ಸಾರಾಂಶ
ನರಗುಂದ: ''''ಕೌಶಲ್ಯಂ ಬಲಂ'''' ಎಂಬ ಮಾತಿನಂತೆ ದೇಶದ ಬಲ ಹೆಚ್ಚಿಸುವಲ್ಲಿ ಐಟಿಐಗಳು ಮಹತ್ತರ ಪಾತ್ರ ವಹಿಸಿವೆ. ವಿಶ್ವದಾದ್ಯಂತ ಕಾಯಕ ಯೋಗಿಗಳನ್ನು ನಿರ್ಮಾಣ ಮಾಡುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳ ಕೆಲಸ ಶ್ಲಾಘನೀಯವಾದದ್ದು ಎಂದು ಭೈರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠದ ಹಾಗೂ ಶಿರೋಳ ತೋಂಟದಾರ್ಯಮಠದ ಶಾಂತಲಿಂಗ ಶ್ರೀಗಳು ಹೇಳಿದರು. ಅವರು ಬುಧವಾರ ತಾಲೂಕಿನ ಶಿರೋಳ ಗ್ರಾಮದ ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ 2025ನೇ ಸಾಲಿನ ಘಟಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಅಪ್ರೆಂಟಿಸ್ ಸಂದರ್ಶನ ಮತ್ತು ವಿಶ್ವಕರ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕಾರ್ಖಾನೆಗಳ ಪಾತ್ರ ಪ್ರಮುಖವಾಗಿದೆ. ''''ಕೈ ಕೆಸರಾದರೆ ಬಾಯಿ ಮೊಸರು'''' ಎಂಬ ನಾಣ್ಣುಡಿ ದುಡಿಯುವ ಶ್ರಮಿಕ ವರ್ಗಕ್ಕೆ ಸಂಪೂರ್ಣವಾಗಿ ಅನ್ವರ್ಥಕವಾ ಗಿದೆ. ಶ್ರಮಿಕ ವರ್ಗವನ್ನು ನಿರ್ಮಾಣ ಮಾಡುತ್ತಿರುವ ಐಟಿಐಗಳ ಕಾರ್ಯ ಮಹತ್ವದ್ದಾಗಿದೆ ಎಂದರು.
ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಉತ್ತಮ ತರಬೇತಿ ನೀಡಿ, ಜೊತೆಗೆ ತರಬೇತುದಾರರಿಗೆ ಉದ್ಯೋಗ ನೀಡುವ ಅಪ್ರೆಂಟಿಸ್ ಸಂದರ್ಶನ ಏರ್ಪಡಿಸುತ್ತಿರುವುದು ತೋಂಟದಾರ್ಯ ವಿದ್ಯಾಪೀಠದ ಹೆಮ್ಮೆ ಎಂದರು.ವಿಶ್ವವೇ ವಿಶ್ವಕರ್ಮರಿಂದ ನಿರ್ಮಾಣವಾಯಿತು ಎಂದು ಪ್ರತೀತಿ ಇದೆ. ಆ ಪರಂಪರೆಯಲ್ಲಿ ಆಗಿ ಹೋದ ನವಲಗುಂದ ಅಜಾತ ನಾಗಲಿಂಗ ಸ್ವಾಮಿಗಳು, ತಿಂತಣಿ ಮೌನೇಶ್ವರರು ಯಚ್ಚರಸ್ವಾಮಿಗಳು, ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. 12ನೇ ಶತಮಾನದಲ್ಲಿ ವಿಶ್ವಕರ್ಮ ಕುಲದಲ್ಲಿ ಹುಟ್ಟಿದ ಲಿಂಗಮ್ಮ ಎಂಬ ಹೆಣ್ಣುಮಗಳು, ಶರಣ ಧರ್ಮ ಸ್ವೀಕರಿಸಿ ದಾನ-ಧರ್ಮ ಮಾಡುವ ಮೂಲಕ ಮಹಾದಾನಿ ಗುಡ್ಡಾಪುರದ ದಾನಮ್ಮದೇವಿಯು ವಿಶ್ವಕರ್ಮ ಸಮಾಜದ ಹೆಮ್ಮೆ ಎನ್ನುವದು ಸತ್ಯ, ಹೀಗೆ ಕಾಯಕದ ಶರಣರನ್ನು ಇಂದಿಗೂ ಆಯಾ ಸಮಾಜಗಳು ಗುರುತಿಸಿಕೊಂಡಿರುವದು ಬಸವಣ್ಣನ ಸಮ ಸಮಾಜ ನಿರ್ಮಾಣಕ್ಕೆ ನಿದರ್ಶನಗಳಾಗಿವೆ ಎಂದರು. ಬೆಂಗಳೂರಿನ ಹಿರೋ ಮೋಟಾರ ಸೈಕಲ್ ಪ್ರೈವೇಟ್ ಲಿಮಿಟೆಡ್ ಅಧಿಕಾರಿ ಲಖನ ಎಂ., ಡಾ. ರೆಡ್ಡಿ ಫೌಂಡೇಶನ್ ಕುಮಾರ ಎನ್. ಅವರನ್ನು ಶ್ರೀ ಮಠದಿಂದ ಸನ್ಮಾನಿಸಲಾಯಿತು.ಒಟ್ಟು 48 ತರಬೇತುದಾರರು ಅಪ್ರೆಂಟಿಸ್ ಸಂದರ್ಶನದಲ್ಲಿ ಭಾಗಿಗಳಾಗಿದ್ದರು. ೪೫ ತರಬೇತುದಾರರಿಗೆ ಉದ್ಯೋಗ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ತರಬೇತುದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ಮತ್ತು ಹೆಚ್ಚು ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು,
ದಾನಿಗಳಾದ ಎಲ್ ಆಯ್ ಸಿ ಪ್ರತಿನಿಧಿ ಬಸವರಾಜ ಗೊಜನೂರ ಮತ್ತು ಲಾಲಸಾಬ ಅರಗಂಜಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪ್ರಾಚಾರ್ಯ ಬಸವರಾಜ ಸಾಲಿಮಠ, ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ಲೋಕಪ್ಪ ಕರಕೀಕಟ್ಟಿ, ದ್ಯಾಮಣ್ಣ ಕಾಡಪ್ಪನವರ, ಶಿವು ಯಲಿಬಳಿ, ಗುರಬಸಯ್ಯ ನಾಗಲೋಟಿಮಠ, ಮುಖ್ಯೋಪಾಧ್ಯಾಯ ಎಸ್.ವಿ. ವಸ್ತ್ರದ, ಈರಣ್ಣ ಸೋನಾರ, ಸಂಸ್ಥೆಯ ಪ್ಲೇಸ್ಮೆಂಟ ಆಫೀಸರ್ ಶಂಕರಪ್ಪ ಕುಪ್ಪಸ್ತ, ಸಿಬ್ಬಂದಿ ಶ್ರೀಧರ ಬೇವಿನಕಟ್ಟಿ, ವೀರನಗೌಡ, ಸೋಮಶೇಖರಪ್ಪ ಗೊರವರ, ಪ್ರಭುಲಿಂಗ ಶಿರಿಯಣ್ಣವರ, ಭೂಪತಿರಾಜ ಧೋತರದ, ಕಾಳಮ್ಮ ಕಮ್ಮಾರ, ಪ್ರೀತಿ ಚಿಕ್ಕಮಠ, ಚಂದ್ರಕಾಂತ ಕಾಡದೇವರಮಠ, ಶಿವಾನಂದ ಪೂಜಾರ ಇದ್ದರು.
ಮಲ್ಲಪ್ಪ ಸಂಗಳದ ಸ್ವಾಗತಿಸಿದರು. ಶ್ರೀಕಾಂತ ದೊಡಮನಿ ಕಾರ್ಯಕ್ರಮ ನಿರೂಪಿಸಿದರು.