ಕೆನರಾ ಕಾಲೇಜು ಸೊಸೈಟಿಯ ಸೇವೆ ಅನನ್ಯ: ರಮೇಶ

| Published : Oct 31 2025, 03:00 AM IST

ಸಾರಾಂಶ

ಪ್ರಾಮಾಣಿಕತೆ ಹಾಗೂ ಕೈ-ಬಾಯಿ ಶುದ್ಧ ಇದ್ದಾಗ ಯಾವುದೇ ಮಹತ್ಕಾರ್ಯಕ್ಕೆ ದಾನಿಗಳ ಕೊರತೆಯಾಗುವುದಿಲ್ಲ.

ಬಾಲಮಂದಿರದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ

ಕನ್ನಡಪ್ರಭ ವಾರ್ತೆ ಕುಮಟಾ

ಶಿಕ್ಷಣ ಕ್ಷೇತ್ರದಲ್ಲಿ ಕೆನರಾ ಕಾಲೇಜು ಸೊಸೈಟಿಯ ಸೇವೆ ಅತ್ಯಂತ ಅನನ್ಯವಾಗಿದೆ. ಜಿಲ್ಲೆಯಲ್ಲಿ ಕಾಲೇಜುಗಳೇ ಇಲ್ಲದ ಕಾಲಘಟ್ಟದಲ್ಲಿ ಕಾಲೇಜು ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳದೀಪವಾಗಿ ಇಂದಿಗೂ ಮುಂದುವರೆದಿರುವುದು ಶಿಕ್ಷಣ ಸಂಸ್ಥೆಯೊಂದು ನೀಡಬಹುದಾದ ಶ್ರೇಷ್ಠ ಹಾಗೂ ಸಾರ್ಥಕ ಸೇವೆಯಾಗಿದೆ ಎಂದು ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ರಮೇಶ ಸೀತಾರಾಮ ಸುಕ್ತಂಕರ ತಿಳಿಸಿದರು.

ಕೆನರಾ ಕಾಲೇಜು ಸೊಸೈಟಿಯ ಡಾ. ಬಾಳಿಗಾ ಆಂಗ್ಲ ಮಾಧ್ಯಮ ಶಾಲೆಯ ಸನಿಹದಲ್ಲಿ ರಮಾ-ಮಾಧವ ಸ್ಮೃತಿ ಸಭಾಭವನ ಹಾಗೂ ಗೋಪಾಲ ಮ್ಹಾಳಪ್ಪ ಪೈ ಬಾಲಮಂದಿರದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೆನರಾ ಕಾಲೇಜು ಸೊಸೈಟಿಯ ಉಪಾಧ್ಯಕ್ಷ ಡಿ.ಎಂ. ಕಾಮತ ಮಾತನಾಡಿ, ಎಲ್.ಎಸ್.ಕಾಮತ, ಎನ್.ಟಿ.ಹೆಗಡೆ, ಡಾ. ಎ.ವಿ.ಬಾಳಿಗಾ ಮುಂತಾದ ತ್ಯಾಗಮಯಿ ಶಿಕ್ಷಣಾಸಕ್ತರು ಹಾಗೂ ದಾನಿಗಳ ಕಾರಣದಿಂದ ಕೆನರಾ ಕಾಲೇಜು ಸೊಸೈಟಿ ೧೯೪೫ ರಲ್ಲಿ ಆರಂಭಗೊಂಡಿತು. ಪ್ರಾಮಾಣಿಕತೆ ಹಾಗೂ ಕೈ-ಬಾಯಿ ಶುದ್ಧ ಇದ್ದಾಗ ಯಾವುದೇ ಮಹತ್ಕಾರ್ಯಕ್ಕೆ ದಾನಿಗಳ ಕೊರತೆಯಾಗುವುದಿಲ್ಲ. ಈಗ ಆಂಗ್ಲಮಾಧ್ಯಮ ಶಾಲೆಗೆ ಸಭಾಭವನ ಹಾಗೂ ಬಾಲಮಂದಿರ ಕಟ್ಟಡದ ಅಗತ್ಯವಿತ್ತು. ದಾನಿಗಳ ನೆರವಿನಿಂದ ಇವುಗಳನ್ನು ಕೂಡಾ ಸುಸಜ್ಜಿತವಾಗಿ ನಿರ್ಮಿಸುತ್ತಿದ್ದೇವೆ ಎಂದರು.

ದಾನಿ ವತ್ಸಲಾ ಸುಧೀರ ಕಾಮತ, ಸೊಸೈಟಿಯ ಅಧ್ಯಕ್ಷ ಆರ್.ಆರ್. ಕಾಮತ ಮಾತನಾಡಿದರು. ದಾನಿ ಜಯಪ್ರಕಾಶ ಮಾಧವ ಪ್ರಭು ಶುಭ ಹಾರೈಸಿದರು. ದಾನಿಗಳನ್ನು ಸನ್ಮಾನಿಸಲಾಯಿತು. ಪ್ರಶಾಂತ ಪಟಗಾರ, ಜೀವಾ ಹರಿಕಂತ್ರ, ಸಂಕಲ್ಪ ಪ್ರಭುರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ವಾಸುದೇವ ಹನುಮಂತ ನಾಯಕ ಬೆಣ್ಣೆ, ಮುರಲೀಧರ ಯಶವಂತ ಪ್ರಭು, ನಾರಾಯಣ ರಾಮದಾಸ ಶಾನಭಾಗ, ಅತುಲ ವಿ. ಕಾಮತ, ಹರೀಶ ಬಾಲಕೃಷ್ಣ ಗೋಳಿ, ರವಿಕಾಂತ ಶ್ರೀನಿವಾಸ ಕಾಮತ, ಪವನಕುಮಾರ ವಿನೋದ ಪ್ರಭು, ಪ್ರಭಾಕರ ಎಸ್. ಬಾಳಗಿ, ಚಂದ್ರಕಾಂತ ಎಂ. ಶಾನಭಾಗ, ಸಮಿತಿ ಸದಸ್ಯರಾದ ಅನಂತ ಪಿ. ಶಾನಭಾಗ, ರತ್ನಾಕರ ಬಿಕ್ಕು ಕಾಮತ, ಡಾ. ವಿವೇಕ ಎಂ. ಪೈ, ಡಾ. ಅಶೋಕ ಕೃಷ್ಣ ಭಟ್, ಜಯಶ್ರೀ ವಿ. ಕಾಮತ, ಜೀವನ ವಿ. ಕವರಿ, ವಸಂತ ಪಿ. ಶಾನಭಾಗ, ಮುರಲೀಧರ ಮಾಧವ ಭಟ್, ಸುರೇಶ ವೆಂಕಟೇಶ ಭಟ್, ವೆಂಕಟ್ರಮಣ ಎಸ್. ನಾಯಕ, ಕಿರಣ ಕಾಶಿನಾಥ ನಾಯಕ, ಸಂದೀಪ ವಿಠ್ಠಲ ನಾಯಕ, ಕಮಲಾ ಬಾಳಿಗಾದ ಪ್ರಾಚಾರ್ಯೆ ಡಾ. ಪ್ರೀತಿ ಭಂಡಾರಕರ, ಕಟ್ಟಡ ನಿರ್ಮಾತೃ ವಿನಾಯಕ ಬಾಳೇರಿ ಇತರರು ಇದ್ದರು.

ಬಾಳಿಗಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯದರ್ಶಿ ಯಶವಂತ ವೆಂಕಟೇಶ ಶಾನಭಾಗ ಸ್ವಾಗತಿಸಿದರು. ಪ್ರೊ. ಜಿ.ಡಿ. ಭಟ್, ಪ್ರೊ. ಗಿರೀಶ ನಾಯ್ಕ ನಿರ್ವಹಿಸಿದರು. ಕೆನರಾ ಕಾಲೇಜು ಸೊಸೈಟಿ ಕಾರ್ಯಾಧ್ಯಕ್ಷ ಹನುಮಂತ ಶಾನಭಾಗ ವಂದಿಸಿದರು. ಯೋಜಿತ ಕಟ್ಟಡಗಳ ವಿನ್ಯಾಸದ ಡಿಜಿಟಲ್ ಪ್ರಾತ್ಯಕ್ಷಿಕೆಯನ್ನು ಕೃಷ್ಣ ಕಿಣಿ ಪ್ರದರ್ಶಿಸಿದರು.