ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜಸ್ಥಾನ ಗೆದ್ದರೆ ಬಹಳ ಸಂತೋಷ ಆಗುತ್ತೆ ಅಂದುಕೊಂಡಿದ್ವಿ. ಆದರೆ, ಜನ ರಾಜಸ್ಥಾನ, ಮಧ್ಯಪ್ರದೇಶ ಜೊತೆಗೆ ಛತ್ತೀಸ್‌ಘಡವನ್ನೂ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೆ ಈ ಚುನಾವಣಾ ಫಲಿತಾಂಶ 100ಕ್ಕೆ 100ರಷ್ಟು ದಿಕ್ಸೂಚಿ ಆಗಲಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.ಭಾನುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನ ನಿಮ್ಮ ಜೊತೆ ಇದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂಬ ದೃಷ್ಟಿಯಿಂದ ರಾಜಸ್ಥಾನ, ಮಧ್ಯಪ್ರದೇಶ ಜೊತೆಗೆ ಛತ್ತೀಸ್‌ಘಡವನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ದೇಶದ ಜನತೆಗೆ ದೊಡ್ಡ ಆನಂದ ಆಗಿದೆ ಎಂದರು.
ಕಾಂಗ್ರೆಸ್‌ನವರು ಐದಕ್ಕೆ ಐದೂ ರಾಜ್ಯ ಗೆಲ್ಲುತ್ತೀವಿ ಅಂತಿದ್ದರು. ತೆಲಂಗಾಣ ರಾಜ್ಯದಲ್ಲಿ ಮುಖ್ಯಮಂತ್ರಿ ಮೇಲಿದ್ದ ಬೇಸರದಿಂದ ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಮೂಲಕ ಮೋಸ ಮಾಡಿದ ರೀತಿ ಮುಸ್ಲಿಂರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದರೋ ಅದೇ ರೀತಿ ಗೆದ್ದಿದ್ದಾರೆ ಎಂದು ಟೀಕಿಸಿದರು.ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಕೊಡುತ್ತೇವೆ ಅಂದ್ರು, ಕರ್ನಾಟಕದಲ್ಲಿ ಆರು ತಿಂಗಳಲ್ಲೇ ಗ್ಯಾರಂಟಿ ಭರವಸೆ ವಿಫಲವಾಗಿವೆ. ನರೇಂದ್ರ ಮೋದಿ ಪ್ರಧಾನಮಂತ್ರಿ ಮಾಡುವ ದಿಕ್ಕಿನಲ್ಲಿ ಈ ಚುನಾವಣಾ ಫಲಿತಾಂಶ ಸ್ಫೂರ್ತಿ ಆಗಿದೆ. ಮುಂದಿನ ಚುನಾವಣೆಯಲ್ಲಿ ತೆಲಂಗಾಣ ಗೆಲ್ಲಲು ಆಗಲ್ಲ. ಈಗ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್ ಘಡ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿ ದೇಶ ಗೆಲ್ಲುತ್ತೇವೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗ್ತಾರೆ ಎಂದರು.
ಗ್ಯಾರಂಟಿ ಯೋಜನೆ ಬಗ್ಗೆ ದೇಶದ ಜನರಿಗೆ ಭರವಸೆ ಇಲ್ಲ. ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಮತದಾರರಿಗೆ ಮೋಸ ಮಾಡಿದೆ. ಕಾಂಗ್ರೆಸ್ ತನ್ನ ಸಾಧನೆಗಿಂತ ಗ್ಯಾರಂಟಿಯ ಮೋಸದ ಭರವಸೆ ನೀಡ್ತಿದ್ದಾರೆ. ತೆಲಂಗಾಣದ ಶಾಸಕರಿಗೆ ಇದು ಅರ್ಥವಾಗಿದೆ. ಮೂರು ರಾಜ್ಯದ ಜನ ಬಿಜೆಪಿ ಜೊತೆ ಇದ್ದಾರೆ. ಡಿ.ಕೆ.ಶಿವಕುಮಾರ್ ಪ್ರಯತ್ನ ದೇಶದಲ್ಲಿ ಎಲ್ಲೂ ಸಫಲವಾಗಲ್ಲ. ಬೆಂಗಳೂರಿನಲ್ಲಿ ಸಾಕಷ್ಟು ಗುಂಡಿಗಳಿವೆ. ಬಿಬಿಎಂಪಿ ನಿಮ್ಮ ಕೈಯಲ್ಲಿದೆ, ಬೆಂಗಳೂರಿಗೆ ಬಂದು ಗುಂಡಿ ತುಂಬಿಸುವ ಕೆಲಸ ಮಾಡಲಿ ಎಂದು ಕುಟುಕಿದರು.ಮುಂದಿನ ಚುನಾವಣೆಯಲ್ಲಿ ಕನಕಪುರ ಜನ ಏನು ಮಾಡ್ತಾರೋ ಗೊತ್ತಿಲ್ಲ. ಕರ್ನಾಟಕದ ರಾಜಕಾರಣದ ಭವಿಷ್ಯದ ಬಗ್ಗೆ ನಾವು ಏನು ತಪ್ಪು ಮಾಡಿದ್ದೇವೆ ಎಂಬುದು ಹಿಂದಿನ ಚುನಾವಣೆಯಲ್ಲಿ ಗೊತ್ತಾಗಿದೆ. ಚುನಾವಣೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಕೇಂದ್ರದ ನಾಯಕರು ಸರಿ ಮಾಡ್ತಾರೆ ಎಂದರು.
- - - ಕೋಟ್ ಮುಂದಿನ ಚುನಾವಣೆಯಲ್ಲಿ ರಾಜ್ಯದ ಬಿಜೆಪಿ ನಾಯಕರು ಎಲ್ಲರೂ ಒಟ್ಟಾಗಿ ಮುಂದೆ ಹೋಗ್ತೇವೆ. ದೇಶದ ಹಿತಕೋಸ್ಕರ ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡ್ತೇವೆ. ಆದರೆ, ಕಾಂಗ್ರೆಸ್‌ನವರಿಗೆ ಬುದ್ಧಿ ಇಲ್ಲ. ಅವರಲ್ಲಿ ಒಂದಿಬ್ಬರಲ್ಲಿ ಒಂದೊಂದು ರೀತಿ ಭಿನ್ನಾಭಿಪ್ರಾಯ ಇದೆ. ಈಗಾಗಲೇ ಅವರು ಬಡಿದಾಡಿ ಕೊಳ್ಳುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಒಂದಾಗಲ್ಲ- ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
- - - (-ಫೋಟೋ: ಕೆ.ಎಸ್.ಈಶ್ವರಪ್ಪ)