- ಸಂಪುಟದಲ್ಲಿ ಶಾಸಕ ಶಿವಗಂಗಾಗೆ ಸಚಿವ ಸ್ಥಾನ ನೀಡಲು ಸಲಹೆ
- - -ಚನ್ನಗಿರಿ: ಚನ್ನಗಿರಿ ವಿಧಾನಸಭಾ ಕ್ಷೇತ್ರವು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಲು ಕ್ಷೇತ್ರದ ಶಾಸಕರಾದ ಬಸವರಾಜು ವಿ. ಶಿವಗಂಗಾ ಅವರಿಗೆ ನೂತನ ಮುಖ್ಯಮಂತ್ರಿ ಆಗಲಿರುವ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಇಲ್ಲಿಯ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಭಾನುವಾರ ಸಂಜೆ ಹಿರೇಮಠದ ಆವರಣದಲ್ಲಿ ಮೇ 23ರಿಂದ 31ರವರೆಗೆ ಲೋಕಕಲ್ಯಾಣಾರ್ಥ 9 ದಿನಗಳ ಕಾಲ ಪಂಚಾಕ್ಷರಿ ಮಂತ್ರವನ್ನು ಪಠಿಸುತ್ತಾ ಪರಮಾತ್ಮನ ಧ್ಯಾನದಲ್ಲಿ ಮೌನಾಚರಣೆ ನಡೆಸಿ ಸಂಜೆ ನಡೆದ ಶಿವಾನುಭವ ಗೋಷ್ಠಿ ದಿವ್ಯಸಾನ್ನಿಧ್ಯ ಅವರು ಆಶೀರ್ವಚನ ನೀಡಿದರು.ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲಿ ರಾಜ್ಯದ ಅಭಿವೃದ್ದಿಯೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ಆಡಳಿತ ನಡೆಸಬೇಕಾಗಿದೆ. ಬಡವರ, ಕೂಲಿ ಕಾರ್ಮಿಕರ, ರೈತರ ಪರವಾಗಿ ಆಡಳಿತ ನೀಡುವಂತಹ ಕೆಲಸ ನಮ್ಮ ಸರ್ಕಾರಗಳು ಮಾಡಬೇಕಾಗಿದೆ ಎಂದರು.
ರಾಜ್ಯವನ್ನಾಳುವ ರಾಜಕೀಯ ಪಕ್ಷಗಳು ಯಾವುದೇ ಆಗಿರಲಿ. ಚುನಾವಣೆಗಳ ಸಂದರ್ಭಗಳಲ್ಲಿ ಪಾರ್ಟಿ ಪಕ್ಷಗಳೆಂಬ ಭಿನ್ನತೆಗಳಿರಲಿ. ಆದರೆ, ಚುನಾಯಿತರಾದ ಮೇಲೆ ಅಧಿಕಾರ ಸಿಕ್ಕಾಗ ಕ್ಷೇತ್ರ ಅಭಿವೃದ್ಧಿ ದೃಷ್ಠಿಯಿಂದ ಮಠಾಧಿಪತಿಗಳಾದ ನಾವುಗಳು ನಮ್ಮ ಕ್ಷೇತ್ರದ ಶಾಸಕನಿಗೆ ಮಂತ್ರಿಸ್ಥಾನ ನೀಡಿರಿ ಎಂದು ಸರ್ಕಾರವನ್ನು ಒತ್ತಾಯಪಡಿಸುವಂತಹ ಅಧಿಕಾರ ಇದೆ ಎಂದು ಹೇಳಿದರು.
ಈ ಸಂದರ್ಭ ವೀರಶೈವ ಸಮಾಜದ ಅಧ್ಯಕ್ಷ ಚ.ಮ.ಗುರುಸಿದ್ದಯ್ಯ, ದೈವ ಸಂಸ್ಕೃತಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬೂದಿಸ್ವಾಮಿ, ನಿವೃತ ಉಪನ್ಯಾಸಕ ರಾಜಶೇಖರಯ್ಯ, ಬಸವರಾಜಪ್ಪ, ಪಾಂಡೋಮಟ್ಟಿ ವೀರಭದ್ರಪ್ಪ, ರಾಜಶೇಖರಯ್ಯ ಮಠದ್, ಕರಿಸಿದ್ದಪ್ಪ ಮಾಸ್ತರ್, ಕೆ.ಎಸ್.ಆರ್.ಟಿ.ಸಿ.ಯ ನಿವೃತ್ತ ಅಧಿಕಾರಿ ಗುರುಮೂರ್ತಿ, ಎಚ್.ಬಿ. ರುದ್ರಯ್ಯ, ಚಂದ್ರಯ್ಯ, ಹಾಲಸಿದ್ದಪ್ಪ, ಜ್ಯೋತಿ ಕೊಟ್ರೇಶ್ ಕೋರಿ, ಭಕ್ತರು ಭಾಗವಹಿಸಿದ್ದರು.
- - --1ಕೆಸಿಎನ್ಜಿ1: ಚನ್ನಗಿರಿ ಹಿರೇಮಠದ ಆವರಣದಲ್ಲಿ ನಡೆದ ಶಿವಾನುಭವ ಗೋಷ್ಠಿಯಲ್ಲಿ ಹಿರೇಮಠದ ಶ್ರೀಗಳು ಆಶೀರ್ವಚನ ನೀಡಿದರು.