ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಕಾಪಾಡಬೇಕು

| Published : Sep 14 2025, 01:04 AM IST

ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಕಾಪಾಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕ ಕೇವಲ ವ್ಯಕ್ತಿಯಲ್ಲ, ಒಬ್ಬ ಶಿಕ್ಷಕ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಇದ್ದಂತೆ. ಶಿಕ್ಷಕರಿಗೆ ಇಡೀ ವಿಶ್ವದಲ್ಲಿಯೇ ಗುರುಸ್ಥಾನ ನೀಡಿ ಗೌರವಿಸುತ್ತಿದೆ. ಇದು ಬೇರೆ ಯಾವುದೇ ವೃತ್ತಿಯಲ್ಲಿ ಇಂತಹ ಗೌರವ ಸಿಗಲ್ಲ ಈ ಗೌರವವನ್ನು ಕಾಪಾಡಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ಸಕಾರಾತ್ಮಕ ಭಾವನೆಗಳನ್ನು ತುಂಬಬೇಕು.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಕಾಲಕ್ಕೆ ತಕ್ಕಂತೆ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಿದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕವಾಗುತ್ತೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಜಿ.ಪಂ ಚಿಕ್ಕಬಳ್ಳಾಪುರ,ಶಾಲಾ ಶಿಕ್ಷಣ ಇಲಾಖೆ ,ಶಿಕ್ಷಕರ ದಿನಾಚರಣೆ ಆಚರಣೆಯ ಸಮಿತಿ ಹಾಗೂ ಖಾಸಗಿ ಶಾಲೆಗಳು ಒಕ್ಕೂಟ ಬಾಗೇಪಲ್ಲಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಗುರುವಿಗೆ ಉನ್ನತ ಸ್ಥಾನ

ಶಿಕ್ಷಕ ಕೇವಲ ವ್ಯಕ್ತಿಯಲ್ಲ, ಒಬ್ಬ ಶಿಕ್ಷಕ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಇದ್ದಂತೆ. ಶಿಕ್ಷಕರಿಗೆ ಇಡೀ ವಿಶ್ವದಲ್ಲಿಯೇ ಗುರುಸ್ಥಾನ ನೀಡಿ ಗೌರವಿಸುತ್ತಿದೆ. ಇದು ಬೇರೆ ಯಾವುದೇ ವೃತ್ತಿಯಲ್ಲಿ ಇಂತಹ ಗೌರವ ಸಿಗಲ್ಲ ಈ ಗೌರವವನ್ನು ಕಾಪಾಡಿಕೊಳ್ಳಬೇಕೆಂದ ಅವರು ಶಿಕ್ಷಕರು ಮಕ್ಕಳಲ್ಲಿ ಸಕಾರಾತ್ಮಕ ಭಾವನೆಗಳನ್ನು ತುಂಬದೆ ಸಕಾರಾತ್ಮಕ ಭಾವನೆಗಳನ್ನು ತುಂಬುವ ಕೆಲಸ ಮಾಡಬೇಕು ಎಂದರು.

ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. 2.5 ಕೋಟಿ ವೆಚ್ಚದಲ್ಲಿ ಗುರು ಭವನ ನಿರ್ಮಾಣ ಮಾಡಿ ಮುಂದಿನ ವರ್ಷದಲ್ಲಿ ಶಿಕ್ಷಕರ ದಿನಾಚರಣೆಗೆ ಹಸ್ತಾಂತರ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ

ಈ ಸಂದರ್ಭದಲ್ಲಿ ತಾಲೂಕಿನಲ್ಲಿ ವಯೋ ನಿವೃತ್ತ ಹೊಂದಿದ ಶಿಕ್ಷಕರು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರನ್ನು ಶಾಸಕರು ಆತ್ಮೀಯವಾಗಿ ಸನ್ಮಾನಿಸಿದರು,

ಈ ಸಂದರ್ಭದಲ್ಲಿ ತಹಸೀಲ್ದಾರ್ ಮನೀಷಾ ಎನ್ ಪತ್ರಿ, ತಾ.ಪಂ ಇಒ ರಮೇಶ್, ಬಿಇಒ ಎನ್.ವೆಂಕಟೇಶಪ್ಪ, ವೆಂಕಟರಾಮ್, ಆರ್.ಹನುಮಂತ ರೆಡ್ಡಿ, ನ್ಯೂಹಾರಿಜನ್ ಶಾಲೆಯ ಶ್ರೀನಿವಾಸ ರೆಡ್ಡಿ, ಯಂಗ್ ಇಂಡಿಯಾಗ ಶಾಲೆ ವ್ಯವಸ್ಥಾಪಕ ಪ್ರೋ. ಡಿ.ಶಿವಣ್ಣ, ಪಿ.ವಿ.ವೆಂಕಟರವಣ,ಸಿ.ವೆಂಕಟರಾಯಪ್ಪ ,ಡಿ.ಎನ.ರಘುನಾಥ್, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು, ಸದಸ್ಯರಾದ ಎ.ನಂಜುಂಡಪ್ಪ ಮತ್ತಿತರರು ಇದ್ದರು.