ಏಕೀಕರಣ ಹೋರಾಟದಲ್ಲಿ ತುಳುವರ ತ್ಯಾಗ ಸ್ಮರಣೀಯ: ಡಾ.ಧನಂಜಯ ಕುಂಬ್ಳೆ

| Published : Nov 03 2025, 02:45 AM IST

ಏಕೀಕರಣ ಹೋರಾಟದಲ್ಲಿ ತುಳುವರ ತ್ಯಾಗ ಸ್ಮರಣೀಯ: ಡಾ.ಧನಂಜಯ ಕುಂಬ್ಳೆ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಹಾಗೂ ಲಯನ್ಸ್ ಕ್ಲಬ್ ಬೆಂದೂರ್‌ವೆಲ್ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಕರಾವಳಿ ಭಾಗದ ನೇತಾರರಾಗಿದ್ದ ಕೆ.ಬಿ. ಜಿನರಾಜ ಹೆಗ್ಡೆಯವರು 1928ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾಷಾವಾರು ಪ್ರಾಂತ್ಯ ರಚನೆಯ ಸಭೆಯಲ್ಲಿ ತುಳು ಮಹಾಸಭೆಯ ಪ್ರತಿನಿಧಿಯಾಗಿ ಭಾಗವಹಿಸಿ ಕರ್ನಾಟಕ ಏಕೀಕರಣಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಇದು ತುಳು- ಕನ್ನಡದ ನಡುವಿನ ಬಾಂಧವ್ಯ ಬಲಗೊಳ್ಳಲು ಕಾರಣವಾಯಿತು. ಏಕೀಕರಣ ಹೋರಾಟದಲ್ಲಿ ತುಳುವರ ತ್ಯಾಗ ಸದಾ ಸ್ಮರಣೀಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಸಹಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು.

ಅವರು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಹಾಗೂ ಲಯನ್ಸ್ ಕ್ಲಬ್ ಬೆಂದೂರ್‌ವೆಲ್ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕನ್ನಡ ಕಟ್ಟೆ ಮಂಗಳೂರು ಇದರ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ದ.ಕ. ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಾಗೇಶ್ ಕುಮಾರ್ ಎನ್.ಜೆ., ಕಸಾಪ ಕೇಂದ್ರ ಸಮಿತಿ‌ ಸದಸ್ಯ ಡಾ.ಮಾಧವ ಎಂ.ಕೆ., ಮಂಗಳೂರು ಕಸಾಪ ಘಟಕ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್, ದ.ಕ. ಜಿಲ್ಲಾ ಗೌರವ ಕಾರ್ಯದರ್ಶಿ ರಾಜೇಶ್ವರಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕೆ., ಸನತ್ ಕುಮಾರ್ ಜೈನ್ ಮತ್ತಿತರರು ಭಾಗವಹಿಸಿದ್ದರು.

ಬಳಿಕ ಯು.ಎಚ್. ಖಾಲಿದ್ ಉಜಿರೆ ಬಳಗದಿಂದ ಕನ್ನಡ ಗೀತಾಂಜಲಿ ಕಾರ್ಯಕ್ರಮ ನಡೆಯಿತು.