ಸಾರಾಂಶ
ಸಾಹಿತಿ ಲಕ್ಷ್ಮೀ ಶಾಮರಾವ್ ಮಾಳತ್ನರ್, ಎಸ್. ಪೂರ್ಣಿಮಾ ಬಾಬು ಶಿರಾ ಪುಸ್ತಕ ಬಿಡುಗಡೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾಷೆ ಸ್ವಾಧೀನ ಹೆಚ್ಚಿಸುವ ಸಾಹಿತ್ಯ ವಿಮರ್ಶಾತ್ಮಕ ಕೌಶಲ್ಯವನ್ನು ಅಭಿವೃದ್ಧಿಪಡಿಸಿ, ವೈವಿಧ್ಯಮಯ ದೃಷ್ಟಿ ಕೋನ ನೀಡಿ ಸಹಾನುಭೂತಿಯನ್ನು ಉತ್ತೇಜಿಸುವುದು ಹಾಗೂ ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸುವುದರಿಂದ ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯದ ಪಾತ್ರ ಬಹುಮುಖ್ಯವಾದುದು ಎಂದು ಎಐಟಿ ಕಾಲೇಜಿನ ಆಡಳಿತಾಧಿಕಾರಿ ಡಾ. ಸುಬ್ಬರಾಯ ಹೇಳಿದರು.ಅಮೃತೇಶ್ವರ ಪ್ರಕಾಶನ, ನವೀನ್ ಪ್ರಕಾಶನ, ಪೂರ್ಣಿಮಾ ಪ್ರಕಾಶನ, ಬೊಂಗಾಳೆ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಲಕ್ಷ್ಮೀ ಶಾಮರಾವ್ ಮಾಳತ್ನರ್ ಮತ್ತು ಎಸ್. ಪೂರ್ಣಿಮಾ ಬಾಬು ಶಿರಾ ಅವರ ಕೃತಿಗಳ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಲ್ಪನೆ, ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ಮನರಂಜನೆ ನೀಡುವುದು ಮತ್ತು ಪ್ರೀತಿ, ನ್ಯಾಯ, ಬೋಧನೆ; ಇವೆಲ್ಲವನ್ನೂ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ಅಂತರ್ಗತವಾಗುತ್ತವೆ ಎಂದರು.ಹಿರಿಯ ಪತ್ರಕರ್ತ ಸ. ಗಿರಿಜಾ ಶಂಕರ್ ಕೃತಿಗಳ ವಿಮರ್ಶಿಸಿ ಮಾತನಾಡಿ, ಸಾಹಿತ್ಯ ಸಾಮಾಜಿಕ ತುಮುಲಗಳನ್ನು ಹೊರ ಹಾಕುತ್ತವೆ. ಅಪ್ರಬುದ್ಧತೆಯಿಂದ ಹೊರ ಬರಲು ಸಹಕರಿಸುತ್ತವೆ. ಕನ್ನಡ ಸಾಹಿತ್ಯ ಕನ್ನಡ ಭಾಷೆಯಲ್ಲಿನ ವಿಶಾಲವಾದ ಲಿಖಿತ ಕೃತಿಗಳನ್ನು ಒಳಗೊಂಡಿದೆ. ಕಾವ್ಯ ಮತ್ತು ನಾಟಕಗಳಂತಹ ವೈವಿಧ್ಯಮಯ ಪ್ರಕಾರಗಳ ಮೂಲಕ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬಿಸುತ್ತದೆ. ಕವಿಗಳು, ತತ್ವಜ್ಞಾನಿಗಳು ಮತ್ತು ಸರ್ವಜ್ಞ ವಚನಕಾರರು ಅಪಾರವಾದ ಕೊಡುಗೆ ನೀಡಿದ್ದಾರೆ.ವಚನಗಳು, ಸಾಹಿತ್ಯ ಲೋಕದ ಮೂಲಗಳು, ಶಿವಶರಣರ ವಚನಗಳು ಸಾಮಾಜದಲ್ಲಿ ತಲೆ ದೂರಿದ್ದ ಅಸಮಾನತೆ, ಜಾತಿ ಪದ್ಧತಿ, ವರ್ಣ ಪದ್ಧತಿಗಳಂತ ಅನೇಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸಿದ್ದವು. ಸಾಹಿತ್ಯದಲ್ಲಿ ಯಾವುದೇ ಮೇಲು, ಕೀಳಿಲ್ಲ. ಅವುಗಳ ಅಧ್ಯಯನ ಮನುಷ್ಯನನ್ನು ಅತ್ಯಂತ ಪ್ರಬುದ್ಧ ಗೊಳಿಸುತ್ತವೆ ಎಂದು ಅಭಿಪ್ರಾಯ ಪಟ್ಟರು.ಕನ್ನಡ ಸಾಹಿತ್ಯ ಭಾಷೆಯ ಪ್ರಾಚೀನತೆ, ಅಷ್ಟೇ ವೈಭವ ಹಾಗೂ ಇಡೀ ಕನ್ನಡ ಸಾಹಿತ್ಯದಲ್ಲಿ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಬದುಕು ಹೀಗೆ ಒಟ್ಟಾರೆ ಕನ್ನಡದ ಸಾಂಸ್ಕೃತಿಕ ಜಗತ್ತೇ ಅಡಕಗೊಂಡಿದೆ. ಯುವ ತಲೆಮಾರಿನ ಆಕರ್ಷಕ ಬರಹಗಾರರವರೆಗೂ ವಿಶಿಷ್ಟ ಪರಂಪರೆಯನ್ನೇ ನಿರ್ಮಿಸಿದೆ. ಅಂದಿನಿಂದ ಅನೇಕ ಮಜಲುಗಳನ್ನು ದಾಟಿಕೊಂಡು ಬಂದ ಕನ್ನಡ ಸಾಹಿತ್ಯ ಭಾಷೆ, ಸಂಸ್ಕೃತಿ, ಬದಕನ್ನು ಶ್ರೀಮಂತವಾಗಿಸುವ ಜೊತೆಗೆ ವರ್ತಮಾನದ ಆಗುಹೋಗುಗಳಿಗೆ ಸ್ಪಂದಿ ಸುತ್ತಾ, ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಭೂತಕ್ಕೂ ಭವಿಷ್ಯಕ್ಕೂ ಅವಶ್ಯಕ ಮಾರ್ಗ ರೂಪಿಸಿದೆ ಎಂದರು.ಡಾ. ಅವರೆ ಕಾಡು ವಿಜಯಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಕನ್ನಡ ಭಾಷೆಯಲ್ಲಿ ರಚಿಸಲಾದ ವ್ಯಾಪಕವಾದ ಕೃತಿಗಳ ಸಮೂಹವನ್ನುಉಲ್ಲೇಖಿಸುತ್ತದೆ, ಇದು ನಾಟಕಗಳು, ಕಾವ್ಯ ಮತ್ತು ಕಥೆ ಹೇಳುವಿಕೆಯಂತಹ ವೈವಿಧ್ಯಮಯ ಪ್ರಕಾರಗಳನ್ನು ಒಳಗೊಂಡಿದೆ. ಈ ಸಾಹಿತ್ಯ ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ದಾಖಲಿಸು ವುದಲ್ಲದೆ ವಿವಿಧ ಐತಿಹಾಸಿಕ ಯುಗಗಳ ಮೂಲಕ ವಿಕಸನಗೊಂಡಿದೆ. ಅನೇಕ ಕವಿಗಳು ಮತ್ತು ತತ್ವಜ್ಞಾನಿಗಳ ಕೊಡುಗೆಯ ಸಾಕ್ಷಿಯಾಗಿದೆ. ಪ್ರಸ್ತುತ ಸಮಾಜಕ್ಕೆ ಸಾಹಿತ್ಯದ ಭೋಜನ ಉಣಬಡಿಸುವ ಅವಶ್ಯಕತೆಯಿದೆ. ಮೊಬೈಲ್ ಲೋಕದಲ್ಲಿ ಮುಳುಗಿರುವ ಯುವ ಜನತೆಗೆ ಸಾಹಿತ್ಯದ ಮಹತ್ವ ತಿಳಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ಕೃತಿಗಳ ಕುರಿತು ಮಾಹಿತಿ ನೀಡಿದರು.
ಮಲೆನಾಡು ಕಣ್ಮಣಿ ಪ್ರಶಸ್ತಿಯನ್ನು ಟಿ.ರಾಜಶೇಖರ್, ಬಿ.ಎಂ. ರಘು, ಎಂ.ಎಸ್. ಸುಧೀರ್, ಸುಮ ಪ್ರಸಾದ್, ಕೆ.ಎಂ ಜಯ ಪ್ರಕಾಶ್, ಡಾ.ಅವರೇಕಾಳು ವಿಜಯಕುಮಾರ್, ಆರ್. ನವೀನ್‌ಕುಮಾರ್ ಅವರಿಗೆ ನೀಡಲಾಯಿತು,ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್, ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ. ಜಯದೇವ್, ಹಾಸನ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುಂದ್ರೇಶ್, ಸಾಹಿತಿಗಳಾದ ಲಕ್ಷ್ಮೀ ಶಾಮರಾವ್ ಮಾಳತ್ನರ್ ಮತ್ತು ಎಸ್. ಪೂರ್ಣಿಮಾ ಬಾಬು ಶಿರಾ ಉಪಸ್ಥಿತರಿದ್ದರು. --ಬಾಕ್ಸ್--
ಅನುಭವ ಲೋಕದ ಸಂಕಥನ ಸಾಹಿತ್ಯಸಾಹಿತ್ಯ ಮನುಷ್ಯನ ಬದುಕಿನ ಅನುಭವ ಲೋಕದ ಸಂಕಥನ. ಸಾಹಿತ್ಯ ಪರಂಪರೆಗೆ ಅಸಾಧಾರಣ ಶಕ್ತಿಯಿದೆ ಎಂದು ಮಕ್ಕಳ ತಜ್ಞ ಡಾ.ಜೆ.ಪಿ. ಕೃಷ್ಣೇಗೌಡ ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತ್ಯಂತ ದುರ್ಬಲ ಪದಪುಂಜಗಳು, ವಾಕ್ಯ ಸಮುಚ್ಚಯಗಳು ಸಹಸ್ರಾರು ವರ್ಷಗಳ ಹಿಂದೆ ಬದುಕಿದ್ದ ಕವಿಯ ಭಾವಸ್ಪಂದನವನ್ನೂ ಅಜರಾಮರವಾಗಿಸುತ್ತವೆ. ಇತರ ಶ್ರೀಮಂತ ಜೀವಂತ ಭಾಷೆಗಳಂತೆ ಕನ್ನಡ ಭಾಷೆಗೂ ಕಾಲ ದೇಶ ಪರಿಸರಕ್ಕನುಗುಣವಾಗಿ ರೂಪತಳೆದ ಸತ್ವಯುತ, ಶಕ್ತಿ ಯುತ ಸಾಹಿತ್ಯದ ಪರಂಪರೆಯಿದೆ. ಇವುಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಇತರರಿಗೂ ಮಾದರಿಯಾಗಿರುವ ಯುವ ಸಾಹಿತಿಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.ಪೋಟೋ ಫೈಲ್ ನೇಮ್ 22 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಲಕ್ಷ್ಮೀ ಶಾಮರಾವ್ ಮಾಳತ್ನರ್ ಮತ್ತು ಎಸ್. ಪೂರ್ಣಿಮಾ ಬಾಬು ಶಿರಾ ಅವರ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಡಾ. ಸುಬ್ಬ ರಾಯ, ಡಾ. ಜಯದೇವ್, ಡಾ. ಜೆ.ಪಿ. ಕೃಷ್ಣೇಗೌಡ ಇದ್ದರು.