ಸಾರಾಂಶ
ಕಳ್ಳತನವಾಗಿದ್ದ ಎಟಿಎಂ ಮಷಿನ್, ನಾಲೆಯಲ್ಲಿ ಪತ್ತೆಯಾಗಿದೆ. ನಗರದ ಹೊರವಲಯದ ಶಂಕರನಹಳ್ಳಿ ಗ್ರಾಮದ ಬಳಿ ಇರುವ ನಾಲೆಯಲ್ಲಿ ಎಟಿಎಂ ಮಷಿನ್ ಪತ್ತೆಯಾಗಿದ್ದು ಹಣ ತೆಗೆದುಕೊಂಡು ಎಟಿಎಂ ಮಷಿನ್ ಅನ್ನು ಕಳ್ಳರು ನಾಲೆಯಲ್ಲಿ ಬಿಸಾಡಿ ಹೋಗಿದ್ದಾರೆ. ಕಳೆದ ಜನವರಿ 29ರಂದು ಹನುಮಂತಪುರದಲ್ಲಿ ಎಟಿಎಂ ಮಿಷನ್ ಕಳ್ಳತನವಾಗಿತ್ತು. ಹಣದ ಸಮೇತ ಕಳ್ಳರು ಇಂಡಿಯಾ ಒನ್ ಎಟಿಎಂ ಮಷಿನ್ ಕದ್ದೊಯ್ದಿದ್ದರು. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಹಾಸನ: ಇತ್ತೀಚಿಗೆ ನಗರದ ಹೊರವಲಯದಲ್ಲಿ ಕಳ್ಳತನವಾಗಿದ್ದ ಎಟಿಎಂ ಮಷಿನ್, ನಾಲೆಯಲ್ಲಿ ಪತ್ತೆಯಾಗಿದೆ.
ನಗರದ ಹೊರವಲಯದ ಶಂಕರನಹಳ್ಳಿ ಗ್ರಾಮದ ಬಳಿ ಇರುವ ನಾಲೆಯಲ್ಲಿ ಎಟಿಎಂ ಮಷಿನ್ ಪತ್ತೆಯಾಗಿದ್ದು ಹಣ ತೆಗೆದುಕೊಂಡು ಎಟಿಎಂ ಮಷಿನ್ ಅನ್ನು ಕಳ್ಳರು ನಾಲೆಯಲ್ಲಿ ಬಿಸಾಡಿ ಹೋಗಿದ್ದಾರೆ.ಕಳೆದ ಜನವರಿ 29ರಂದು ಹನುಮಂತಪುರದಲ್ಲಿ ಎಟಿಎಂ ಮಿಷನ್ ಕಳ್ಳತನವಾಗಿತ್ತು. ಹಣದ ಸಮೇತ ಕಳ್ಳರು ಇಂಡಿಯಾ ಒನ್ ಎಟಿಎಂ ಮಷಿನ್ ಕದ್ದೊಯ್ದಿದ್ದರು. ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದ ಎಟಿಎಂ ಮಿಷನ್ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧಪಟ್ಟಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದೀಗ ಚಾನಲ್‌ನಲ್ಲಿ ಎಟಿಎಂ ಮಷಿನ್ ಪತ್ತೆಯಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.