ಯಶಸ್ಸಿನ ಹಾದಿಗೆ ಕಠಿಣ ಪರಿಶ್ರಮ ಅಗತ್ಯ

| Published : Mar 15 2024, 01:18 AM IST

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ನಿರಂತರ ಪರಿಶ್ರಮದ ಸಾಧನೆಯು ಉನ್ನತ ಮಟ್ಟಕ್ಕೆ ಸಾಗಲು ಅಧ್ಯಯನ ಶೀಲತೆ ಅತ್ಯಂತ ಹೆಚ್ಚು ಅಗತ್ಯ ಎಂದು ಡಾ.ಧರ್ಮಪ್ರಸಾದ್ ತಿಳಿಸಿದರು.

ಕನ್ನಡಪ್ರಭವಾರ್ತೆ ಯಳಂದೂರು

ವಿದ್ಯಾರ್ಥಿ ಜೀವನದಲ್ಲಿ ನಿರಂತರ ಪರಿಶ್ರಮದ ಸಾಧನೆಯು ಉನ್ನತ ಮಟ್ಟಕ್ಕೆ ಸಾಗಲು ಅಧ್ಯಯನ ಶೀಲತೆ ಅತ್ಯಂತ ಹೆಚ್ಚು ಅಗತ್ಯ ಎಂದು ಡಾ.ಧರ್ಮಪ್ರಸಾದ್ ತಿಳಿಸಿದರು.ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹೆಚ್ಚು ಪ್ರತಿಭಾವಂತರಿದ್ದು ಸೂಕ್ತವಾದ ಅವಕಾಶಗಳನ್ನು ಗಿಟ್ಟಿಸಿಕೊಂಡರೆ ತಾವು ಆಯ್ಕೆ ಮಾಡಿಕೊಂಡ ಆಸಕ್ತಿವುಳ್ಳ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ಬೆಂಗಳೂರಿನ ನಿಮಾನ್ಸ್ ವೈದ್ಯರಾದ ಡಾ.ಸಾಹಿರಾಬಾನು ಜೀವನದಲ್ಲಿ ನಿರಂತರ ಕಲಿಕಾರ್ಥಿಯಾಗಿರಬೇಕು. ಗುರು ಹಿರಿಯರಿಗೆ ವಿದೇಯರಾಗಿ ಜೀವನ ಮಾರ್ಗವನ್ನು ಉತ್ತಮ ರೀತಿಯಲ್ಲಿ ರೂಢಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು ಮೊಬೈಲ್ ದಾಸರಾಗುತ್ತಿರುವುದು ಆತಂಕದ ವಿಷಯವಾಗಿದೆ. ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವ ಮೂಲಕ ಅದರಲ್ಲಿರುವ ತಿರುಳನ್ನು ಅರ್ಥೈಸಿಕೊಂಡು ಕ್ರಮ ಬದ್ಧ ಅಧ್ಯಯನ ಮಾಡುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ 9ನೇ ತರಗತಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪುಟಾಣಿ ವಿದ್ಯಾರ್ಥಿಗಳ ನಡೆಸಿಕೊಟ್ಟ ಭರತನಾಟ್ಯ ನೋಡುಗರ ಮೆಚ್ಚುಗೆ ಗಳಿಸಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥಾಪಕ ವೀರಭದ್ರಪ್ಪ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯು ತಾಲೂಕು, ಜಿಲ್ಲಾ ಮಟ್ಟದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಶಿಕ್ಷಕರು, ವಿದ್ಯಾರ್ಥಿಗಳ ಶ್ರಮದೊಂದಿಗೆ ಪೋಷಕರ ಸಹಕಾರವೂ ಆಗಾಧವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ನವೀನ್, ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸದಸ್ಯರಾದ ಪ್ರಮೀಳ ಗುರುಪ್ರಸಾದ್, ಗೌರಮ್ಮ ಮಹದೇವಸ್ವಾಮಿ, ಐಟಿಐ. ಪ್ರಾಂಶುಪಾಲ ವಿಖ್ಯಾತ್, ಮುಖ್ಯಶಿಕ್ಷಕ ವೀರಭದ್ರಸ್ವಾಮಿ, ಶಿಕ್ಷಕರಾದ ಗುಂಬಳ್ಳಿ ಬಸವರಾಜ್, ಶಿವಮೂರ್ತಿ, ಮಲ್ಲಿಕಾರ್ಜುನ ಸ್ವಾಮಿ, ಮಂಜುನಾಥ್, ನಾಗರಾಜ್, ಜಬಿನ್ ತಾಜ್, ನಂದಿನಿ, ರೂಪ, ಪುನೀತ್, ಪ್ರಕಾಶ್, ನೀಲಾಂಬರಿ, ಮಾದಲಾಂಬಿಕೆ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಇದ್ದರು.