ದಾವಣಗೆರೆ ನಗರದ ಹೊರವಲಯದಲ್ಲಿರುವ ಅಪೂರ್ವ ಹೋಟೆಲ್‌ನಲ್ಲಿ ಮಂಗಳವಾರ ಹಿರಿಯ ಚೇತನ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

- ಅಪೂರ್ವ ಹೋಟೆಲ್‌ನಲ್ಲಿ ಎಸ್‌ಎಸ್‌ಗೆ ಭಾವಪೂರ್ಣ ಶ್ರದ್ಧಾಂಜಲಿ

- - -

ದಾವಣಗೆರೆ: ನಗರದ ಹೊರವಲಯದಲ್ಲಿರುವ ಅಪೂರ್ವ ಹೋಟೆಲ್‌ನಲ್ಲಿ ಮಂಗಳವಾರ ಹಿರಿಯ ಚೇತನ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಾರದ ಮುನಿ ಟ್ರಸ್ಟ್‌ ಅಧ್ಯಕ್ಷ, ಹೋಟೆಲ್ ಉದ್ಯಮಿ, ಎಸ್‌ಎಸ್‌ ಅವರ ಆಪ್ತ ಸ್ನೇಹಿತ ಅಣಬೇರು ರಾಜಣ್ಣ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಅಪಾರ ದೈವಭಕ್ತರಾಗಿದ್ದರು. ಅವರಲ್ಲಿ ಎಂದೆಂದಿಗೂ ಅಹಂಕಾರ ದರ್ಪ ಇರಲಿಲ್ಲ. ಎಲ್ಲರನ್ನೂ ಗೌರವದಿಂದ ನೋಡಿಕೊಳ್ಳುತ್ತಿದ್ದರು. ನಮ್ಮ ಸಂಸ್ಥೆಯ ಮೂರು ಹೋಟೆಲ್‌ಗಳನ್ನೂ ಅವರೇ ಉದ್ಘಾಟಿಸಿದ್ದರು. ಎಲ್ಲ ವರ್ಗದ ಜನರಿಗೆ, ಮಠಗಳಿಗೆ ಸಾಕಷ್ಟು ಸಹಾಯಹಸ್ತ ನೀಡಿದ್ದಾರೆ. ನನ್ನ ಮತ್ತು ಅವರ ಸ್ನೇಹ ಸುಮಾರು 40-50 ವರ್ಷಗಳಷ್ಟು. ಅವರ ಮಾರ್ಗದರ್ಶನ, ಅವರ ಕಾರ್ಯದಕ್ಷತೆ ಎಂದಿಗೂ ಜೀವಂತ ಎಂದು ಹೇಳಿದರು.

ಅಖಿಲ ಬಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ ಮಾತನಾಡಿ, ಶಾಮನೂರು ಶಿವಶಂಕರಪ್ಪನವರು ಶಿಕ್ಷಣ ಪ್ರೇಮಿಗಳಾಗಿದ್ದು, ದಾವಣಗೆರೆಯನ್ನು ವಿದ್ಯಾನಗರಿಯನ್ನಾಗಿ ಮಾಡಿದ್ದಾರೆ. ಅವರು ಎಂದಿಗೂ ಅವಿಸ್ಮರಣಿಯ ಎಂದರು.

ಸಮಾರಂಭದಲ್ಲಿ ಕಲ್ಪನಹಳ್ಳಿ ಬಸವಲಿಂಗಪ್ಪ, ಪಲ್ಲಾಗಟ್ಟಿ ನಾಗರಾಜ, ಶಾಮನೂರು ಬಸಣ್ಣ, ಬಿ.ಟಿ.ಪ್ರಕಾಶ, ಶಸಾಪ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಒಡ್ಡಿನಹಳ್ಳಿ ಷಡಕಪ್ಪ, ಡಾ. ಎಚ್.ಎಸ್. ಮಂಜುನಾಥ ಕುರ್ಕಿ, ಕಕ್ಕರಗೊಳ್ಳ ಪರಮೇಶ್ವರಪ್ಪ, ನಾಗರಾಜ ಸಿರಿಗೆರೆ, ಮಲ್ಲಿಕಾರ್ಜುನ ಸ್ವಾಮಿ, ಮೆಳ್ಳೆಕಟ್ಟೆ ಶ್ರೀನಿವಾಸ್, ವೀಣಾ ಮಂಜುನಾಥ, ವನಜಾ ಮಹಾಲಿಂಗಯ್ಯ, ಸುವರ್ಣಮ್ಮ, ಸಂತೋಷ ಇತರರು ಇದ್ದರು.

- - -

-16ಕೆಡಿವಿಜಿ42:

ದಾವಣಗೆರೆಯ ಅಪೂರ್ವ ಹೋಟೆಲ್‌ನಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.