ಪೌರ ಕಾರ್ಮಿಕರ ಸೇವೆ ಅಪ್ರತಿಮವಾಗಿದೆ: ಸಚಿವ ಖಂಡ್ರೆ

| Published : Sep 24 2025, 01:00 AM IST

ಸಾರಾಂಶ

ಸಮಾಜದ ಸ್ವಚ್ಛತೆ, ಆರೋಗ್ಯ ಹಾಗೂ ಸುಂದರತೆಯ ಹಿತದೃಷ್ಟಿಯಿಂದ ಪ್ರತಿದಿನ ದುಡಿಯುತ್ತಿರುವ ಪೌರ ಕಾರ್ಮಿಕರ ಸೇವೆ ಅಪ್ರತಿಮ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.

ಬೀದರ್: ಸಮಾಜದ ಸ್ವಚ್ಛತೆ, ಆರೋಗ್ಯ ಹಾಗೂ ಸುಂದರತೆಯ ಹಿತದೃಷ್ಟಿಯಿಂದ ಪ್ರತಿದಿನ ದುಡಿಯುತ್ತಿರುವ ಪೌರ ಕಾರ್ಮಿಕರ ಸೇವೆ ಅಪ್ರತಿಮ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.

ಭಾಲ್ಕಿ ಪುರಸಭೆಯಲ್ಲಿ ಮಂಗಳವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದ ನೆಲೆಯಾದ ಈ ಪರಿಶ್ರಮಿ ಕಾರ್ಮಿಕರ ಪರಿಶ್ರಮವಿಲ್ಲದೆ ಸುಂದರ ಹಾಗೂ ಆರೋಗ್ಯಕರ ಸಮಾಜ ಸಾಧ್ಯವಿಲ್ಲ, ಪೌರ ಕಾರ್ಮಿಕರ ಕಲ್ಯಾಣ, ಗೌರವ ಮತ್ತು ಭದ್ರತೆಗಾಗಿ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಅವರ ಜೀವನಮಟ್ಟ ಸುಧಾರಣೆಗೆ ನೂತನ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರು, ಹಾಗೂ ಪೌರಕಾರ್ಮಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.