ದಾಬಸ್‍ಪೇಟೆ: ಸಿದ್ದಗಂಗೆಯ ತ್ರಿವಿಧ ದಾಸೋಹಿ ಲಿಂ.ಶಿವಕುಮಾರ ಸ್ವಾಮೀಜಿಯ ಪುಣ್ಯಸ್ಮರಣೆಯ ಪ್ರಯುಕ್ತ ಮಠಕ್ಕೆ ಆಗಮಿಸುವ ಭಕ್ತರ ಪ್ರಸಾದದ ಸಿದ್ಧತೆಯಲ್ಲಿ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ 25 ಅಡುಗೆ ಭಟ್ಟರು ಮತ್ತು 80 ಮಹಿಳೆಯರು ಸ್ವಯಂ ಪ್ರೇರಿತವಾಗಿ ತರಕಾರಿ, ನೀರು ಮತ್ತು ಸ್ವಚ್ಛತೆ ನಿರ್ವಹಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಗ್ರಾಮದ ಯಶೋಧ ಪ್ರತಿಕ್ರಿಯಿಸಿ, ಸಿದ್ದಗಂಗಾ ಶ್ರೀಗಳು ಹೊನ್ನೇನಹಳ್ಳಿ ಗ್ರಾಮಸ್ಥರ ಬಗ್ಗೆ ಅಪಾರ ಪ್ರೀತಿ ವಿಶ್ವಾಸ ಇಟ್ಟಿದ್ದರು. ಗ್ರಾಮದಲ್ಲಿ ನಡೆಯುವ ಜಾತ್ರೆ, ಸಭೆ, ಸಮಾರಂಭಗಳಿಗೆ ಹಾಜರಾಗಿ ಗ್ರಾಮಸ್ಥರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಗ್ರಾಮಸ್ಥರು ಶ್ರೀಗಳ ಜನ್ಮದಿನದಂದು ಹಾಗೂ ಪುಣ್ಯಸ್ಮರಣೆಯಂದು ಸ್ವಯಂಪ್ರೇರಿತರಾಗಿ ಭಾಗವಹಿಸಿ ದಾಸೋಹ ಕಾರ್ಯದಲ್ಲಿ ಭಾಗವಹಿಸುತ್ತಿದ್ದೇವೆ. ಈಗಿನ ಪೂಜ್ಯರುಗಳು ಸಹ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ ಎಂದರು.

ನೆಲಮಂಗಲ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷೆ ವೇದಾವತಿ ಸೇರಿದಂತೆ ಹೊನ್ನೇನಹಳ್ಳಿ ಗ್ರಾಮದ ಮಹಿಳೆಯರಾದ ರಾಜೇಶ್ವರಿ, ವನಜಾಕ್ಷಮ್ಮ, ಮಂಗಳಮ್ಮ, ಮಂಜುಳ, ಗಿರಿಜಮ್ಮ, ರತ್ನಮ್ಮ, ದ್ರಾಕ್ಷಾಯಿಣಿ, ಜಗದಾಂಬ, ಶಿವರುದ್ರಮ್ಮ, ಮಂಜುಳ, ಕಾಶಿಯಮ್ಮ, ರೇಣುಕಾ ಇತರರಿದ್ದರು.

ಪೋಟೋ 2 : ಸೋಂಪುರ ಹೋಬಳಿಯ ಹೊನ್ನೇನಹಳ್ಳಿಯ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ತರಕಾರಿ, ನೀರು ಮತ್ತು ಸ್ವಚ್ಛತೆ ನಿರ್ವಹಿಸುವ ಕಾಯಕದಲ್ಲಿ ತೊಡಗಿ ಕಿರಿಯ ಶ್ರೀಗಳ ಆಶೀರ್ವಾದ ಪಡೆದಿರುವುದು