ಪುರುಷನ ಸಾಧನೆಗೆ ಸ್ತ್ರೀ ಪಾತ್ರ

| Published : Mar 11 2025, 12:49 AM IST

ಸಾರಾಂಶ

ಪುರುಷನ ಸಾಧನೆಯ ಹಿಂದೆ ಸ್ತ್ರೀಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಸೂತಿ ತಜ್ಞೆ ಡಾ.ಶಾರದಾ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮೇಲ

ಪುರುಷನ ಸಾಧನೆಯ ಹಿಂದೆ ಸ್ತ್ರೀಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಸೂತಿ ತಜ್ಞೆ ಡಾ.ಶಾರದಾ ಪಾಟೀಲ ಹೇಳಿದರು.ಪಟ್ಟಣದ ಆರೂಢ ಸಂಗನ ಬಸವೇಶ್ವರ ಮಠದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಪಟ್ಟಣ ಪಂಚಾಯತಿ ಮಹಿಳಾ ಪೌರ ಕಾರ್ಮಿಕರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ತ್ರೀಯರು ತಾಯಿ, ಹೆಂಡತಿ, ಸಹೋದರಿ, ಮಗಳು ಮುಂತಾದ ವಿವಿಧ ರೂಪಗಳಲ್ಲಿ ಪುರುಷನ ಜೀವನದಲ್ಲಿ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುತ್ತಾರೆ ಎಂದರು.ಡಾ.ಸಂಗಮೇಶ್ವರಿ ಮಹಾಜನ ಮಾತನಾಡಿ, ಹೆಣ್ಣು ಕೇವಲ ಮನೆ ಪಾತ್ರವಲ್ಲದೇ ಎಲ್ಲ ಕ್ಷೇತ್ರದಲ್ಲೂ ಆಕೆಯ ಕೊಡುಗೆ ಅಮೂಲ್ಯವಾಗಿದೆ. ಮಹಿಳೆಯರಿಗೆ ಸೌಲಭ್ಯಗಳು, ಅವಕಾಶಗಳು ಮತ್ತು ಗೌರವ ನೀಡಿದರೆ ಸಮತೋಲಿತ ಸಮಾಜ ನಿರ್ಮಾಣ ಸಾಧ್ಯ ಎಂದರು.ಈ ಸಂದರ್ಭದಲ್ಲಿ ಬಸವಲಿಂಗ ಶರಣರು, ರೇಣುಕಾ ಅಕ್ಕ, ಕಸ್ತೂರಿಬಾಯಿ ಕೊಳಾರಿ, ಡಾ.ಮಂಜುಷಾ ಪಾಟೀಲ, ವಿಜಯಲಕ್ಷ್ಮೀ ಕತ್ತಿ, ಜ್ಯೋತಿ ಕೊಳಾರಿ, ಶೈಲಾ ಅಮರಗೊಂಡ, ಕಾವೇರಿ ಅವರಾದಿ, ಶೈಲಾ ಹೊಸಮನಿ, ಸದಾಶಿವ ಬಿರಾದಾರ, ಶಿವರಾಜ ಪತ್ತಾರ, ಐಶ್ವರ್ಯಾ ಕೊಳಾರಿ, ಪಂಡಿತ ಅವಜಿ, ಸಂಗು ಬಳೂಂಡಗಿ ಸೇರಿದಂತೆ ಇತರರಿದ್ದರು.11 ವರ್ಷದ ಬಾಲಕಿ ನಮ್ರತಾ ರಮೇಶ ಕತ್ತಿ ಕಾಶ್ಮೀರಕ್ಕೆ ಹೋಗಿದ್ದೆ ಮಕ್ಕಳ ಪ್ರವಾಸ ಕಥನ ಪುಸ್ತಕ ಕರ್ನಾಟಕದಲ್ಲಿ ಅತಿ ಚಿಕ್ಕ ಮಕ್ಕಳ ಸಾಹಿತಿ ಹೆಸರು ಪಡೆದದ್ದಕ್ಕೆ ಸತ್ಕರಿಸಲಾಯಿತು. ಜೊತೆಗೆ ಸಾವಯವ ಕೃಷಿ ಪದ್ಧತಿಯಲ್ಲಿ ಹೆಸರು ಮಾಡಿದ ನೀಲೇಷಾ ಸುನೀಲ ನಾರಾಯಣಕರರನ್ನು ಗೌರವಿಸಲಾಯಿತು.