ಮಳವಳ್ಳಿ ಪಟ್ಟಣದಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತ್ಯುತ್ಸವದಲ್ಲಿ ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಯಾದ ರಾಷ್ಟ್ರೀಯ ಗ್ರಾಮೀಣ ಜೀವನೋಪಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ 27 ಗ್ರಾಮ ಪಂಚಾಯ್ತಿ ಒಕ್ಕೂಟದ ಸದಸ್ಯೆಯರ ಉತ್ಸಾಹ ಎದ್ದು ಕಂಡಿತು.
ಮಳವಳ್ಳಿ:
ಪಟ್ಟಣದಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತ್ಯುತ್ಸವದಲ್ಲಿ ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಯಾದ ರಾಷ್ಟ್ರೀಯ ಗ್ರಾಮೀಣ ಜೀವನೋಪಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ 27 ಗ್ರಾಮ ಪಂಚಾಯಿತಿ ಒಕ್ಕೂಟದ ಸದಸ್ಯೆಯರ ಉತ್ಸಾಹ ಎದ್ದು ಕಂಡಿತು.ಪ್ರಸಾದ ವ್ಯವಸ್ಥೆ ಮಾಡಿರುವ ಸಭಾಂಗಣ, ವೇದಿಕೆ ಸೇರಿದಂತೆ ಹಲವೆಡೆ ಸಮವಸ್ತ್ರಧಾರಿ ಮಹಿಳೆಯರು ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸಿದರು. ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿರುವುದರಿಂದ ಗ್ರಾಮೀಣ ಪ್ರದೇಶದ ಸ್ವಚ್ಛತೆಗೂ ಮಹಿಳೆಯರು ಮುನ್ನುಡಿ ಬರೆದರು. ಜಯಂತ್ಯುತ್ಸವದಲ್ಲಿ ಜಿಪಂ ಸಿಇಓ ಹಾಗೂ ತಾಪಂ ಇಓ ಮಾರ್ಗದರ್ಶನದಲ್ಲಿ ಸಂಜೀವಿನಿ ಒಕ್ಕೂಟದ 27 ಚಾಲಕಿಯರು ಸೇರಿ 35ಕ್ಕೂ ಅಧಿಕ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ.
ಸುತ್ತೂರು ಕ್ಷೇತ್ರದ ಸೇವೆಯೊಂದಿಗೆ ಸರ್ಕಾರದ ಯೋಜನೆ ಯಶಸ್ವಿಗೆ ಎಲ್ಲರೂ ಶ್ರಮಿಸುತ್ತಿದ್ದೇವೆ ಎಂದು ಸಂಜೀವಿನಿ ಕಾರ್ಯಕ್ರಮದ ತಾಲೂಕು ಕೃಷಿಯೇತರ ಚಟುವಟಿಕೆ ವ್ಯವಸ್ಥಾಪಕಿ ಸೌಮ್ಮ ಕನ್ನಡಪ್ರಭಗೆ ತಿಳಿಸಿದರು.ಜಯಂತ್ಯುತ್ಸವದ ಯಶಸ್ವಿಗೆ ಸ್ವಯಂ ಸೇವಕರ ಸೇವೆ
ಮಳವಳ್ಳಿ: ಪಟ್ಟಣದ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದಲ್ಲಿ 500ಕ್ಕೂ ಹೆಚ್ಚು ಸ್ವಯಂ ಸೇವಕರು ಕಾರ್ಯನಿರ್ವಹಿಸಿ ಯಶಸ್ವಿಗೆ ಶ್ರಮಿಸಿದರು.7 ದಿನಗಳ ಜಯಂತ್ಯುತ್ಸವಕ್ಕೆ ಜೆ.ಎಸ್.ಎಸ್.ವಿದ್ಯಾಪೀಠದ ಸುಮಾರು 50 ಮಂದಿ ಸಿಬ್ಬಂದಿಯು 500 ಸ್ವಯಂ ಸೇವಕರು ವಿವಿಧ ಸಮಿತಿಗಳ ಮೂಲಕ ಸೇವೆ ಸಲ್ಲಿಸಿದರು. ಕಳೆದ ಐದು ದಿನಗಳಿಂದ ಪ್ರತಿನಿತ್ಯ ಲಕ್ಷಾಂತರ ಮಂದಿ ಜಯಂತ್ಯುತ್ಸವದಲ್ಲಿ ಭಾಗಿಯಾಗುತ್ತಿದ್ದು, ಯಾವುದೇ ವ್ಯತ್ಯಾಸವಾಗದಂತೆ ಪೊಲೀಸರು ಸೇರಿದಂತೆ ಎಲ್ಲರೂ ಕರ್ತವ್ಯ ನಿರ್ವಹಿಸಿದರು.
ವೇದಿಕೆಯ ಸುತ್ತ, ವಸ್ತು ಪ್ರದರ್ಶನ ಮಳಿಗೆಗಳು, ದಾಸೋಹದ ವಿಭಾಗ, ಪಾರ್ಕಿಂಗ್ ಸ್ಥಳ ಸೇರಿದಂತೆ ಹಲವೆಡೆ ಪುರಸಭೆಯ ಪೌರಕಾರ್ಮಿಕರ ಜೊತೆಗೂಡಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡರು. ಪ್ರತಿನಿತ್ಯ ಭೇಟಿ ನೀಡುವ ಜನರ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಇಲಾಖೆಯ 10ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದರು.ಮತ್ತೊಂದೆಡೆ ವಸ್ತು ಪ್ರದರ್ಶನದ ಮಳಿಗೆಗಳಲ್ಲಿ ಸುತ್ತೂರು ಮಠದ ಧಾರ್ಮಿಕ ಪರಂಪರೆ ನಾಡಿಗೆ ಬಿಂಬಿಸುವ ಪ್ರಯತ್ನ ನಡೆಸಿದರು. ಶಿಕ್ಷಣ ಇಲಾಖೆಯಿಂದ ಗಗನಚುಕ್ಕಿ ಜಲತಾಪದ ವೈಭವ, ರೋಬೋಟ್ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ವಿಜ್ಞಾನದ ಅವಿಷ್ಕಾರಗಳ ಮೂಲಕ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಜನರ ಗಮನ ಸೆಳೆದರು.