ಸರ್ಕಾರದ ಯಶಸ್ಸಿನ ಗುಟ್ಟು ‘ಗ್ಯಾರಂಟಿ’

| Published : Mar 28 2025, 12:34 AM IST

ಸಾರಾಂಶ

ಜಿಲ್ಲೆಯಲ್ಲಿ ೩೭೯೩೩೬ ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಅನ್ಯಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ೫ ಕೆಜಿ ಅಕ್ಕಿಯ ಬದಲಾಗಿ ೧೭೦ ರು.ಗಳನ್ನು ಡಿಬಿಟಿ ಮೂಲಕ ಜಮೆ ಮಾಡಲಾಗುತಿತ್ತು. ಪ್ರಸ್ತುತ ಬಿಪಿಎಲ್ ಕಾರ್ಡ್ ದಾರರಿಗೆ ಒಬ್ಬರಿಗೆ ೧೫ ಕೆಜಿ ಅಕ್ಕಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ೧೩,೫೨,೪೫೨ ಒಟ್ಟು ಫಲಾನುಭವಿಗಳು ಇದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಬೇಕು. ಈ ಯೋಜನೆಗಳು ಸರ್ಕಾರದ ಯಶಸ್ಸಿನ ಗುಟ್ಟಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್ ಅಭಿಪ್ರಾಯಪಟ್ಟರು.

ನಗರದ ಜಿಪಂ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶಕ್ತಿ ಯೋಜನೆ ಪ್ರಾರಂಭದಿಂದ ಸದ್ಯದವರೆಗೆ ಪ್ರತಿನಿತ್ಯ ಸರಾಸರಿ ೨.೫೬ ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದರಲ್ಲಿ ಒಟ್ಟು ೧.೩೨ ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಒಟ್ಟಾರೆ ಪ್ರಯಾಣಿಕರು ಶೇ. ೫೨ ರಷ್ಟಿರುತ್ತದೆ.

ಅನ್ನ ಭಾಗ್ಯ ಯೋಜನೆ:

ಜಿಲ್ಲೆಯಲ್ಲಿ ೩೭೯೩೩೬ ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಅನ್ಯಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ೫ ಕೆಜಿ ಅಕ್ಕಿಯ ಬದಲಾಗಿ ೧೭೦ ರು.ಗಳನ್ನು ಡಿಬಿಟಿ ಮೂಲಕ ಜಮೆ ಮಾಡಲಾಗುತಿತ್ತು. ಪ್ರಸ್ತುತ ಬಿಪಿಎಲ್ ಕಾರ್ಡ್ ದಾರರಿಗೆ ಒಬ್ಬರಿಗೆ ೧೫ ಕೆಜಿ ಅಕ್ಕಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ೧೩,೫೨,೪೫೨ ಒಟ್ಟು ಫಲಾನುಭವಿಗಳು ಇದ್ದರೆ, ಜೆಲ್ಲೆಯಲ್ಲಿ ಗೃಹಜ್ಯೋತಿಯಡಿ ಶೇ.೯೮.೪೧ ಶೇಕಡಾವಾರು ನೋಂದಣಿ ಮಾಡಿಕೊಂಡಿದ್ದು, ಫಲಾನುಭವಿಗಳಿಗೆ ೨೦೦ ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ವಿವರಿಸಿದರು.

ಗೃಹ ಲಕ್ಷ್ಮೀ: ಈ ಯೋಜನೆಯಲ್ಲಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ೨೦೦೦ ಸಾವಿರ ರು.ಗಳಂತೆ ಡಿಬಿಟಿ ಮೂಲಕ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ೫೦,೯೦,೦೦೭ ಈ ಫಲಾನುಭವಿಗಳಿಗೆ ಒಟ್ಟು ೧೦೧೮ ಕೋಟಿ ರು.ಗಳನ್ನು ಜಮೆ ಮಾಡಲಾಗಿದೆ. ಸರ್ಕಾರದ ನಿರ್ದೇಶನದ ಪ್ರಕಾರ ಈಗಾಗಲೇ ವಿದ್ಯಾರ್ಥಿಗಳ ನೋಂದಣಿಗಾಗಿ ಅಭಿಯಾನ ಕೈಗೊಂಡು ನೋಂದಣಿ ಮಾಡಲಾಗುತ್ತಿದೆ. ಕಾಲೇಜು ಮತ್ತು ವಿವಿಗಳಲ್ಲಿ ಈ ಯೋಜನೆ ಕುರಿತು ಪ್ರಚಾರ ಕಾರ್ಯಕ್ರಮ ಕೈಗೊಳ್ಳಲು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಓ ಪ್ರವೀಣ್. ಪಿ.ಬಾಗೇವಾಡಿ, ಉಪಾಧ್ಯಕ್ಷರಾದ ಇನಾಯತ್, ನಾಗೇಶ್ವರಿ, ಅಶ್ವತ್‌ ರೆಡ್ಡಿ ಇದ್ದರು.