ದಿ.ಇಬ್ರಾಹಿಂ ಸುತಾರ ದ್ವಿತೀಯ ಪುಣ್ಯಸ್ಮರಣೆ ನಾಳೆ

| Published : Feb 04 2024, 01:34 AM IST

ಸಾರಾಂಶ

ಮಹಾಲಿಂಗಪುರ: ಕನ್ನಡದ ಕಬೀರ, ಸೂಫಿ ಸಂತ, ಪದ್ಮಶ್ರೀ ಪುರಸ್ಕೃತ ದಿ.ಇಬ್ರಾಹಿಂ ಸುತಾರ ಅವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಭಾವ್ಯೆಕ್ಯ ದಿನೋತ್ಸವ, ಭಾವ್ಯೆಕ್ಯ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಫೆ.5ರಂದು ಸ್ಥಳೀಯ ಶ್ರೀ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಸಂಜೆ 4 ರಿಂದ 8-30 ಗಂಟೆಯವರೆಗೆ ಜರುಗಲಿದೆ.

ಸ್ಥಳೀಯ ಸಹಜಯೋಗಿ ಸಹಜಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಶ್ರೀ ಬಸವಾನಂದ ಬ್ರಹ್ಮ ವಿದ್ಯಾಶ್ರಮ ಟ್ರಸ್ಟ್ ಉಪಾಧ್ಯಕ್ಷ ಬಿ.ಎಂ. ಢಪಳಾಪೂರ ಅಧ್ಯಕ್ಷತೆ ವಹಿಸುವರು. ಹೈದರಾಬಾದ್‌ನ ಭಾವ್ಯೆಕ್ಯ ವಿಶ್ವಶಾಂತಿ ಕನ್ನಡ ಪ್ರವಚನಕಾರ ಸೂಫಿ ಮೌಲಾನಾ ಸೈಯದಬಾಷಾ, ಉಪ್ಪಿನ ಬೆಟಗೇರಿ ಸೂಫಿಸಂತ ಹಜರತ ಶಿರಾಜುಲ್ ಅಕ್ಷಾಕಾದ್ರಿ, ಕಾದರವಳ್ಳಿಯ ಧಾರ್ಮಿಕ ಗುರು ಹಜರತ್ ಮೌಲಾನಾ ತನ್ವೀರ್‌ಸಾಬ ಮುಜಾವರ್‌, ಹಿರಿಯ ಆಧ್ಯಾತ್ಮಿಕ ಚಿಂತಕ, ಕೊಣ್ಣೂರ ಗ್ರಾಮದ ಡಾ.ಬಸವರಾಜ ಚೌಗಲಾ ಭಾವೈಕ್ಯ ಪ್ರವಚನ ನೀಡುವರು. ಹಿರಿಯ ಆಧ್ಯಾತ್ಮಿಕ ಜೀವಿ ಮಲ್ಲಪ್ಪ ಕಟಗಿ ಪ್ರಾಸ್ತಾವಿಕವಾಗಿ ಮಾತನಾಡುವರು.

ಸ್ಥಳೀಯ ಹಿರಿಯ ಭಜನಾ ಕಲಾವಿದ ಮೆಹಬೂಬ್‌ ಸನದಿ ಅವರಿಗೆ 2023-24ನೇ ಸಾಲಿನ ಭಾವೈಕ್ಯ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಾದವಾಡದ ಹಿರಿಯ ಆಧ್ಯಾತ್ಮಿಕ ಜೀವಿ ಕಲ್ಲಪ್ಪ ಪಾವಟೆ ಅವರಾದಿಯ ಧಾರ್ಮಿಕ ಉಪನ್ಯಾಸಕ ನಬೀಸಾಬ ಮುಲ್ಲಾ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು. ರಾಷ್ಟ್ರೀಯ ಭಾವ್ಯೆಕ್ಯತೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಗುವದು ಎಂದು ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯ ಅಧ್ಯಕ್ಷ ಹುಮಾಯೂನ ಸುತಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.