ಸಾರಾಂಶ
ಬದುಕಿನ ಮೌಢ್ಯಗಳ ಪರಿಹಾರ ಸೇರಿದಂತೆ ಸಮಾಜದಲ್ಲಿ ನಡೆದಂತಹ ಹಾಗೂ ಜೀವನದಲ್ಲಿ ನಡೆಯುವ ಸನ್ನಿವೇಶಗಳ ಪರಿಹಾರಕ್ಕೆ ಕವಿಗಳು ಗಮನ ಹರಿಸಬೇಕಾಗಿದೆ. ಆದರೆ, ಕವಿ ನುಡಿದಿದ್ದು ಎಲ್ಲವೂ ಕಾವ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಕವಿ ಮಾರ್ಗದಲ್ಲಿ ನಡೆಯಬೇಕಾದ ಅನಿವಾರ್ಯತೆ ಬಂದಿದೆ.
ಧಾರವಾಡ:
ಸಮಾಜದ ಸುಧಾರಣೆಗೆ ನಾಡಿನ ಕವಿಗಳ ಮೇಲೆ ದೊಡ್ಡ ಹೊಣೆಗಾರಿಕೆ ಇದೆ ಎಂದು ಕವಿ ಪುಟ್ಟು ಕುಲಕರ್ಣಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಜಿಲ್ಲಾ ಸಮ್ಮೇಳನದಲ್ಲಿ ಮಂಗಳವಾರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಅವರು, ಬದುಕಿನ ಮೌಢ್ಯಗಳ ಪರಿಹಾರ ಸೇರಿದಂತೆ ಸಮಾಜದಲ್ಲಿ ನಡೆದಂತಹ ಹಾಗೂ ಜೀವನದಲ್ಲಿ ನಡೆಯುವ ಸನ್ನಿವೇಶಗಳ ಪರಿಹಾರಕ್ಕೆ ಕವಿಗಳು ಗಮನ ಹರಿಸಬೇಕಾಗಿದೆ. ಆದರೆ, ಕವಿ ನುಡಿದಿದ್ದು ಎಲ್ಲವೂ ಕಾವ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಕವಿ ಮಾರ್ಗದಲ್ಲಿ ನಡೆಯಬೇಕಾದ ಅನಿವಾರ್ಯತೆ ಬಂದಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ರಾಮು ಮೂಲಗಿ ಮಾತನಾಡಿ, ಪ್ರಸ್ತುತ ಸಮಸ್ಯೆಗಳ ಕಡೆಗೆ ಕವಿಗಳು ಗಮನ ಹರಿಸಬೇಕು. ಸಮಾಜ ತಿದ್ದುವ ಕೆಲಸ ಕೂಡಾ ಕವಿಗಳಿಂದ ಆಗಬೇಕಾಗಿದೆ ಎಂದರು.ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಆಶಯ ನುಡಿಗನ್ನಾಡಿದರು. ಸ್ನೇಹರಂಗ ಕಲಾ ಬಳಗದವರು ಜಾನಪದ ಸಂಗೀತ ಪ್ರಸ್ತುತಪಡಿಸಿದರು. ಡಾ. ಶಿವಾನಂದ ಕಲ್ಲೂರ ನಿರೂಪಿಸಿದರು. ಸಿದ್ದರಾಮ ಹಿಪ್ಪರಗಿ ವಂದಿಸಿದರು.
ಪರಿಸರ ರಕ್ಷಣೆ, ತಾಯಿ ವಾತ್ಸಲ್ಯ, ಜೀವನದ ಘಟನೆಗಳು, ನಿವೃತ್ತಿ ಜೀವನದ ಸನ್ನಿವೇಶ, ಪರಿಸರ ರಕ್ಷಣೆ, ಸಮಾಜದಲ್ಲಿನ ಸಮಸ್ಯೆಗಳು ಹೀಗೆ ಹತ್ತು ಹಲವು ವಿಷಯಗಳನ್ನು ಒಳಗೊಂಡ ಕವನ ವಾಚನ ನಡೆಯಿತು. ಬಸವರಾಜ ಕೆಂಧೂಳಿ, ಮಲ್ಲಮ್ಮ ಯಾವಗಲ್ಲ, ತೇಜಾವತಿ ಎಚ್.ಡಿ, ಈರಣ್ಣ ಅಗಳಗಟ್ಟಿ, ಎಸ್.ಎಸ್. ಕರಡಿ, ರಂಜಾನ್ ಕಿಲ್ಲೇದಾರ, ವೈ.ಜಿ. ಭಗವತಿ, ಸುನಿತಾ ಹುಬ್ಳೀಕರ್, ಮಧುಮತಿ ಸಣಕಲ್ಲ, ಸೋಮಶೇಖರ ಇಟಗಿ, ಎಸ್.ಎಸ್. ಚಿಕ್ಕಮಠ, ಎಂ.ಜಿ. ಪವಾಡಶೆಟ್ಟರ್, ರಾಹುಲ್ ಉಪ್ಪಾರ, ಸ್ನೇಹಾ ಜೋಶಿ, ವಿಜಯಲಕ್ಷ್ಮಿ ಶಿಂಧೆ, ಸುಲೋಚನಾ ಮಾಲಿಪಾಟೀಲ, ಪ್ರಕಾಶ ಕಡಮೆ, ಎಂ.ಎಚ್.ಎ. ಶೇಖ್, ಚನ್ನಬಸಪ್ಪ ಹಿತ್ತಲಮನಿ, ಶಿಲ್ಪಾ ಮ್ಯಾಗೇರಿ ಕವನ ವಾಚನ ಮಾಡಿದರು.