ಕನ್ನಡಪ್ರಭ ವಾರ್ತೆ ಹೊಸದುರ್ಗ

ಕನ್ನಡ ಸಾಹಿತ್ಯ ಪರಿಷತ್ತು ಇಂದು ಬಹಳ ಬೃಹದಾಕಾರವಾಗಿ ಬೆಳಯಲಿಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಅಪಾರವಾದದ್ದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಅರ್.ಶಾಂತಪ್ಪ ತಿಳಿಸಿದರು.

ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಧಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷ್ಣರಾಜ ಒಡೆಯರ್ ಮತ್ತು ಅರಸು ಮನೆತವನ್ನು ಸ್ಮರಿಸಲೇಬೇಕು,

ಕನ್ನಡಕ್ಕೆ ತನ್ನದೆಯಾದ ಸ್ಧಾನಮಾನವಿದೆ, ಕನ್ನಡ ವಿಚಾರ ಬಂದಾಗ ಎಲ್ಲರೂ ಸಹಾ ದ್ವನಿ ಎತ್ತಿಬೇಕಿದೆ ಎಂದರು.

ಪರಿಷತ್ತಿನ ಉಪಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಮಾತನಾಡಿ, ಸುಧೀರ್ಘ ಅವಧಿಯಲ್ಲಿ ನಾಡಿನ ಸಹಸ್ರಾರು ಸಾಹಿತಿಗಳು. ಲೇಖಕರು, ಕಾದಂಬರಿಕಾರರು, ನಾಟಕಕಾರರು ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದಿದ್ದಾರೆ ಮತ್ತು ಬೆಳಸಿದ್ದಾರೆ, ನಮ್ಮ ಕನ್ನಡ ಭಾಷೆಗೆ 8 ಜ್ಞಾನಪೀಠ ಪುರಸ್ಕೃತರು ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ ಮತ್ತು ಕನ್ನಡದ ಹೆಮ್ಮೆಯ ವಿಚಾರ ಎಂದರು.


ನಿಕಟಪೂರ್ವ ಅಧ್ಯಕ್ಷ ಬಿ.ಪಿ.ಓಂಕಾರಪ್ಪ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ತಾಯಿ ಭವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಮಾಜಿ ಅಧ್ಯಕ್ಷ ಬಾ.ಮೈಲಾರಪ್ಪ, ಕಾರ್ಯದರ್ಶಿ ಎಂ.ಎಸ್.ರಮೇಶ್, ಹಿರಿಯ ಉಪಾಧ್ಯಕ್ಷ ಕೆ.ಬಿ.ಚಂದ್ರಯ್ಯ, ಸಹ ಕಾರ್ಯದರ್ಶಿ ಅಂಬರೀಷ್, ಕವಿಯತ್ರಿ ಕುಮಾರಿ ನಳಿನಾ ಸೇರಿದಂತೆ ಮತ್ತಿತರರು ಉಪಸ್ಧಿತರಿದ್ದರು.