ಅನ್ನದಾನೀಶ್ವರ ಮಠದ 8ನೇ ಪೀಠಾಧಿಪತಿಗಳ 100ನೇ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಪೂಜ್ಯರು ಸಮಾಜಕ್ಕೆ ಮಾಡಿದ ಕಾರ್ಯಗಳನ್ನು ಸ್ಮರಿಸುವುದು ಅತ್ಯಂತ ಅವಶ್ಯವಾಗಿದೆ.
ಮುಂಡರಗಿ: ಮುಂಡರಗಿ ಅನ್ನದಾನೀಶ್ವರ ಮಠದ 8ನೇ ಪೀಠಾಧಿಪತಿಗಳು ಶ್ರೀಮಠದ ಆಸ್ತಿಯನ್ನು ಪುರಸಭೆಗೆ, ತಾಲೂಕು ಸರ್ಕಾರಿ ಆಸ್ಪತ್ರೆ ಮತ್ತು ಶಾಲೆಗಳಿಗೆ ದಾನ ನೀಡಿ ಸಾಮಾಜಿಕ ಕಳಕಳಿ ಮೆರೆದರು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಇತ್ತೀಚೆಗೆ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಜರುಗಿದ 1840ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಅನ್ನದಾನೀಶ್ವರ ಮಠದ 8ನೇ ಪೀಠಾಧಿಪತಿಗಳ 100ನೇ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಪೂಜ್ಯರು ಸಮಾಜಕ್ಕೆ ಮಾಡಿದ ಕಾರ್ಯಗಳನ್ನು ಸ್ಮರಿಸುವುದು ಅತ್ಯಂತ ಅವಶ್ಯವಾಗಿದೆ. ಶ್ರೀಗಳ ಕಾಲದಲ್ಲಿ ಜ.ಅ. ವಿದ್ಯಾ ಸಮಿತಿಯು ಬೆಳೆದು ಬಂತು. ಈಗ 33 ಅಂಗಸಂಸ್ಥೆಗಳನ್ನು ಹೊಂದಿ ಹೆಮ್ಮರವಾಗಿ ಬೆಳೆದು ನಿಂತಿದೆ. ಶ್ರೀಗಳ ಶೈಕ್ಷಣಿಕ ಕಾರ್ಯವನ್ನು ಎಲ್ಲರೂ ಮೆಚ್ಚಬೇಕು ಎಂದರು.ಶಿಕ್ಷಕಿ ಶಕುಂತಲಾ ಹಂಪಿಮಠ 8ನೇ ಪೀಠಾಧಿಪತಿಗಳ ಕುರಿತು ಉಪನ್ಯಾಸ ನೀಡಿ, ಶ್ರೀಗಳ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕೆಲಸಗಳನ್ನು ತಿಳಿಸಿದರು. ಈ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾಗಿರುವ ಸಂತೋಷ ಮುರಡಿ ಮತ್ತು ಮಹಾಲಿಂಗಯ್ಯ ಹಿರೇಮಠ ಅವರಿಗೆ ಶ್ರೀಗಳಿಂದ ಗುರುರಕ್ಷೆ ಜರುಗಿತು. ಜ.ಅ. ಅಕ್ಕನ ಬಳಗದವರಿಂದ ಸಂಗೀತ ಸೇವೆ ಜರುಗಿತು. ಭಕ್ತಿಸೇವೆ ವಹಿಸಿಕೊಂಡಿದ್ದ ಡಾ. ಗಂಗಾಧರ ಪಿ., ಅರ್ಚನಾ ಹೊಸಮಠ ದಂಪತಿಗಳ ಪರವಾಗಿ ಎಸ್.ಎಂ. ಹೊಸಮಠ ದಂಪತಿಗಳನ್ನು ಸನ್ಮಾನಿಸಲಾಯಿತು. ಚನ್ನವೀರಯ್ಯ ಹಿರೇಮಠ ಪ್ರಾರ್ಥಿಸಿದರು. ಮುಖ್ಯಶಿಕ್ಷಕಿ ಸರೋಜಾ ಹಿರೇಮಠ ನಿರೂಪಿಸಿದರು.ಇಂದಿನಿಂದ ಗ್ರಾಮದೇವತೆ ಜಾತ್ರೆ
ಮುಂಡರಗಿ: ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಡಿ. 8ರಿಂದ 12ರ ವರೆಗೆ ಗ್ರಾಮದೇವತೆಯ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.ಡಿ. 8ರಂದು ಸಂಜೆ 6 ಗಂಟೆಗೆ ಗ್ರಾಮದೇವತೆ ದೇವಸ್ಥಾನದ ಆವರಣದಲ್ಲಿ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ. ಕಲಕೇರಿ- ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಜನಹಳ್ಳಿಯ ಡಾ. ಪ್ರಸನ್ನಾನಂದಪುರಿ ಸ್ವಾಮೀಜಿ ಧರ್ಮಸಭೆಯ ಸಾನ್ನಿಧ್ಯ ವಹಿಸುವರು.ಡಿ. 9ರಂದು ಪ್ರಾಥಃಕಾಲ ವಿರುಪಕ್ಷಯ್ಯ ಹಿರೇಮಠ, ವಿಶ್ವನಾಥಯ್ಯ ಹಿರೇಮಠ, ಶಿವಲಿಂಗಯ್ಯ ಗುರುವಿನ ಹಾಗೂ ತೀರ್ಥೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮದೇವತೆ ಮೂರ್ತಿಯನ್ನು ತುಂಗಭದ್ರಾ ನದಿ ತೀರಕ್ಕೆ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುವುದು.ಬೆಳಗ್ಗೆ 6ಗಂಟೆಗೆ ಸಾವಿರಾರು ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಮಂಗಳ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆಯ ಮೂಲಕ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಆವವರಣಕ್ಕೆ ಕರೆತರಲಾಗುವುದು. ಮಧ್ಯರಾತ್ರಿ 12 ಗಂಟೆಗೆ ಪಟಾಕಿ ಸಿಡಿಸುತ್ತಾ ದೇವಿಯನ್ನು ಚೌತಮನೆ ಕಟ್ಟೆಗೆ ಕೊಂಡೊಯ್ಯಲಾಗುವುದು.ಡಿ. 10ರಂದು ಸಂಜೆ 5 ಗಂಟೆಗೆ ಗ್ರಾಮದೇವತೆಯನ್ನು ಗುಡಿ ತುಂಬಿಸಲಾಗುವುದು. ಡಿ. 11ರಂದು ಗಣಪತಿ ಪೂಜೆ, ಮಹಾಸಂಕಲ್ಪ ಹಾಗೂ ಮಹಾ ಮಂಗಳಾರತಿ ಜರುಗಲಿದೆ.
ರಾತ್ರಿ ಮ್ಯೂಜಿಕ್ ಮೈಲಾರಿ ಹಾಗೂ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಡಿ. 12ರಂದು ಬೆಳಗ್ಗೆ ದೇವಿಗೆ ಪಂಚಾಮೃತಾಭಿಷೇಕ, ಅಲಂಕಾರ, ದೇವಿಯ ಶತನಾಮಾವಳಿ ಜರುಗಲಿವೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.