ಸಾರಾಂಶ
ಜೀವನದ ಯಶಸ್ಸಿಗೆ ಗುರುವಿನ ಪಾತ್ರ ಮಹತ್ವವಾದದ್ದು ಎಂದು ಗಿರೀಶ ನಾಯಕ ಅಭಿಪ್ರಾಯಪಟ್ಟರು.
ಅಂಕೋಲಾ: ಜೀವನದ ಯಶಸ್ಸಿಗೆ ಗುರುವಿನ ಪಾತ್ರ ಮಹತ್ವವಾದದ್ದು ಎಂದು ಗಿರೀಶ ನಾಯಕ ಅಭಿಪ್ರಾಯಪಟ್ಟರು.
ಅವರು ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಯುವ ಭಾರತ್, ಕಿಸಾನ್ ಯೋಗ ಸಮಿತಿ, ಪತಂಜಲಿ ಮಹಿಳಾ ಯೋಗ ಸಮಿತಿ ಆಶ್ರಯದಲ್ಲಿ ಗುರುವಾರ ನಡೆದ ಗುರು ಪೂರ್ಣಿಮಾ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.ಶಿಕ್ಷಕನಾದವನು ಕೇವಲ ಪುಸ್ತಕಕ್ಕೆ ಸೀಮಿತವಾದ ಶಿಕ್ಷಣ ಮಾತ್ರವಲ್ಲದೇ ಬದುಕು ನಡೆಸಲು ಅಗತ್ಯವಿರುವ ಶಿಕ್ಷಣ ನೀಡಿ ಗುರುವಾಗಬೇಕು ಎಂದರು.
ಈ ವೇಳೆ ಅತಿಥಿಗಳಾಗಿ ಆಗಮಿಸಿದ್ದ ಮಂಜುನಾಥ ಇಟಗಿ ಗುರುವಿನ ಮಹತ್ವವನ್ನು ತಿಳಿಸಿದರು.ಗಿರೀಶ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತಂಜಲಿ ಸಮಿತಿಯ ಪ್ರಭಾರಿ ವಿನಾಯಕ ಗುಡಿಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾರತ ಸ್ವಾಭಿಮಾನ್ ಟ್ರಸ್ಟ್ ನ ಪ್ರಭಾರ ಡಾ.ವಿಜಯದೀಪ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಯುವ ಭಾರತದ ಪ್ರಭಾರಿ ಸತೀಶ ನಾಯ್ಕ ಹಾಗೂ ಜಿಲ್ಲಾ ಸಂವಾದ ಪ್ರಭಾರಿ ರಾಧಿಕಾ ಆಚಾರಿ ಇದ್ದರು.
ಕಿಸಾನ್ ಸಮಿತಿ ಪ್ರಭಾರಿ ಅಭಯ ಮರಬಳ್ಳಿ, ಪತಂಜಲಿ ಸಾಮಾಜಿಕ ಮಾಧ್ಯಮದ ಪ್ರಭಾರಿ ನಿರುಪಮಾ ಶ್ಯಾಮಸುಂದರ, ಕಾರ್ಯದರ್ಶಿ ವಿ. ಕೆ. ನಾಯರ್ ಇದ್ದರು.ಕಾರ್ಯಕ್ರಮವು ಅಗ್ನಿಹೋತ್ರ ಹವನದೊಂದಿಗೆ ಪ್ರಾರಂಭವಾಯಿತು. ಸಿಂಚನಾ ಕುರ್ಡೇಕರ್ ಪ್ರಾರ್ಥಿಸಿದರು. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಎಚ್.ಕೆ. ನಾಯ್ಕ ವಂದಿಸಿದರು. ಸಿಂಚನಾ ಗೌಡ ಕಾರ್ಯಕ್ರಮ ನಿರ್ವಹಿಸಿದರು.