ಜಾನಪದ ಸಂಸ್ಕೃತಿ ಉಳಿಸುವ ಜವಬ್ದಾರಿ ಎಲ್ಲರ ಮೇಲಿದೆ

| Published : Sep 30 2024, 01:15 AM IST

ಸಾರಾಂಶ

ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಇತಿಹಾಸವು ಜಾನಪದದಲ್ಲಿ ಮಿಳಿತವಾಗಿದ್ದು, ನಾವೆಲ್ಲರೂ ಸೇರಿ ಜಾನಪದ ಸಂಸ್ಕೃತಿ ಉಳಿಸಬೇಕಾದ ಜವಾಬ್ದಾರಿ ಇದೆ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಇತಿಹಾಸವು ಜಾನಪದದಲ್ಲಿ ಮಿಳಿತವಾಗಿದ್ದು, ನಾವೆಲ್ಲರೂ ಸೇರಿ ಜಾನಪದ ಸಂಸ್ಕೃತಿ ಉಳಿಸಬೇಕಾದ ಜವಾಬ್ದಾರಿ ಇದೆ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.

ಅವರು ಪಟ್ಟಣದ ಕನ್ನಡ ಭವನದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು

ದೇಶ, ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಕುರಿತ ಜಾನಪದವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮಗಿದೆ. ನಮ್ಮ ನಾಡು ಮತ್ತು ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹಾಗೂ ಪರಂಪರೆ ಇರುವುದನ್ನು ಯುವಜನತೆಗೆ ತಿಳಿಸಬೇಕಿದೆ ಎಂದರು.

ಜನಪದ ಸಂಸ್ಕೃತಿಯನ್ನು ಮುಂದಿನ ತಲೆಮಾರುಗಳಿಗೆ ಸ್ಥಳಾಂತರಿಸುವ ಜತೆಗೆ ಜಾನಪದದ ಕಲಾ ಪ್ರಾಕಾರಗಳನ್ನು ಜಾನಪದ ಘಟಕದ ನೂತನ ಪದಾಧಿಕಾರಿಗಳು ಸಂರಕ್ಷಿಸಬೇಕೆಂದು ಹೇಳಿ ಶುಭ ಹಾರೈಸಿದರು.

ತಾಲೂಕು ಜಾನಪದ ಘಟಕದ ನೂತನ ಅಧ್ಯಕ್ಷೆ ಶೋಭಾ ಶ್ರೀನಿವಾಸ್ ಮಾತನಾಡಿ, ತಮಗೆ ನೀಡಿರುವ ಈ ಹೊಸ ಜವಾಬ್ದಾರಿಯನ್ನು ಎಲ್ಲರ ಸಹಕಾರದೊಂದಿಗೆ ಹಿರಿಯರ ಸಲಹೆ ಮತ್ತು ಮಾರ್ಗದರ್ಶನ ಪಡೆದು ನಿರ್ವಹಿಸುವ ಪ್ರಯತ್ನ ಮಾಡುತ್ತೇನೆ. ಕನ್ನಡ ಜಾನಪದ ಜಗತ್ತಿನಲ್ಲಿರುವ ನಮ್ಮ ಜನಪದ ಪ್ರಾಕಾರಗಳ ಕಲೆ ಹಾಗು ಗ್ರಾಮೀಣ ಪ್ರದೇಶದ ಪುರಾತನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಮ್ಮ ಮಾತನಾಡಿ, ಹಿಂದಿನ ಸಂಸ್ಕಾರ ಹಾಗೂ ಇಂದಿನ ಕಾಲದ ಜನರ ಸಂಸ್ಕಾರಗಳ ವ್ಯತ್ಯಾಸದ ಬಗ್ಗೆ ತಿಳಿಸುವ ಮೂಲಕ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಆಶಯ ನುಡಿ ನುಡಿದ ಕನ್ನಡ ಜಾನಪದ ಘಟಕದ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಮಾಡೋಣ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಆರ್. ಜೆ. ಕೃಷ್ಣಸ್ವಾಮಿ, ಜಾನಪದರಲ್ಲಿ ಮಹಿಳೆಯರ ಪಾತ್ರ ಎಂಬುದರ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮಮ್ಮ, ಪುಷ್ಪಾ, ಜಯಂತಿ ಲೋಕೇಶ್, ಅನಿತಾ ದಿವಾಕರ್, ದೇವಿಕಾ, ಸುನೀತಾ, ಕೆಎಂ ಶಾಂತಮೂರ್ತಿ, ಶೀಲಾ ನಂಜುಂಡಪ್ಪ, ಲತಾ ಶೇಖರ್, ನಾಗಮ್ಮ ಶಿವಕುಮಾರ್, ಶಾರದಾ ಸುರೇಂದ್ರಬಾಬು ಮತ್ತಿತರರು ಉಪಸ್ಥಿತರಿದ್ದರು.