ಸಿಎಂ ಗಡುವು ಮುಗಿದರೂ ಗುಂಡಿ ಮುಕ್ತ ಆಗದ ನಗರದ ರಸ್ತೆಗಳು!

| Published : Jun 02 2024, 01:46 AM IST / Updated: Jun 02 2024, 05:19 AM IST

ಸಿಎಂ ಗಡುವು ಮುಗಿದರೂ ಗುಂಡಿ ಮುಕ್ತ ಆಗದ ನಗರದ ರಸ್ತೆಗಳು!
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳುರು ನಗರದಲ್ಲಿ ಮಳೆಯಿಂದಾಗಿ ರಸ್ತೆಯ ಗುಂಡಿಬಿದ್ದಿದ್ದು, ನಗರದಲ್ಲಿ ಇನ್ನೂ 3,870 ರಸ್ತೆ ಗುಂಡಿಗಳು ಮುಚ್ಚುವುದು ಬಾಕಿ ಇದೆ.

 ಬೆಂಗಳೂರು :  ಮುಖ್ಯಮಂತ್ರಿಗಳು ನೀಡಿದ ಗಡುವು ಮುಗಿದರೂ ನಗರದ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ನಗರದಲ್ಲಿ ಇನ್ನೂ 3,870 ರಸ್ತೆ ಗುಂಡಿಗಳು ಮುಚ್ಚುವುದು ಬಾಕಿ ಇದೆ.

ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ವೇಳೆಯಲ್ಲಿ ಮೇ 31ರ ಒಳಗಾಗಿ ನಗರದ ರಸ್ತೆ ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಗಡುವು ಶುಕ್ರವಾರಕ್ಕೆ ಮುಕ್ತಾಯಗೊಂಡಿದೆ. ಆದರೆ, ನಗರದ ರಸ್ತೆಗಳು ಮಾತ್ರ ಗುಂಡಿ ಮುಕ್ತವಾಗಿಲ್ಲ.

ಬಿಬಿಎಂಪಿ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಈವರೆಗೆ ನಗರದಲ್ಲಿ 6,915 ರಸ್ತೆ ಗುಂಡಿ ಪತ್ತೆ ಮಾಡಲಾಗಿದೆ. ಮುಖ್ಯಮಂತ್ರಿ ಗಡುವು ನೀಡಿದ ನಂತರ ಹೊಸದಾಗಿ 1,500 ರಸ್ತೆ ಗುಂಡಿ ಪತ್ತೆಯಾಗಿವೆ. ಈವರೆಗೆ ಒಟ್ಟು 3,225 ರಸ್ತೆ ಗುಂಡಿ ಮುಚ್ಚಲಾಗಿದೆ. ಇನ್ನೂ 3,870 ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಮುಖ್ಯಮಂತ್ರಿ ಗಡುವು ನೀಡಿದ ಬಳಿಕ ರಸ್ತೆ ಗುಂಡಿ ಮುಚ್ಚುವುದಕ್ಕೆ ವಲಯ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಗುಂಡಿ ಮುಚ್ಚುವುದರೊಂದಿಗೆ ಹೊಸದಾಗಿ ಸೃಷ್ಟಿಯಾದ ಗುಂಡಿಗಳನ್ನು ಸರ್ವೆ ಮಾಡಲಾಗುತ್ತಿದೆ.

ರಾಜರಾಜೇಶ್ವರಿನಗರ ಮತ್ತು ದಾಸರಹಳ್ಳಿ ವಲಯದಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಗುಂಡಿ ಇರುವುದರಿಂದ ಜೂ.4ರವರೆಗೆ ಅವರಿಗೆ ಗಡುವು ನೀಡಲಾಗಿದೆ. ಎರಡನ್ಮೂರು ದಿನದಲ್ಲಿ ಅಲ್ಲಿಯೂ ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಒಂದೂ ಗುಂಡಿ ಮುಚ್ಚದ 7 ವಿಧಾನಸಭಾ ಕ್ಷೇತ್ರ

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ವಿಧಾನಸಭಾ ಕ್ಷೇತ್ರಗಳಾದ ಬಸವನಗುಡಿ, ಕೆ.ಆರ್‌.ಪುರ, ಚಿಕ್ಕಪೇಟೆ, ಜಯನಗರ,

ಬಿಟಿಎಂ, ವಿಜಯನಗರ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಲಾದ ಬೆರಳೆಣಿಯಷ್ಟು ಗುಂಡಿಗಳ ಪೈಕಿ ಒಂದೇ ಒಂದು ಗುಂಡಿಯನ್ನು ಮುಚ್ಚಿಲ್ಲ. ಇನ್ನು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ 72 ಗುಂಡಿ ಪತ್ತೆ ಮಾಡಲಾಗಿದೆ. ಈ ಪೈಕಿ ಒಂದೇ ಒಂದು ಗುಂಡಿ ಮುಚ್ಚಲಾಗಿದೆ. ಉಳಿದಂತೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ರಸ್ತೆಗಳಲ್ಲಿ ಗುಂಡಿಗಳು ಇಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ರಸ್ತೆ ಗುಂಡಿ ಸಂಖ್ಯೆ ವಿಧಾನಸಭಾ ಕ್ಷೇತ್ರಪತ್ತೆ ಆದ ಗುಂಡಿಮುಚ್ಚಬೇಕಾದ ಗುಂಡಿಬೊಮ್ಮನಹಳ್ಳಿ197177ಬೆಂಗಳೂರು ದಕ್ಷಿಣ484470ದಾಸರಹಳ್ಳಿ2,7501,020

ಶಿವಾಜಿನಗರ2010

ಸರ್ವಜ್ಞನಗರ5228ಪುಲಕೇಶಿನಗರ26496ಶಾಂತಿನಗರ80

ಹೆಬ್ಬಾಳ100

ಸಿ.ವಿ.ರಾಮನ್‌ನಗರ3712ಕೆ.ಆರ್‌.ಪುರ3434ಮಹದೇವಪುರ12816

ಆರ್‌.ಆರ್‌.ನಗರ1184554

ಯಶವಂತಪುರ966768ಬಸವನಗುಡಿ3737ಚಿಕ್ಕಪೇಟೆ5252

ಜಯನಗರ5454

ಬಿಟಿಎಂ2323

ಪದ್ಮನಾಭನಗರ7271

ವಿಜಯನಗರ140140

ಗಾಂಧಿನಗರ1010ಮಹಾಲಕ್ಷ್ಮಿ ಲೇಔಟ್‌118108ರಾಜಾಜಿನಗರ167ಗೋವಿಂದರಾಜನಗರ13361

ಚಾಮರಾಜಪೇಟೆ5144

ಮಲ್ಲೇಶ್ವರ9062ಯಲಹಂಕ4014ಬ್ಯಾಟರಾಯನಪುರ00

ಒಟ್ಟು6,9153,870