ರಾಣಿಬೆನ್ನೂರು: 1857ರ ಸಿಪಾಯಿ ದಂಗೆಯು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಗಿದೆ ಎಂದು ಸುಣಕಲ್ಲಬಿದರಿ ಎಎಸ್‌ಬಿ ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ನಾಗರಾಜ ಗೋಡಿಹಾಳ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ವತಿಯಿಂದ ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಲಾರ್ಡ ಡಾಲ್ಸಹೌಸಿ ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಮತ್ತು ಸಹಾಯಕ ಸೈನ್ಯ ಪದ್ಧತಿಯಿಂದ ಭಾರತೀಯ ರಾಜರು ಅಸಮಾಧಾನಗೊಂಡರು. ಮಂಗಳ ಪಾಂಡೆ ಎಂಬ ಸೈನಿಕ ಈ ದಂಗೆಗೆ ಪ್ರಮುಖ ಕಿಚ್ಚು ಹಚ್ಚಿದ್ದು ನಂತರ ಅನೇಕ ಪ್ರಮುಖ ನಾಯಕರು ಇದರಲ್ಲಿ ಪಾಲ್ಗೊಂಡು ಭಾರತದಲ್ಲಿ ಈಸ್ಟ ಇಂಡಿಯಾ ಕಂಪನಿಯ ಆಳ್ವಿಕೆ ರದ್ದು ಪಡಿಸಿದರು ಎಂದು ತಿಳಿಸಿದರು.ಪ್ರಾ. ಪ್ರೊ.ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು.
ಪ್ರೊ.ನಾಗರಾಜ ಗವಿಯಪ್ಪನವರ, ಪ್ರೊ. ಕೃಷ್ಣ ಎಲ್.ಎಚ್., ನೀಲಾಂಬಿಕ ಹರವಿ, ಅಶ್ವಿತಾ ಜಿ., ಅನಿತಾ ಮಲ್ಲಾಡದ, ಪವಿತ್ರಾ ಹಿತ್ತಲಮನಿ, ಲಕ್ಮಿ ಕೆ., ಸಂಜನಾ ಪಾಟೀಲ ಉಪಸ್ಥಿತರಿದ್ದರು.