ಆಲೂರು ತಾಲ್ಲೂಕಿಗೆ ಎರಡು ನಿರ್ದೇಶಕ ಸ್ಥಾನ ನೀಡಿದ್ದು ಕಬ್ಬಿನಹಳ್ಳಿ ಜಗದೀಶ್ ಸಹಕಾರ ಕ್ಷೇತ್ರದಲ್ಲಿ 4 ಬಾರಿ ನಿರ್ದೇಶಕರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಮಂಜೇಗೌಡ ಅವರು ಎರಡು ಬಾರಿ ನಿರ್ದೇಶಕರಗಿದ್ದಾರೆ. ಹಾಗಾಗಿ ಇಬ್ಬರು ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಹಕಾರಿ ಕ್ಷೇತ್ರದಲ್ಲಿ ಆಲೂರು ಸಕಲೇಶಪುರದ ರೈತರಿಗೆ ಅನುಕೂಲವಾಗಲಿದೆ.
ಕನ್ನಡಪ್ರಭವಾರ್ತೆ, ಆಲೂರು
ಸಹಕಾರ ಸಂಘಗಳು ಮತ್ತು ಸಂಘ ಸಂಸ್ಥೆಗಳಲ್ಲಿ ರೈತರು ಮತ್ತು ಸಾರ್ವಜನಿಕರು ನಂಬಿಕೆಯಿಂದ ಆರ್ಥಿಕ ವ್ಯವಹಾರ ಮಾಡಿದಾಗ ಮಾತ್ರ ಅಂತಹ ಸಹಕಾರ ಸಂಘಗಳ ಏಳಿಗೆ ಸಾಧ್ಯವಾಗಲಿದೆ ಎಂದು ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಎಚ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಅಭಿಪ್ರಾಯಪಟ್ಟರು.ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 75ನೇ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ 2025-26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಕಲುಷಿತ ರಾಜಕಾರಣದಲ್ಲಿ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ಪುಣ್ಯ. ಸಹಕಾರ ಸಂಘ ಹಾಗೂ ಗ್ರಾಹಕರ ನಡುವಿನ ಬಾಂಧವ್ಯ ವೃದ್ಧಿ ಅತ್ಯಂತ ಪ್ರಮುಖವಾದದ್ದು. ಆಡಳಿತ ಮಂಡಳಿ ಬಗ್ಗೆ ಅಪನಂಬಿಕೆ ಇರಬಾರದು. ಸಹಕಾರ ಸಂಘದ ಸಭೆಯಲ್ಲಿ ಬೇಡವಾದುದನ್ನು ಪ್ರಶ್ನಿಸಿ ಸಭೆ ದಿದ್ದು ಬದಲಿಸುವುದು ಎಷ್ಟು ಸರಿ? 15 ವರ್ಷಗಳ ಹಿಂದೆ ಇದ್ದ ನಮ್ಮ ಸಹಕಾರ ಸಂಘ ಇಂದು ಹೇಗೆ ವೃದ್ಧಿಯಾಗಿದೆ ಎಂದು ಅರ್ಥೈಸಿಕೊಳ್ಳಬೇಕು. ನಾನು ಎಚ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕನಾದ ನಂತರ ಆಲೂರು-ಸಕಲೇಶಪುರ ತಾಲೂಕುಗಳಲ್ಲಿ ಸಹಸ್ರಾರು ರೈತರಿಗೆ ಕೊಟ್ಯಂತರ ರು. ಸಾಲ ಕೊಡಿಸುವ ಮೂಲಕ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು. ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಬಿದರಕೆರೆ ಜಯರಾಮ್ ಮಾತನಾಡಿ, ಆಲೂರು ತಾಲ್ಲೂಕಿಗೆ ಎರಡು ನಿರ್ದೇಶಕ ಸ್ಥಾನ ನೀಡಿದ್ದು ಕಬ್ಬಿನಹಳ್ಳಿ ಜಗದೀಶ್ ಸಹಕಾರ ಕ್ಷೇತ್ರದಲ್ಲಿ 4 ಬಾರಿ ನಿರ್ದೇಶಕರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಮಂಜೇಗೌಡ ಅವರು ಎರಡು ಬಾರಿ ನಿರ್ದೇಶಕರಗಿದ್ದಾರೆ. ಹಾಗಾಗಿ ಇಬ್ಬರು ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಹಕಾರಿ ಕ್ಷೇತ್ರದಲ್ಲಿ ಆಲೂರು ಸಕಲೇಶಪುರದ ರೈತರಿಗೆ ಅನುಕೂಲವಾಗಲಿದೆ 2010-11 ರಲ್ಲಿ ತಾಲ್ಲೂಕಿನ 5800 ರೈತರಿಗೆ 13 ಕೋಟಿ ರೂ. ಸಾಲ ನೀಡಲಾಗಿದ್ದ ಪ್ರಸ್ತುತ 18 ಸಾವಿರ ರೈತರಿಗೆ ಇಂದು 137 ಕೋಟಿ ಸಾಲ ವಿತರಿಸಲಾಗಿದೆ ಎಂದರು. ಇದೆ ಸಂದರ್ಭದಲ್ಲಿ ಸಂಘದ ಶ್ರೇಯಸ್ಸಿಗೆ ಶ್ರಮಿಸಿದ ಮಾಜಿ ಅಧ್ಯಕ್ಷರು, ಸಿಬ್ಬಂದಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಿಡಿಒ ಎಂ.ಸಿ. ಶಕುಂತಲಾ, ಉಪಾಧ್ಯಕ್ಷ ಚಂದ್ರಶೆಟ್ಟಿ, ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಮಾಜಿ ಅಧ್ಯಕ್ಷ ಎಸ್.ಎನ್. ಪ್ರಕಾಶ್, ನಿರ್ದೇಶಕ ಪ್ರವೀಣ್, ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ರುದ್ರೇಗೌಡ, ಪುಟ್ಟರಾಜೇಗೌಡ, ಆರ್.ಎಸ್. ನಟರಾಜು, ಶ್ರೀನಿವಾಸ್, ಸಿ.ಡಿ. ಅಶೋಕ್, ತೌಫಿಕ್, ಶಿವಣ್ಣ,ಆನಂದ್, ದೇವರಾಜ್, ಪವಿತ್ರಜಗದೀಶ್,ಆಶಾ, ಮೋಹನ್ ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಸರ್ಕಾರಿ ಪದನಿಮಿತ್ತ ನಿರ್ದೇಶಕರು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಚಂದ್ರಶೆಟ್ಟಿ, ರುದ್ರೇಗೌಡ, ಪುಟ್ಟರಾಜೇಗೌಡ, ಆರ್. ಎಸ್. ನಟರಾಜು, ಸಿ. ಎಂ. ಶ್ರಿನಿವಾಸ್, ಸಿ. ಖ. ಅಶೋಕ, ಶಿವಣ್ಣ, ಎಚ್. ಬಿ. ಆನಂದ್, ದೇವರಾಜು, ಕೆ. ಕೆ. ಪವಿತ್ರ, ಎಚ್. ಟಿ. ಆಶಾ, ಮೋಹನಕುಮಾರ್ ಭಾಗವಹಿಸಿದ್ದರು.