ಕನ್ನಡಪ್ರಭ ವಾರ್ತೆ ಮುಂಡಗೋಡ

ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. ೯೬.೦೮ ರಷ್ಟಾಗಿದೆ. ತಾಲೂಕಿನ ೨೦ ಪ್ರೌಢ ಶಾಲೆಗಳಿಂದ ಪರೀಕ್ಷೆ ಬರೆದ ಒಟ್ಟು ೧೧೪೯ ವಿದ್ಯಾರ್ಥಿಗಳಲ್ಲಿ ೧೧೦೪ ಮಂದಿ ಉತ್ತೀರ್ಣರಾಗಿದ್ದಾರೆ.ತಾಲೂಕಿನ ಹುನಗುಂದ ಸರಕಾರಿ ಪ್ರೌಢಶಾಲೆ, ಅಂದಲಗಿ ಸರಕಾರಿ ಪ್ರೌಢ ಶಾಲೆ, ಮೈನಳ್ಳಿ ಸರಕಾರಿ ಪ್ರೌಢಶಾಲೆ, ಪಾಳಾ ಇಂದಿರಾಗಾಧಿ ವಸತಿ ಶಾಲೆ, ಪಟ್ಟಣದ ಬ್ಲೂಮಿಂಗ್ ಬಡ್ಸ್ ಪ್ರೌಢ ಶಾಲೆ, ಲೊಯೋಲಾ ಪ್ರೌಢ ಶಾಲೆ, ಮೌಲಾನಾ ಆಜಾದ ವಸತಿ ಶಾಲೆ, ಪಾಳಾ ಮಹಾತ್ಮಾಜಿ ಪ್ರೌಢ ಶಾಲೆ, ಪಾಳಾ ಸರಕಾರಿ ಉರ್ದು ಪ್ರೌಢಶಾಲೆ ಸೇರಿದಂತೆ ಒಟ್ಟು ೯ ಶಾಲೆಗಳು ಶೇ. ೧೦೦ರಷ್ಟು ಫಲಿತಾಂಶ ಗಳಿಸಿವೆ.

ತಾಲೂಕಿನ ಮಳಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಶೇ. ೯೯.೦೧, ಕಾತೂರ ಸರಕಾರಿ ಪ್ರೌಢಶಾಲೆ ಶೇ. ೯೮.೪೧, ಕರಗಿನಕೊಪ್ಪ ಮೊರಾರ್ಜಿ ವಸತಿ ಶಾಲೆ ಶೇ. ೯೭.೭೮, ಮುಂಡಗೋಡ ಸರಕಾರಿ ಪದವಿಪೂರ್ವ ಕಾಲೇಜು ಶೇ. ೯೬.೧೭, ಇಂದೂರ ಅನುದಾನಿತ ಪ್ರೌಢಶಾಲೆ ಶೇ. ೯೫.೨೪, ಚಿಗಳ್ಳಿ ಸರಕಾರಿ ಪ್ರೌಢಶಾಲೆ ಶೇ. ೯೩.೯೦, ರೋಟರಿ ಪ್ರೌಢಶಾಲೆ ಶೇ. ೯೨.೦೪, ದಸ್ತಗಿರಿಯಾ ಅನುದಾನಿತ ಪ್ರೌಢಶಾಲೆ ಶೇ. ೮೮.೫೭, ಲೋಟಸ್ ಬಾಲಕಿಯರ ಪ್ರೌಢಶಾಲೆ ಶೇ. ೮೮.೪೬, ಜ್ಞಾನಪ್ರಜ್ಞಾ ಅಂಧ ಮಕ್ಕಳ ಶಾಲೆ ಶೇ. ೮೩.೩೩, ಆದಿಜಾಂಬವ ಪ್ರೌಢಶಾಲೆ ಶೇ. ೭೬.೩೩ ರಷ್ಟು ಫಲಿತಾಂಶ ಗಳಿಸಿದೆ.

ತಾಲೂಕಿನ ಟಾಪರ್‌ಗಳು:

ಹುನಗುಂದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾಗ್ಯಲಕ್ಷ್ಮೀ ಬಸವರಾಜ ಬಿಸ್ನಳ್ಳಿ ೬೧೬ ಅಂಕ ಗಳಿಸಿ ಪ್ರಥಮ, ಪಟ್ಟಣದ ಬ್ಲೂಮಿಂಗ್ ಬಡ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ರಿಷಿಕ್ ರಮೆಶ ಬೋವಿ ೬೦೭ ಅಂಕ ಗಳಿಸಿ ದ್ವಿತೀಯ ಹಾಗೂ ಪಟ್ಟಣದ ಹೊರ ವಲಯ ಕರಗಿನಕೊಪ್ಪ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಸಿಂಚನಾ ನಿಂಗಪ್ಪ ಬಾರ್ಕರ ೬೦೬ ಅಂಕ ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.