ದೇಶದ ಇತ್ತೀಚಿನ ಬೆಳವಣಿಗೆ ಬದಲಾಗಬೇಕು: ಪ್ರೊ.ಪಿ.ವೆಂಕಟರಾಮಯ್ಯ

| Published : Jan 06 2024, 02:00 AM IST

ದೇಶದ ಇತ್ತೀಚಿನ ಬೆಳವಣಿಗೆ ಬದಲಾಗಬೇಕು: ಪ್ರೊ.ಪಿ.ವೆಂಕಟರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಗಣತಿ ಆಧರಿಸಿ ಸಂಸತ್ ಗೆ ಸೀಟುಗಳನ್ನು ನಿರ್ಧರಿಸುವುದು ಸರಿಯಲ್ಲ. ಉತ್ತರ ಭಾರತದಲ್ಲಿ ಜನಸಂಖ್ಯೆ ಬೆಳೆಯುತ್ತಿದ್ದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಕುಟುಂಬ ಯೋಜನೆ ಕಾರಣದಿಂದಾಗಿ ಜನಸಂಖ್ಯೆ ಹೆಚ್ಚುತ್ತಿಲ್ಲ. ಹೀಗಿರುವಾಗ ಉತ್ತರ ಭಾರತದ ಸಂಸದರ ಸಂಖ್ಯೆ ಹೆಚ್ಚಾಗಿ, ದಕ್ಷಿಣ ಭಾರತದ್ದು ಅದೇ ರೀತಿ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆತಂಕವನ್ನುಂಟು ಮಾಡುತ್ತಿರುವ ದೇಶದ ಇತ್ತೀಚಿನ ಬೆಳವಣಿಗೆಯ ಬದಲಾಯಿಸಲು ಯುವಜನತೆ ಚಿಂತಿಸಬೇಕು ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಸಲಹೆ ನೀಡಿದರು.

ಅಖಿಲ ಕರ್ನಾಟಕ ಡಾ.ಜಿ. ಪರಮೇಶ್ವರ್ ಯುವ ಸೈನ್ಯ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರ್ ಅನ್ನು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸುಮಾರು 147 ಮಂದಿ ಸಂಸದರನ್ನು ಹೊರಗಿಟ್ಟು ಮೂರ್ನಾಲ್ಕು ಮಸೂದೆ ಅಂಗೀಕರಿಸಿದ್ದು ಸರಿಯಲ್ಲ. ಅಂತೆಯೇ ಗುಜರಾತ್ನಲ್ಲಿ ಈ ಹಿಂದೆಯೂ ಪ್ರಮುಖ ಮಸೂದೆ ಅಂಗೀಕಾರದ ವೇಳೆ ವಿಪಕ್ಷದರವು ಯಾವುದಾದರೂ ಒಂದು ಕಾರಣದಿಂದ ಶಾಸಕರನನು ಹೊರಗಿಟ್ಟು ಅಂಗೀಕಾರ ಪಡೆದ ಉದಾಹರಣೆ ಇದೆ. ಈ ರೀತಿಯ ಬೆಳವಣಿಗೆ ಸರಿಯಲ್ಲ ಎಂದರು.

ಜೊತೆಗೆ, ಜಾತಿ ಗಣತಿ ಆಧರಿಸಿ ಸಂಸತ್ ಗೆ ಸೀಟುಗಳನ್ನು ನಿರ್ಧರಿಸುವುದು ಕೂಡ ಸರಿಯಲ್ಲ. ಉತ್ತರ ಭಾರತದಲ್ಲಿ ಜನಸಂಖ್ಯೆ ಬೆಳೆಯುತ್ತಿದ್ದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಕುಟುಂಬ ಯೋಜನೆ ಕಾರಣದಿಂದಾಗಿ ಜನಸಂಖ್ಯೆ ಹೆಚ್ಚುತ್ತಿಲ್ಲ. ಹೀಗಿರುವಾಗ ಉತ್ತರ ಭಾರತದ ಸಂಸದರ ಸಂಖ್ಯೆ ಹೆಚ್ಚಾಗಿ, ದಕ್ಷಿಣ ಭಾರತದ್ದು ಅದೇ ರೀತಿ ಇದೆ. ಆದ್ದರಿಂದ ದಕ್ಷಿಣ ಭಾರತದವರು ಸಂಸತ್ನಲ್ಲಿ ಧ್ವನಿ ಎತ್ತದಂತಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಬಳಿಕ ಡಾ.ಜಿ. ಪರಮೇಶ್ವರ್ ಅವರು ಸಜ್ಜನರಾಜಕಾರಣಿಯಾಗಿದ್ದು, ಅವರ ಹೆಸರಿನಲ್ಲಿ ಸಂಘಟನೆ ಜನಪರ ಕೆಲಸ ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು.

ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಸಂಘಟನೆ ಅಧ್ಯಕ್ಷ ಸಿ. ಮಂಜುನಾಥ್ ಮೊದಲಾದವರು ಇದ್ದರು.