ಆರೋಗ್ಯಕರ ಸಮಾಜಕ್ಕೆ ಪರಿಸರದ ಪಾತ್ರ ಅನನ್ಯ

| Published : Jun 19 2024, 01:12 AM IST

ಸಾರಾಂಶ

ಮನುಷ್ಯ ಬದುಕಿ ಉಸಿರಾಡಲು ಶುದ್ಧ ಗಾಳಿ ತುಂಬ ಅವಶ್ಯಕವಾಗಿದ್ದು, ಸಮೃದ್ಧವಾದ ಗಿಡಮರಗಳಿಂದ ಮಾತ್ರ ನಮಗೆ ಪರಿಶುದ್ಧ ಗಾಳಿ ಪ್ರಾಪ್ತವಾಗುತ್ತದೆ. ಆದ್ದರಿಂದ ಮರಗಳನ್ನು ಹೆಚ್ಚೆಚ್ಚು ಬೆಳೆಸಿ ಪರಿಸರ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪರಿಸರದ ಪಾತ್ರ ಮತ್ತು ಕೊಡುಗೆ ಅನನ್ಯವಾಗಿದೆ. ಸ್ವಚ್ಛ ಮತ್ತು ಸುಂದರ ಪರಿಸರ ಮನುಷ್ಯನ ಬದುಕಿಗೆ ಅತಿ ಅವಶ್ಯಕವಾಗಿದೆ ಎಂದು ಬಿವಿವಿ ಸಂಘದ ಅಕ್ಕನ ಬಳಗದ ರಾಜೇಶ್ವರಿ ಚರಂತಿಮಠ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮನುಷ್ಯ ಬದುಕಿ ಉಸಿರಾಡಲು ಶುದ್ಧ ಗಾಳಿ ತುಂಬ ಅವಶ್ಯಕವಾಗಿದ್ದು, ಸಮೃದ್ಧವಾದ ಗಿಡಮರಗಳಿಂದ ಮಾತ್ರ ನಮಗೆ ಪರಿಶುದ್ಧ ಗಾಳಿ ಪ್ರಾಪ್ತವಾಗುತ್ತದೆ. ಆದ್ದರಿಂದ ಮರಗಳನ್ನು ಹೆಚ್ಚೆಚ್ಚು ಬೆಳೆಸಿ ಪರಿಸರ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪರಿಸರದ ಪಾತ್ರ ಮತ್ತು ಕೊಡುಗೆ ಅನನ್ಯವಾಗಿದೆ. ಸ್ವಚ್ಛ ಮತ್ತು ಸುಂದರ ಪರಿಸರ ಮನುಷ್ಯನ ಬದುಕಿಗೆ ಅತಿ ಅವಶ್ಯಕವಾಗಿದೆ ಎಂದು ಬಿವಿವಿ ಸಂಘದ ಅಕ್ಕನ ಬಳಗದ ರಾಜೇಶ್ವರಿ ಚರಂತಿಮಠ ಅಭಿಪ್ರಾಯಪಟ್ಟರು.

ನಗರದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶಿವಾಲಯದ ಆವರಣದಲ್ಲಿ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಬಿವಿವಿ ಸಂಘದ ಕಟ್ಟಡ ವಿಭಾಗ ಮತ್ತು ಅಕ್ಕನ ಬಳಗದ ಸಹಯೋಗದಲ್ಲಿ ಸುವರ್ಣ ಲಿಂಗಪ್ಪ ಬದಾಮಿ ಅವರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಉಪನ್ಯಾಸ ಹಾಗೂ ಪರಿಸರ ದಿನೋತ್ಸವ ಸಮಾರಂಭದಲ್ಲಿ ಸಸಿ ನೆಡುವುದರ ಮೂಲಕ ರಾಜೇಶ್ವರಿ ಚರಂತಿಮಠ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ದತ್ತಿ ಉಪನ್ಯಾಸ ನೀಡಿದ ಬಸವೇಶ್ವರ ವಾಣಿಜ್ಯ ಕಾಲೇಜಿನ ಉಪನ್ಯಾಸಕಿ ಡಾ.ನಂದಿನಿ ದೊಡ್ಡಮನಿ ಮನುಷ್ಯ ವಾಸಿಸಲು ಇರುವ ಗ್ರಹ ಭೂಮಿಯೊಂದೆ. ಆದ್ದರಿಂದ ಭೂಮಿಯ ಮೇಲೆ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಬೇಕಿದೆ. ಬಿ.ವಿ.ವಿ ಸಂಘದಲ್ಲಿ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಪರಿಸರದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.ಅಧ್ಯಕ್ಷತೆ ವಹಿಸಿದ್ದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಅವರು ಮಾತನಾಡಿ, ಮನುಷ್ಯನ ದುರಾಸೆಗೆ ಪ್ರಕೃತಿ ನಾಶವಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಗಾಗಿ ನಾವು ಸ್ವಚ್ಛ ಮತ್ತು ಸುಂದರ ಪರಿಸರವನ್ನು ಉಳಿಸಬೇಕು. ಇಂತಹ ಸಾಮಾಜಿಕ ಕಾಳಜಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಅಕ್ಕನ ಬಳಗದ ಪ್ರಯತ್ನ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಿವೇದಿತಾ ಪಟ್ಟಣಶೆಟ್ಟಿ ಅವರು ಪ್ರಾರ್ಥಿಸಿದರು. ಗಿರಿಜಾ ಪರ್ವತಿಕರ್ ಅತಿಥಿಗಳನ್ನು ಸ್ವಾಗತಿಸಿದರು. ವಿಜಯಲಕ್ಷ್ಮೀ ಭದ್ರಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಆಶಾ ಜಿಗಜಿನ್ನಿ ಅವರು ವಂದಿಸಿದರು.ಈ ಸಂದರ್ಭದಲ್ಲಿ ಬಿ.ವಿ.ವಿ ಸಂಘದ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ಬಿ.ವಿ.ವಿ ಸಂಘದ ಸದಸ್ಯರಾದ ವಿಶ್ವನಾಥ ಇಲಾಳಶೆಟ್ಟರ, ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಹಲಕುರ್ಕಿ, ಎಂ.ಎಸ್.ಮುನೋಳ್ಳಿ, ಹಾರ್ಟಿಕಲ್ಚರ್ ಆಫೀಸರ್ ಸಂಗಯ್ಯ ಲೂತಿಮಠ, ದತ್ತಿ ದಾನಿಗಳಾದ ಸುಮಂಗಲಾ ಬದಾಮಿ, ಮಲ್ಲಯ್ಯ ಹಿರೇಮಠ, ಅಕ್ಕನ ಬಳಗದ ಸರ್ವಸದಸ್ಯರು, ಕಟ್ಟಡ ವಿಭಾಗದ ಮತ್ತು ಮೆಡಿಕಲ್ ಕಾಲೇಜಿನ ಸಿಬ್ಬಂದಿಗಳು ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು.

ಮನುಷ್ಯನ ದುರಾಸೆಗೆ ಇಂದು ದಿನದಿಂದ ದಿನಕ್ಕೆ ಪ್ರಕೃತಿ ನಾಶವಾಗುತ್ತಿದೆ. ನಮ್ಮ ಭವಿಷ್ಯ ಹಾಗೂ ಮುಂದಿನ ಪೀಳಿಗೆಗಾಗಿ ನಾವು ಸ್ವಚ್ಛ ಮತ್ತು ಸುಂದರ ಪರಿಸರವನ್ನು ನಿರ್ಮಾಣ ಮಾಡಬೇಕಿದೆ. ಇಂತಹ ಸಾಮಾಜಿಕ ಕಾಳಜಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಅಕ್ಕನ ಬಳಗದ ಪ್ರಯತ್ನ ಶ್ಲಾಘನೀಯ.

-ಡಾ.ಭುವನೇಶ್ವರಿ ಯಳಮಲಿ,
ಶ್ರೀ ಕುಮಾರೇಶ್ವರ ಆಸ್ಪತ್ರೆಯ ಅಧೀಕ್ಷಕಿ.