ಸಾರಾಂಶ
ಶಿಕ್ಷಣದ ಮಹತ್ವ ಅರಿತ ಶ್ರೀಗಳು ಶ್ರೀಮಠಕ್ಕಷ್ಟೇ ಸೀಮಿತರಾಗದೇ ನಾಡಿನ ವಿವಿಧೆಡೆ ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ಮಂದಿ ಸುಶಿಕ್ಷಿತರಾಗಿ ಸುಂದರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಯಿತು. ಶ್ರೀಗಳು ಇಡೀ ಧಾರ್ಮಿಕ ಕ್ಷೇತ್ರಕ್ಕೆ ಆದರ್ಶಪ್ರಾಯರಾಗಿದ್ದು ಆಧುನಿಕ ಬಸವಣ್ಣನೆಂದೇ ಖ್ಯಾತಿ ಪಡೆದು ಇಡೀ ವಿಶ್ವದ ಸಂತ ಕುಲಕ್ಕೆ ಮಾದರಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಲಕ್ಷಾಂತರ ಬಡಮಕ್ಕಳ ಏಳಿಗೆಗಾಗಿ ಹಗಲಿರುಳೂ ಶ್ರಮಿಸಿ ಅನ್ನ, ಅಕ್ಷರ, ಕಾಯಕದ ಮಹತ್ವವನ್ನು ವಿಶ್ವಕ್ಕೆ ಸಾರುವ ಮೂಲಕ ಸಾರ್ಥಕ ಜೀವನ ನಡೆಸಿದ ಕಾಯಕಯೋಗಿ ಶಿವೈಕ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸೇವೆ ಎಲ್ಲಕಾಲಕ್ಕೂ ಆದರ್ಶಮಯವಾದದು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಅಂಚೆಮನೆ ರುದ್ರಯ್ಯ ತಿಳಿಸಿದರು.ಪಟ್ಟಣದ ಉದ್ಧಾನೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಡಾ.ಶ್ರೀಶಿವಕುಮಾರ ಮಹಾಸ್ವಾಮೀಜಿ ಹಾಗೂ ಉದ್ಧಾನಶಿವಯೋಗಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶಿಕ್ಷಣದ ಮಹತ್ವ ಅರಿತ ಶ್ರೀಗಳು ಶ್ರೀಮಠಕ್ಕಷ್ಟೇ ಸೀಮಿತರಾಗದೇ ನಾಡಿನ ವಿವಿಧೆಡೆ ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ಮಂದಿ ಸುಶಿಕ್ಷಿತರಾಗಿ ಸುಂದರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಯಿತು. ಶ್ರೀಗಳು ಇಡೀ ಧಾರ್ಮಿಕ ಕ್ಷೇತ್ರಕ್ಕೆ ಆದರ್ಶಪ್ರಾಯರಾಗಿದ್ದು ಆಧುನಿಕ ಬಸವಣ್ಣನೆಂದೇ ಖ್ಯಾತಿ ಪಡೆದು ಇಡೀ ವಿಶ್ವದ ಸಂತ ಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.ಅರ್ಚಕ ಬಸವರಾಜು ಮಾತನಾಡಿ, ಪೂಜ್ಯ ಶ್ರೀ ಉದ್ಧಾನೇಶ್ವರ ಸ್ವಾಮೀಜಿಯವರು ಪವಾಡ ಪುರುಷರು ಮತ್ತು ಸಾಧಕರಾಗಿದ್ದು ಇಂದಿಗೂ ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದಾರೆ. ಉದ್ಧಾನ ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲೇ ಇಂದಿಗೂ ಶಿವಕುಮಾರ ಸ್ವಾಮೀಜಿ ನಡೆದುಕೊಂಡು ಬಂದಿದ್ದು, ಇದೀಗ ಸಿದ್ಧಲಿಂಗ ಸ್ವಾಮೀಜಿ, ಶಿವಸಿದ್ಧೇಶ್ವರ ಸ್ವಾಮೀಜಿಯವರೂ ಕೂಡ ನಡೆಯುತ್ತಿದ್ದಾರೆ ಎಂದರು.
ಅರ್ಚಕ ರವಿಕುಮಾರ್, ಮುಖಂಡರಾದ ಮಹದೇವಯ್ಯ, ಅಶೋಕ್, ರಾಜಶೇಖರ್, ಶಿವಕುಮಾರ್, ಚಂದ್ರಶೇಖರ್, ಮಹದೇವಯ್ಯ, ವಿನಯ್, ಮಹೇಶ್, ಸುಂದರೇಶ್, ಸುರೇಶ್, ವಿನೋದ್, ಪ್ರತಾಪ್, ವಿಜಯಕುಮಾರ್, ಕಾರ್ತಿಕ್, ಹೊನ್ನಸಾಮಿ, ಪವನ್, ಅರುಣ್, ಸುಚೀಂದ್ರನ್, ರವಿಕುಮಾರ್, ದಯಾನಂದ್, ಶಶಾಂಕ್, ಚಂದನ್, ಭರತ್, ಮತ್ತಿತ್ತರಿದ್ದರು.