ಸಾರಾಂಶ
ರಾಣಿಬೆನ್ನೂರು:ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರು, ಮಹಾತ್ಮರ ಪಾತ್ರ ಬಹುಮುಖ್ಯವಾಗಿದೆ ಎಂದು ಸ್ಥಳೀಯ ದೊಡ್ಡಪೇಟೆ ವಿರಕ್ತ ಮಠದ ಗುರುಬಸವ ಮಹಾಸ್ವಾಮಿಗಳು ನುಡಿದರು. ನಗರದ ಮೆಡ್ಲೇರಿ ರಸ್ತೆ ಲಯನ್ಸ್ ಶಾಲೆಯಲ್ಲಿ ಮಂಗಳವಾರ ಸ್ಥಳೀಯ ಲಯನ್ಸ್ ಕ್ಲಬ್ ಹಾಗೂ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ತುಮಕೂರಿನ ಸಿದ್ಧಗಂಗಾಮಠದ ಶಿವಕುಮಾರ ಮಹಾಸ್ವಾಮಿಗಳು ಹಾಗೂ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿಗಳ ಗುರುಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಪ್ರವಚನ ಕೇಳುತ್ತಾ ಜ್ಞಾನಯೋಗಾಶ್ರಮದ ಭಕ್ತರಾಗಿದ್ದ ಸಿದ್ಧೇಶ್ವರ ಮಹಾಸ್ವಾಮಿಗಳು ನಂತರ ನಾಡಿನ ಶ್ರೇಷ್ಠ ವಚನಕಾರರಾದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಅರಕೇರಿ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ ಮಹಾಸ್ವಾಮಿಗಳ ಕುರಿತು ಸಂಜೀವಿನಿ ಕಾಲೇಜಿನ ಉಪನ್ಯಾಸಕ ಪ್ರಭುಲಿಂಗಪ್ಪ ಕೋಡದ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಗುರುಬಸವ ಸ್ವಾಮಿಗಳು, ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಪ್ರಭುಲಿಂಗಪ್ಪ ಕೋಡದ, ಪ್ರಭುಲಿಂಗಪ್ಪ ಹಲಗೇರಿ ಇವರನ್ನು ಸನ್ಮಾನಿಸಲಾಯಿತು.
ವೀರಣ್ಣ, ನಾಗರಾಜ ಕುಲಕರ್ಣಿ, ಅಮೋಘ ಬದಾಮಿ, ಎಲ್. ಜಿ. ಶೆಟ್ರ, ಗುತ್ತೆಪ್ಪ ಹಳೇಮನಿ, ಬಸವರಾಜ ಕುರುಗೋಡಪ್ಪನವರ, ಪವನ ಮಲ್ಲಾಡದ, ಡಾ. ಸಂಜಯ ನಾಯಕ, ಮಧು ಕೋಳಿವಾಡ, ಕಿರಣ ಅಂಗಡಿ, ಕೊಟ್ರೇಶಪ್ಪ ಎಮ್ಮಿ, ಶಿವಕುಮಾರ ಮಾಕನೂರ, ಆರ್.ಎಸ್. ಎಲಿ, ಪ್ರಗತಿ ಬಾರ್ಕಿ, ಎಮ್.ಎಚ್.ಪಾಟೀಲ, ಎಮ್.ಜಿ. ಮಣ್ಣಮ್ಮನವರ, ಜಿ. ಎಮ್. ಬಿದರಿ, ಲಯನ್ಸ್ ಕ್ಲಬ್ ಸದಸ್ಯರು, ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.