ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮುಖ್ಯ

| Published : Sep 07 2025, 01:00 AM IST

ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ಪ್ರಗತಿಗೆ ವಿಭಿನ್ನ ಸೇವೆ ಸಲ್ಲಿಸುವ ಶಿಕ್ಷಕರಿಗೆ ಮತ್ತು ಆಧುನಿಕತೆ ಹಾಗೂ ವೈಜ್ಞಾನಿಕತೆಗೆ ಗ್ರಾಮೀಣ ವಿದ್ಯಾರ್ಥಿಗಳ ಏಳ್ಗೆಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಶಿಕ್ಷಕರಿಗೆ ಇಂಜಿನಿಯರ್ಸ್ ಸನ್ಮಾನ ಮಾಡಿದ್ದು ವಿಶೇಷ.

ಧಾರವಾಡ: ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಪಾತ್ರ ಪ್ರಮುಖ. ಅವರು ಪ್ರಸ್ತುತ ವ್ಯವಸ್ಥೆಯಿಂದ ಉತ್ತಮವಾಗಿ ಕೆಲಸ ಮಾಡಲಾಗುತ್ತಿಲ್ಲ. ಪಾಲಕರು ಅರಿತು ಶಿಕ್ಷಕರಿಗೆ ಉತ್ತಮ ವಾತಾವರಣ ನಿರ್ಮಿಸಲು ಸಹಕರಿಸಬೇಕು ಎಂದು ಐಐಐಟಿಯ ಆಡಳಿತ ಹಾಗೂ ವಿದ್ಯಾರ್ಥಿ ಡೀನ್‌ ಡಾ. ಕೆ. ಗೋಪಿನಾಥ ಹೇಳಿದರು.

ಅಸೋಸಿಯೇಷನ್‌ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ ಲೋಕಲ್ ಸೆಂಟರ್ ವತಿಯಿಂದ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಭವನದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಮತ್ತು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಅವರು, ಶೈಕ್ಷಣಿಕ ಪ್ರಗತಿಗೆ ವಿಭಿನ್ನ ಸೇವೆ ಸಲ್ಲಿಸುವ ಶಿಕ್ಷಕರಿಗೆ ಮತ್ತು ಆಧುನಿಕತೆ ಹಾಗೂ ವೈಜ್ಞಾನಿಕತೆಗೆ ಗ್ರಾಮೀಣ ವಿದ್ಯಾರ್ಥಿಗಳ ಏಳ್ಗೆಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಶಿಕ್ಷಕರಿಗೆ ಇಂಜಿನಿಯರ್ಸ್ ಸನ್ಮಾನ ಮಾಡಿದ್ದು ವಿಶೇಷ ಎಂದರು.

ರಂಗನಟ, ನಿರ್ದೇಶಕ ಡಾ. ಶಶಿಧರ ನರೇಂದ್ರ ಮಾತನಾಡಿ, ಗುರುಕುಲ ಪದ್ಧತಿಯು ಮತ್ತೆ ಮರಳಿ ಬರುತ್ತಿರುವುದರಿಂದ ಗುರು ಪರಂಪರೆಗೆ ಗೌರವ ಬರುತ್ತಿದೆ. ಅಲ್ಲದೇ, ಶಿಕ್ಷಕ ಪಾಠವನ್ನಷ್ಟೇ ಮಾಡುವುದಿಲ್ಲ ಗುರುವಾಗಿ ಮುಂದೆ ನಡೆಸುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿವಿಲ್‌ ಎಂಜಿನಿಯರ್‌ ಸಂಘದ ಅಧ್ಯಕ್ಷ ಸುನೀಲ್ ಬಾಗೇವಾಡಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಣ ಸಂಬಂಧ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಮತ್ತೆ ಅದನ್ನು ಬಲಪಡಿಸುವ ಮೂಲಕ ಸ್ವಸ್ಥ್ಯ ಸಮಾಜ ರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್‌ಕೆಜಿಯಿಂದ ಹಿಡಿದು ಪಿಜಿ ವರೆಗಿನ ಶಿಕ್ಷಕರನ್ನು ಗೌರವಿಸುವ ಕಾರ್ಯ ಸಂಘದಿಂದ ಮಾಡಲಾಗಿದೆ ಎಂದರು.

ವಿಜೇಂದ್ರಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಅರುಣಕುಮಾರ ಶೀಲವಂತ ಸ್ವಾಗತಿಸಿದರು. ದಾಮೋದರ್ ಜಿ. ಹೆಗಡೆ ನಿರೂಪಿಸಿದರು. ಪವನ್ ಕುಮಾರ್ ವಂದಿಸಿದರು. ಸಿದ್ದನಗೌಡ ಕೆ ಪಾಟೀಲ, ಕಬೀರ ನದಾಫ್, ಮಾರ್ತಾಂಡಪ್ಪ ಕತ್ತಿ ಇದ್ದರು.

ವಿವಿಧ ಶಾಲೆಗಳ ಶಿಕ್ಷಕರಾದ ಶೀಲಾ ಕೊಪ್ಪಿಕರ, ಜೋಸೆಫೀನ್ ಪ್ರಾನ್ಸಿಸ್ ಪಿಂಟೋ, ಶ್ರೇಯಾ ಕಾಮತ, ರೇಖಾ ಈರಣ್ಣ ಹಂಚಿನಮನಿ, ವೀಣಾ ತುಪ್ಪದ, ಶ್ರೀಶೈಲಯ್ಯ ಹಿರೇಮಠ, ಡಾ. ಎ.ಎಲ್. ಹರಿಹರ, ಡಾ. ಆಶೀಕ್ ಬಳ್ಳಾರಿ, ರೇಣುಕಾ ಬಾಗೇವಾಡಿ, ಡಾ. ಮನೋಜಕುಮಾರ ಚಿತ್ತವಾಡಗಿ, ಡಾ. ಅರ್ಜುನ ವಠಾರ ಅವರನ್ನು ಸನ್ಮಾನಿಸಲಾಯಿತು.