ಬಡವರ ಸೇವೆಯು ಶ್ರೀರಾಮನ ಸೇವೆಯೇ ಆಗಿದೆ: ಪೇಜಾವರ ಶ್ರೀ

| Published : Mar 20 2024, 01:17 AM IST

ಬಡವರ ಸೇವೆಯು ಶ್ರೀರಾಮನ ಸೇವೆಯೇ ಆಗಿದೆ: ಪೇಜಾವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಉದ್ಯಮಿ ರಾಜಗೋಪಾಲ್ ಆಚಾರ್ಯ ಅವರು ಅಯೋಧ್ಯೆಗೆ ತೆರಳಿದ್ದಾಗ ಶ್ರೀರಾಮಮಂದಿರದಲ್ಲಿ ಕಲಶ ಪೂಜೆಯ ಸಂದರ್ಭ ಮಾಡಿದ ಸಂಕಲ್ಪದಂತೆ ಆಸರೆ ಚಾರಿಟೇಬಲ್ ಟ್ರಸ್ಟ್ ಮೂಲಕ ಇಲ್ಲಿನ ಗುಂಡಿಬೈಲಿನ ಪಾಡಿಗಾರಿನಲ್ಲಿ ಮಾಲಾಶ್ರೀ ಭಟ್ ಕುಟುಂಬಕ್ಕೆ ಮನೆ ಕಟ್ಟಿಕೊಡಲು ನಿರ್ಧರಿಸಿದ್ದು, ಅದರ ಶಿಲಾನ್ಯಾಸವನ್ನು ಪೇಜಾವರ ಶ್ರೀಗಳು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಬಡವರಿಗೆ ಸೂರು ಕಲ್ಪಿಸಿದರೆ, ಅದೂ ಅಯೋಧ್ಯೆ ಶ್ರೀರಾಮಚಂದ್ರನಿಗೆ ಸಲ್ಲಿಸುವ ಸೇವೆಯೇ ಆಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.ಶ್ರೀಗಳ ರಾಮ ರಾಜ್ಯದ ಪರಿಕಲ್ಪನೆಯಂತೆ ಉಡುಪಿ ಉದ್ಯಮಿ ರಾಜಗೋಪಾಲ್ ಆಚಾರ್ಯ ಅವರು ಅಯೋಧ್ಯೆಗೆ ತೆರಳಿದ್ದಾಗ ಶ್ರೀರಾಮಮಂದಿರದಲ್ಲಿ ಕಲಶ ಪೂಜೆಯ ಸಂದರ್ಭ ಮಾಡಿದ ಸಂಕಲ್ಪದಂತೆ ಆಸರೆ ಚಾರಿಟೇಬಲ್ ಟ್ರಸ್ಟ್ ಮೂಲಕ ಇಲ್ಲಿನ ಗುಂಡಿಬೈಲಿನ ಪಾಡಿಗಾರಿನಲ್ಲಿ ಮಾಲಾಶ್ರೀ ಭಟ್ ಕುಟುಂಬಕ್ಕೆ ಮನೆ ಕಟ್ಟಿಕೊಡಲು ನಿರ್ಧರಿಸಿದ್ದು, ಅದರ ಶಿಲಾನ್ಯಾಸವನ್ನು ಪೇಜಾವರ ಶ್ರೀಗಳು ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕೋಶಾಧಿಕಾರಿ ಸತೀಶ್ ಕುಲಾಲ್, ಸದಸ್ಯರಾದ ಸಂದೀಪ್ ಸನಿಲ್, ವಿದ್ಯಾ ಶ್ಯಾಮ್ ಸುಂದರ್, ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಸದಸ್ಯರಾದ ಸಂಧ್ಯಾ ರಮೇಶ್, ಸಂಧ್ಯಾ ಪ್ರಭು, ಸಂತೋಷ ಕಿಣಿ, ನಗರಸಭಾ ಸದಸ್ಯೆ ಗೀತಾ ಶೇಟ್, ಮುರಳಿಧರ್ ರಾವ್ ಗುಂಡಿಬೈಲು, ಮಂಜುನಾಥ್ ಹೆಬ್ಬಾರ್, ಭಾರತಿ ಚಂದ್ರಶೇಖರ್, ಸುಜಲ ಸತೀಶ್, ರಾಕೇಶ್ ಜೋಗಿ, ವಾಸುದೇವ ಭಟ್ ಪರಂಪಳ್ಳಿ ಉಪಸ್ಥಿತರಿದ್ದರು.ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಈ ಮನೆಗೆ ಆರ್ಥಿಕ ಸಹಕಾರ ನೀಡಿದ ರಾಜಗೋಪಾಲ ಆಚಾರ್ಯ ದಂಪತಿ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ಮನೆಯ ಫಲಾನುಭವಿಯಾದ ಮಾಲಾಶ್ರೀ ಭಟ್ ಪಾಡಿಗಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.