ತರೀಕೆರೆಜಾನಪದ ಅವಿನಾಶಿ. ಇದಕ್ಕೆ ಇತಿಮಿತಿ, ಚೌಕಟ್ಟಿಲ್ಲ. ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಯುವಜನರ ಮೇಲಿದೆ ಎಂದು ಬೆಂಗಳೂರು ಕನ್ನಡ ಜಾನಪದ ಪರಿಷತ್‌ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಹೇಳಿದ್ದಾರೆ.

ಕನ್ನಡ ಜಾನಪದ ಪರಿಷತ್ ಜಿಲ್ಲಾ ಯುವ ಘಟಕ ಉದ್ಘಾಟನೆ । ಪದಪತ್ರ ಪ್ರದಾನ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ತರೀಕೆರೆ

ಜಾನಪದ ಅವಿನಾಶಿ. ಇದಕ್ಕೆ ಇತಿಮಿತಿ, ಚೌಕಟ್ಟಿಲ್ಲ. ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಯುವಜನರ ಮೇಲಿದೆ ಎಂದು ಬೆಂಗಳೂರು ಕನ್ನಡ ಜಾನಪದ ಪರಿಷತ್‌ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಹೇಳಿದ್ದಾರೆ. ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ ಮತ್ತು ಜಿಲ್ಲಾ ಯುವ ಘಟಕ ಉದ್ಘಾಟನಾ ಮತ್ತು ಪದಪತ್ರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಜಾನಪದ ಪರಿಷತ್‌ ದಶಮಾನೋತ್ಸವ ಸಂದರ್ಭದಲ್ಲಿ ಚಿಕ್ಕಮಗಳೂರು, ಬೀಜಾಪುರ, ಧಾರವಾಡ , ಬೆಂಗಳೂರು ನಗರ ಜಿಲ್ಲೆಯ ನಾಲ್ಕು ಯುವ ಘಟಕಗಳನ್ನು ಪ್ರಾರಂಭಿಸಲಾಗಿದೆ. ಈ ಜಿಲ್ಲೆಗಳಲ್ಲಿ ಯುವಕರಿಗೆ ಜಾನಪದ ತರಬೇತಿ ನೀಡಿ, ಮಕ್ಕಳಲ್ಲಿ ಜಾನಪದ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸಲಾಗುತ್ತದೆ. ಜಾನಪದ ಜೀವಂತವಾಗಿರಲು ಮಹಿಳೆಯರೇ ಕಾರಣ, ಜಾನಪದ ಮುಂದುವರಿಸಿಕೊಂಡು ಹೋಗಲು ಮಹಿಳೆಯರ ಕೊಡುಗೆ ಅಪಾರ. ಯುವ ಘಟಕ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು. ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ ಜಾನಪದ ಕಲೆ ನಮ್ಮ ಪೂರ್ವ ಕಾಲದಿಂದಲೇ ಬಂದಿದೆ. ಜಾನಪದ ಸಂಸ್ಕೃತಿ ಉಳಿಯಬೇಕು. ಯುವ ಘಟಕಗಳಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.ಚಿಕ್ಕಮಗಳೂರು ಜಿಲ್ಲಾ ಕಜಾಪ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಮಹಿಳಾ ದಿನಾಚರಣೆ ಶುಭಾಷಯ ಕೋರಿ ಮಾತನಾಡಿ ಸಂಘಟನೆ ಇನ್ನೂ ಹೆಚ್ಚು ಬೆಳೆಯಲಿ, ಜಾನಪದ ಉಳಿಸಿ ಬೆಳೆಸಬೇಕು ಎಂದು ಹೇಳಿದರು. ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಜಗತ್ತು ಉದಯವಾದಾಗಿನಿಂದಲೇ ಜಾನಪದ ಬೀಜಾಂಕುರವಾಗಿದೆ. ಜಾನಪದ ಒಂದು ಭಾಗಕ್ಕೆ ಸೀಮಿತವಲ್ಲ,ಇದು ಇಡೀ ವಿಶ್ವಕ್ಕೆ ವ್ಯಾಪಿಸಿದೆ. ನಮ್ಮ ಭಾಗದಲ್ಲಿ ಜಾನಪದ ವಿವಿಧ ಕಲಾ ಪ್ರಕಾರಗಳು ಶ್ರೀಮಂತವಾಗಿದೆ. ಜಾನಪದ ಕೊಡುಗೆಯಿಂದ ಈ ವಿಜ್ಞಾನ ಕೂಡ ಬೆಳೆಯುತ್ತಿದೆ ಎಂದು ಹೇಳಿದರು.ಕಜಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ಕೌಜಲಗಿ, ಚಿಕ್ಕಮಗಳೂರು ಯುವ ಘಟಕ ಅಧ್ಯಕ್ಷ ಟಿ.ಎಸ್.ಅನೂಪ್, ರಾಮನಗರ ಜಿಲ್ಲಾಧ್ಯಕ್ಷ ಕೆ.ಸಿ.ಕಾಂತಪ್ಪ, ತಾ.ಕನ್ನಡ ಜಾನಪದ ಪರಿಷತ್ ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ, ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ಪದಾದಿಕಾರಿಗಳು, ಮೇಘನಾ, ಶ್ವೇತಾ, ಲಾವಣ್ಯ ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.10ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಗಾಟನೆಯನ್ನು ಬೆಂಗಳೂರು ಕನ್ನಡ ಜಾನಪದ ಪರಿಷತ್ತ್ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ನೆರವೇರಿಸಿದರು. ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್, ಜಿಲ್ಲಾ ಕಜಾಪ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಚಿಕ್ಕಮಗಳೂರು ಯುವ ಘಟಕ ಅಧ್ಯಕ್ಷ ಟಿ.ಎಸ್.ಅನೂಪ್ ಮತ್ತಿತರರು ಇದ್ದರು.