ಗ್ರಾಪಂಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟ

| Published : Nov 28 2024, 12:33 AM IST

ಸಾರಾಂಶ

ಹಾನಗಲ್ಲ ತಾಲೂಕಿನ ನರೇಗಲ್ ಮತ್ತು ಸಾಂವಸಗಿ ಗ್ರಾ.ಪಂಗೆ ಸೇರಿದ ತಲಾ ಒಂದು ಸ್ಥಾನಕ್ಕೆ ಶನಿವಾರ ನಡೆದ ಉಪ ಚುನಾವಣೆಯ ಮತ ಎಣಿಕೆ ಮಂಗಳವಾರ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ಣಗೊಂಡು ಫಲಿತಾಂಶ ಘೊಷಣೆಯಾಯಿತು.

ಹಾನಗಲ್ಲ: ತಾಲೂಕಿನ ನರೇಗಲ್ ಮತ್ತು ಸಾಂವಸಗಿ ಗ್ರಾ.ಪಂಗೆ ಸೇರಿದ ತಲಾ ಒಂದು ಸ್ಥಾನಕ್ಕೆ ಶನಿವಾರ ನಡೆದ ಉಪ ಚುನಾವಣೆಯ ಮತ ಎಣಿಕೆ ಮಂಗಳವಾರ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ಣಗೊಂಡು ಫಲಿತಾಂಶ ಘೊಷಣೆಯಾಯಿತು.ನರೇಗಲ್ ಗ್ರಾಪಂ ವ್ಯಾಪ್ತಿಯ ವರ್ದಿ ಗ್ರಾಮದ ೨ನೇ ವಾರ್ಡ್ ಮತ್ತು ಸಾಂವಸಗಿ ಗ್ರಾಪಂ ವ್ಯಾಪ್ತಿಯ ಕಾಡಶೆಟ್ಟಿಹಳ್ಳಿ ಗ್ರಾಮದ ೧ನೇ ವಾರ್ಡ್ ಸದಸ್ಯ ಸ್ಥಾನ ತೆರವಾಗಿದ್ದ ಕಾರಣಕ್ಕಾಗಿ ನ. ೨೩ರಂದು ಚುನಾವಣೆ ನಡೆದಿತ್ತು.ವರ್ದಿ ಗ್ರಾಮದ ೨ನೇ ವಾರ್ಡ್ ಚುನಾವಣೆಗೆ ಫಕ್ಕೀರಪ್ಪ ಅಗಸಿಬಾಗಿಲ ಮತ್ತು ಕೋಟೆಪ್ಪ ದೊಡ್ಡಯಲ್ಲಪ್ಪನವರ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.ವಿಜೇತ ಅಭ್ಯರ್ಥಿ ಫಕ್ಕೀರಪ್ಪ ಅಗಸಿಬಾಗಲಿ (೪೫೧ ಮತಗಳು) ಅವರಿಗೆ ಚುನಾವಣಾಧಿಕಾರಿ ಮಂಜುನಾಥ ನಾಯಕ ಅವರು ಪ್ರಮಾಣಪತ್ರ ವಿತರಿಸಿದರು. ಈ ವಾರ್ಡ್‌ನಲ್ಲಿ ಒಟ್ಟು ೧೧೯೫ ಮತಗಳಿದ್ದು, ೮೫೮ ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ೩೭ ಮತಗಳು ತಿರಸ್ಕೃತಗೊಂಡಿವೆ ಎಂದು ಮಂಜುನಾಥ ನಾಯಕ ತಿಳಿಸಿದ್ದಾರೆ. ಕಾಡಶೆಟ್ಟಿಹಳ್ಳಿ ಗ್ರಾಮದ ವಾರ್ಡ್ ೧ರ ಚುನಾವಣೆಗೆ ಕುಮಾರಯ್ಯ ಚಂದ್ರಯ್ಯ ಚಿಕ್ಕಮಠ ಮತ್ತು ಅಶೋಕ ಹಲಸೂರ ಇವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಫಲಿತಾಂಶದ ಬಳಿಕ ಚುನಾವಣಾಧಿಕಾರಿ ಸದಾನಂದಗೌಡ ಅವರು ವಿಜೇತ ಅಭ್ಯರ್ಥಿ ಕುಮಾರಯ್ಯ ಚಿಕ್ಕಮಠ (೩೪೯ ಮತಗಳು) ಅವರಿಗೆ ಪ್ರಮಾಣಪತ್ರ ವಿತರಿಸಿದರು.ಇಲ್ಲಿ ಒಟ್ಟು ೮೪೨ ಮತಗಳು ಇದ್ದು, ೫೯೯ ಮತಗಳು ಚಲಾವಣೆಗೊಂಡಿದ್ದವು. ಇವುಗಳಲ್ಲಿ ೧೧ ಮತಗಳು ತಿರಸ್ಕೃತಗೊಂಡಿವೆ ಎಂದು ಸದಾನಂದಗೌಡ ತಿಳಿಸಿದ್ದಾರೆ.ಸಂಭ್ರಮ: ಫಲಿತಾಶ ಹೊರ ಬೀಳುತ್ತಿದ್ದಂತೆ ವಿಜೇತರ ಬೆಂಬಲಿಗರು ಪರಸ್ಪರ ಬಣ್ಣ ಹಚ್ಚಿಕೊಂಡು ಸಿಹಿ ವಿತರಿಸಿ ಸಂಭ್ರಮಿಸಿದರು. ಕಾಡಶೆಟ್ಟಿಹಳ್ಳಿ ಗ್ರಾಮದ ವಿಜೇತ ಅಭ್ಯರ್ಥಿ ಕುಮಾರಯ್ಯ ಚಿಕ್ಕಮಠ ಮಾತನಾಡಿ, ನನ್ನ ಮೇಲೆ ಭರವಸೆ ಇಟ್ಟು ಮತದಾರರು ಬೆಂಬಲಿಸಿದ್ದಾರೆ. ಅವರ ನಂಬಿಕೆ ಹುಸಿಯಾಗದಂತೆ ಕೆಲಸ ಮಾಡುತ್ತೇನೆ ಎಂದರು.ಬಿಜೆಪಿ ತಾಲೂಕು ಘಟಕದ ಉಪಾಧ್ಯಕ್ಷ ಪಂಚಾಕ್ಷರಿಗೌಡ ಪಾಟೀಲ, ಗ್ರಾಪಂ ಸದಸ್ಯರಾದ ಬಸವರಾಜ ಅಗಸನಹಳ್ಳಿ, ಚಂದ್ರಶೇಖರ ದೊಡ್ಡಮನಿ ಮತ್ತು ಪ್ರಮುಖರಾದ ಶಿವಕುಮಾರಗೌಡ ಪಾಟೀಲ, ವೀರಣ್ಣ ದೊಡ್ಡಮನಿ, ಮಲ್ಲಿಕಾರ್ಜುನಸ್ವಾಮಿ ಚಿಕ್ಕಮಠ, ಸಂಗಪ್ಪ ಹುಣಸಿಕಟ್ಟಿ, ಪುಟ್ಟರಾಜ ಜಮಾಜಿ, ಸಿದ್ಧು ಅಜಗುಂಡಿ, ಶಿವಯ್ಯ ಚಿಕ್ಕಮಠ ಇದ್ದರು.