ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಂಘ ಇರುವುದೇ ಹಿಂದೂ ಸಮಾಜಕ್ಕೋಸ್ಕರ ಎಂದು ವಿಶ್ವ ಹಿಂದೂ ಪರಿಷತ್ತಿನ ಶರಣ್ ಪಂಪ್ ವೆಲ್ ಹೇಳಿದರು.ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಸಂಘವು ರಾಜ್ಯದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಎಲ್ಲೂ ಸಂಘರ್ಷ ನಡೆದಿಲ್ಲ. ಎಲ್ಲೂ ಗೊಂದಲ ಆಗಿಲ್ಲ. ಆದರೆ ನಾಪೋಕ್ಲುವಿನಲ್ಲಿ ಅಹಿತಕರ ಘಟನೆ ನಡೆದಿದೆ. ನಾಪೋಕ್ಲು ನಮ್ಮದು ಎಂದು ಹೇಳಿದ್ದು ಮಾತ್ರವಲ್ಲದೆ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ. ಇದು ಖಂಡನೀಯ. ನಾಪೋಕ್ಲು ಕಾವೇರಿ ತಾಯಿಯ ನಾಡು. ಕೊಡಗು ಪುಣ್ಯಭೂಮಿಯ ನಾಡು ಎಂದರು.ರಾಷ್ಟ್ರ ಸೇವಿಕ ಸಮಿತಿಯ ಮಂಗಳೂರಿನ ಜಿಲ್ಲಾ ಸೇವಾ ಪ್ರಮುಖ್ ಶ್ರೀದೇವಿ ಮಾತನಾಡಿ, ಎಲ್ಲಿ ಸ್ತ್ರೀ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ಉದಾತ್ತ ಚಿಂತನೆ ನೀಡಿದರು. ದೇಶ ನಮ್ಮದು. ಸ್ತ್ರೀಯನ್ನು ಅತ್ಯಂತ ಗೌರವದಿಂದ ಕಾಣುವ ಸಂಸ್ಕೃತಿ ಹಿಂದೂ ಸಂಸ್ಕೃತಿ ಎಂದ ಲವ್ ಜಿಹಾದ್ ಬಗ್ಗೆ ಬೆಳಕು ಚೆಲ್ಲಿದರು.ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ವನುವಸಂತ ಹಿಂದೂ ಧರ್ಮದಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿ ತಾಯಂದಿರು ಮಕ್ಕಳಿಗೆ ಪ್ರೇರಣೆ ನೀಡಬೇಕು. ಸಮಾಜದಲ್ಲಿ ಗೌರವಯುತವಾಗಿ ಬಾಳುವ ಬಗ್ಗೆ ತಿಳಿ ಹೇಳಬೇಕು. ಮಕ್ಕಳಿಗೆ ವೇಷ ಭೂಷಣದ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದ. ಮಾತ್ರ ಶಕ್ತಿಯ ಬಗ್ಗೆ ಮಾತನಾಡಿದರು.ನಿವೃತ್ತ ಅಬಕಾರಿ ಕಮಿಷನರ್ ಮೂವೆರ ಸಚಿನ್ ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋ ಪೂಜೆ ಹಾಗೂ ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ವೇದಿಕೆಯಲ್ಲಿ ನಿವೃತ್ತ ನೌಕಾಪಡೆ ಅಧಿಕಾರಿ ಪೆಬ್ಬೆಟ್ಟಿರ ಎಂ. ಕುಶಾಲಪ್ಪ, ನಿವೃತ್ತ ಸೇನಾಧಿಕೇರಿ ಎಡಿಕೇರಿ ಮಣಿ ಮಂದಣ್ಣ, ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ಉಪ ಅಧ್ಯಕ್ಷರಾದ ಚೀಏಕಪುವಂಡ ರೀನಾ ವಿಠ್ಠಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿಂದೂ ಬಾಂಧವರು ಪಾಲ್ಗೊಂಡಿದ್ದರು. ಮುಖಂಡ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಸ್ವಾಗತಿಸಿ ನುಚ್ಚಿಮನೆಣಿಯಂಡ ನಿಶ್ಚಿತ ನಿರೂಪಿಸಿದರು. ಹಿಂದೂಸಂಗಮ ಪ್ರಮುಖರಾದ ಕರವಂಡ ಲವ ನಾಣಯ್ಯ ವಂದಿಸಿದರು.ಇದಕ್ಕೂ ಮುನ್ನ ಕೇರಳದ ಚಂಡೆ ವಾದ್ಯ, ಭಾರತ ಮಾತೆಯ ಸ್ತಬ್ಧ ಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.