೋರಾಟ ಮಾಡಲಾಯಿತು. ಮೃತನ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಉಸ್ತುವಾರಿ ಸಚಿವರು ಕೂಡ ಸ್ಥಳಕ್ಕೆ ಬಂದು ಅನೇಕ ಭರವಸೆ ನೀಡಿದ ನಂತರ ಶವ ತೆರವು ಮಾಡಿಕೊಡಲಾಯಿತು. ನಂತರದಲ್ಲಿ ಮಹಿಳೆಯರು ಸೇರಿ ಜನರು ಮೂಡಿಗೆರೆ ಶಾಸಕರ ಮೇಲೆ ಜನರೇ ಹಲ್ಲೆ ಮಾಡಿ ಪ್ರತಿಭಟನೆ ಮಾಡಿದರು. ಕಾಫಿ ರೈತರು ಸೇರಿ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಯಿತು ಎಂದರು.
‘ಮೇನಕಾ ಗಾಂಧಿ ಅವರ ಮೆಸೇಜ್ ಆಧಾರದ ಮೇಲೆ ಆಡಳಿತ ವರ್ಗದ ಜನ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯದಿಂದ ನನ್ನ ಬಂದೂಕನ್ನು ಕಾನೂನುಬಾಹಿರವಾಗಿ ಎರಡು ವರ್ಷಗಳ ಕಾಲ ಪೊಲೀಸರು ವಶಪಡಿಸಿಕೊಂಡರು. ಇದರ ವಿರುದ್ಧ ಜನರು ಚಳುವಳಿ ಮಾಡಿದರು. ಆನೆ ದಾಳಿಯಲ್ಲಿ ೭೮ ಸಾವಾಗಿದೆ. ೨೦೨೪ರಲ್ಲೆ ಹೊಸ ೧೨ ಆನೆಗಳು ಮರಿ ಹಾಕಿವೆ. ಈಗ ೯೨ ಆನೆಗಳಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಉತ್ತರ ಕೊಡುವುದಿಲ್ಲ ಎಂದು ದೂರಿದರು.‘ಕಾಡಾನೆ ಕುರಿತು ಇಲಾಖೆ ತಜ್ಞರು ಕೊಟ್ಟಂತಹ ವರದಿಯನ್ನು ಮೂಲೆಗೆ ಎಸೆಯಲಾಗಿದೆ. ನಾವು ಕೂಡ ಅನೇಕ ದೇಶದ ಮಾದರಿಯನ್ನು ಕೊಟ್ಟಿದ್ದು, ಇನ್ನು ರಾಜಕಾರಣಿಗಳು ಮನಸ್ಸಿಗೆ ಬಂದಂತಹ ವರದಿ ಕೊಡುತ್ತಾರೆ. ಆನೆಗಳ ಸ್ಥಳಾಂತರ ಮತ್ತು ಆನೆ ಕಾರಿಡರ್ ಮಾಡುವುದು, ಆನೆಯ ಧಾಮ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರಕ್ಕೆ ಅರಣ್ಯ ಇಲಾಖೆ ವರದಿ ನೀಡಿದ್ದು ೪೦೦ ರಿಂದ ೫೦೦ ಕಿ.ಮೀ. ಅರಣ್ಯ ಮತ್ತು ಹಳ್ಳಿಗಳ ಅಂಚಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಬೇಕು. ಅದಕ್ಕೆ ಬೇಕಾಗಿರುವ ೫೦೦ ಕೋಟಿ ರು. ಅನ್ನು ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಿಕೊಡಬೇಕು ಎಂದು ಕೇಳಲಾಗಿದೆ. ಆದರೆ ಈ ಬಗ್ಗೆ ಉದ್ದೇಶಪೂರ್ವಕವಾಗಿ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜಕಾರಣಿಗಳು ಗಮನ ಕೊಡುತ್ತಿಲ್ಲ ಎಂದರು.‘ಆನೆ ಯಾವ ರೀತಿ ಸಾವನಪ್ಪಿತು ಬಗ್ಗೆ ಚರ್ಚೆಯೆ ಇಲ್ಲ. ಯಾವುದೋ ಸಣ್ಣ ಪ್ರಕರಣ ಇಟ್ಟುಕೊಂಡು ಹಾಸನ ಜಿಲ್ಲೆಯ ನಾಲ್ಕು ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುತ್ತಾರೆ. ದೊಡ್ಡ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳಲೇ ಇಲ್ಲ. ಕೇಂದ್ರ ಸರ್ಕಾರದ ಜತೆ ಮಾತನಾಡಿದ್ದರೆ ಉಚಿತವಾಗಿ ಕೊಡಿಸುತ್ತಿದ್ದೆ. ರಾಜ್ಯ ಸರ್ಕಾರ ಏನು ಮಾತನಾಡಿಲ್ಲ. ಮಾಜಿ ಪ್ರಧಾನಿ ಅವರೊಂದಿಗೆ ಈಗಿನ ಪ್ರಧಾನಿ ಜತೆ ನೇರ ಸಂಬಂಧವಿದ್ದರೂ ಏನು ಮಾತನಾಡುವುದಿಲ್ಲ. ಚುನಾಯುತ ಜನಪ್ರತಿನಿಧಿಗಳ ವೈಫಲ್ಯದಿಂದ ಇಲ್ಲಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್.