ರೋಗಿಗಳ ಆರೈಕೆಯಲ್ಲಿ ದಾದಿಯರ ಪಾತ್ರ ಅನನ್ಯ: ಕೆ.ನಾಗರತ್ನಮ್ಮ

| Published : May 14 2025, 12:04 AM IST

ರೋಗಿಗಳ ಆರೈಕೆಯಲ್ಲಿ ದಾದಿಯರ ಪಾತ್ರ ಅನನ್ಯ: ಕೆ.ನಾಗರತ್ನಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ರೋಗಿಗಳ ಆರೈಕೆಯಲ್ಲಿ ವೈದ್ಯರಷ್ಟೇ ಕಾಳಜಿಯಿಂದ ಶುಶ್ರೂಷೆ ಮಾಡುವಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ. ಅವರ ಸೇವೆ ಸ್ಮರಿಸುವ ಸಲುವಾಗಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ.

ದೊಡ್ಡಬಳ್ಳಾಪುರ: ನಗರದ ಸರ್ಕಾರಿ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ನಡೆದ ದಾದಿಯರ ದಿನಾಚರಣೆಯಲ್ಲಿ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಕೆ.ನಾಗರತ್ನಮ್ಮ ಹಲವು ದಾದಿಯರನ್ನು ಸನ್ಮಾನಿಸಿ ಅಭಿನಂದಿಸಿದರು.

ಬಳಿಕ ಮಾತನಾಡಿದ ಅವರು, ರೋಗಿಗಳ ಆರೈಕೆಯಲ್ಲಿ ವೈದ್ಯರಷ್ಟೇ ಕಾಳಜಿಯಿಂದ ಶುಶ್ರೂಷೆ ಮಾಡುವಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ. ಅವರ ಸೇವೆ ಸ್ಮರಿಸುವ ಸಲುವಾಗಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಎಂತಹದ್ದೇ ಸನ್ನಿವೇಶ ಬಂದರೂ ಇನ್ನೊಬ್ಬರಿಗಾಗಿ ಸೇವೆ ಸಲ್ಲಿಸುವ ಇವರ ನಗುಮುಖದ ಸೇವೆಯೇ ರೋಗಿಗಳ ಪಾಲಿಗೆ ದೊಡ್ಡ ಧೈರ್ಯ, ಚೈತನ್ಯ ತರುತ್ತದೆ. ದಾದಿಯರ ಕೆಲಸ ಎಂದರೆ ಸುಲಭದ ಕೆಲಸವಲ್ಲ. ಬದುಕಿನ ಸಂಕಷ್ಟ ನುಂಗಿಕೊಂಡು ಈ ವೃತ್ತಿ ಆಯ್ಕೆ ಮಾಡಿಕೊಂಡು ಮತ್ತೊಬ್ಬರ ಒಳಿತಿಗಾಗಿ ಜೀವನ ಮುಡಿಪಾಗಿಟ್ಟಿದ್ದಾರೆ ಎಂದರು. ಆರೋಗ್ಯ ರಕ್ಷ ಸಮಿತಿ ಸದಸ್ಯರಾದ ಮುಸಿಬಾ, ಚಂದ್ರಣ್ಣ, ಯಶೋಧಮ್ಮ, ಪ್ರೇಮದಾಸ, ಮಹಿಳಾ ಮುಖಂಡರಾದ ಮಹೇಶ್ವರಿ, ಮಂಜುಳಮ್ಮ, ಮಮತಾ, ಹಿರಿಯ ಕಲಾವಿದರಾದ ಪುಟ್ಟಸಿದ್ದಯ್ಯ, ವನಿತಾ, ಯೋಗೀಶ ಇದ್ದರು.