ಸರ್ಕಾರಿ ಕಾಲೇಜಿನ ಹಳೇ ವಿದ್ಯಾರ್ಥಿಗಳ ಹೋರಾಟ ಸ್ಮರಣೀಯ

| Published : Sep 12 2025, 01:00 AM IST

ಸರ್ಕಾರಿ ಕಾಲೇಜಿನ ಹಳೇ ವಿದ್ಯಾರ್ಥಿಗಳ ಹೋರಾಟ ಸ್ಮರಣೀಯ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಸರ್ಕಾರಿ ಜಾಗ ಮಂಜೂರಿನೊಂದಿಗೆ ಕಾಲೇಜಿನ ಅಭಿವೃದ್ಧಿ ಕಾರ್ಯಗಳಲ್ಲಿ ಹಳೇ ವಿದ್ಯಾರ್ಥಿಗಳ ಪಾತ್ರ ಸ್ಮರಿಸುವಂತದ್ದು ಎಂದು ಪ್ರಾಂಶುಪಾಲ ಬಸವರಾಜ ಸಿ. ತಹಸೀಲ್ದಾರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ಪ್ರಾಚಾರ್ಯ ಬಸವರಾಜ ತಹಸೀಲ್ದಾರ ಅಭಿಮತ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಸರ್ಕಾರಿ ಜಾಗ ಮಂಜೂರಿನೊಂದಿಗೆ ಕಾಲೇಜಿನ ಅಭಿವೃದ್ಧಿ ಕಾರ್ಯಗಳಲ್ಲಿ ಹಳೇ ವಿದ್ಯಾರ್ಥಿಗಳ ಪಾತ್ರ ಸ್ಮರಿಸುವಂತದ್ದು ಎಂದು ಪ್ರಾಂಶುಪಾಲ ಬಸವರಾಜ ಸಿ. ತಹಸೀಲ್ದಾರ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಹಳೇ ವಿದ್ಯಾರ್ಥಿಗಳ ಸಂಘ ಸಭೆಯಲ್ಲಿ ಅವರು ಮಾತನಾಡಿದರು.

ಕಾಲೇಜಿನ ಅಭಿವೃದ್ಧಿಗಾಗಿ ಹಳೆಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ರಾಮ್ ಪ್ರಸಾದ್ ನೇತೃತ್ವದಲ್ಲಿನ ಸಂಘದ ಪದಾಧಿಕಾರಿಗಳ ಸದಾ ಶ್ರಮದಲ್ಲಿರುವರು. ಯಾವುದೇ ಕುಂದುಕೊರತೆಗಳಿದ್ದು ತಕ್ಷಣವೇ ಗಮನಹರಿಸಿ ಪರಿಹಾರ ಒದಗಿಸುವಲ್ಲಿ ಸಂಘದವರು ಮುಂದಾಗುವರು. ನೂತನ ವಿದ್ಯಾರ್ಥಿಗಳಿಗಾಗಿ ಹಳೇ ವಿದ್ಯಾರ್ಥಿಗಳ ಸಂಘದಿಂದ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಬೆಳವಣಿಗೆ, ಕ್ರೀಡಾ ಸಾಂಸ್ಕೃತಿಕ, ಮತ್ತು ಗುರುವಂದನೆ, ಪುರಸ್ಕಾರದಂತಾಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಲಹೆಗಳನ್ನು ನೀಡಿದರು.

ಸಂಚಾಲಕ ರಾಜಕುಮಾರ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯವಿಧಾನಗಳನ್ನು ತಿಳಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 2026-27ರ ನ್ಯಾಕ್ ಪ್ರಕ್ರಿಯೆಯಡಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಉದ್ಯೋಗಾವಕಾಶ, ಕಾಲೇಜಿನ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಡೀಕರಣ ಸೇರಿದಂತೆ ಕುಂದುಕೊರತೆಗಳಿಗೆ ಪರಿಹಾರ ಮಾರ್ಗಗಳಿಗೆ ಸಂಘದ ಸಹಕಾರ ಅತ್ಯಗತ್ಯವಿದೆ. ಕಾಲೇಜಿನ ಆಡಳಿತ ಮಂಡಳಿಯವರು ಸಂಘದ ಜೊತೆಗೆ ಸದಾ ಬೆಂಬಲವಾಗಿರುತ್ತೇವೆ ಎಂದರು.

ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ಮಾತನಾಡಿ, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸಂಚಾಲಕರಾಗಿದ್ದ ಭೀಮಣ್ಣ ಬಿ.ಸುಣಗಾರ್, ಗ್ರಂಥಪಾಲಕ ಗುರುಮೂರ್ತಿ, ಹಿರಿಯ ವಿದ್ಯಾರ್ಥಿಗಳಾದ ಬಾಡದ ಆನಂದರಾಜ್, ಮಂಜುನಾಥ್ ಮಾರ್ಗದರ್ಶನದಂತೆ ಹಳೆಯ ವಿದ್ಯಾರ್ಥಿಗಳ ಸಂಘದ ರಚನೆಯಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು ಕಾಲೇಜಿನ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸಿದೆವು. ಆದರೆ ಕೋವಿಡ್ ಹಾವಳಿ ಮತ್ತು ಕೆಲ ನ್ಯೂನತೆಗಳಿಂದ ಸಂಘದ ಕಾರ್ಯ ಚಟುವಟಿಕೆಗಳು ಕುಂಠಿತವಾದವು. ಮುಂದಿನ ದಿನಗಳಲ್ಲಿ ಕಾಲೇಜು ಅಭಿವೃದ್ಧಿ ಸರ್ವರೂ ಕೈ ಜೋಡಿಸುವಂತೆ ಕೋರಿದರು.

ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಆರ್.ವಿ. ನವೀನ್ ಕುಮಾರ, ಕಾಲೇಜಿನ ಎಕ್ಯುಎಸಿ ಸಂಚಾಲಕರಾದ ಜೆ.ಪಿ.ಗುರುರಾಜ, ಎಂ.ರವೀಶ್, ಸದಸ್ಯರಾದ ಷಣ್ಮುಖ, ಐಟಿ ಸಂಚಾಲಕ ಸಂಗಪ್ಪ, ಸಿಬ್ಬಂದಿ ಜಮುನಾ, ಪೂಜಾ ಇತರರು ಉಪಸ್ಥಿತರಿದ್ದರು.

- - -

-11ಕೆಡಿವಿಜಿ38:

ದಾವಣಗೆರೆಯ ಸರ್ಕಾರಿ ಪ್ರದ ಕಾಲೇಜಿನಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಂಘ ಸಭೆಯಲ್ಲಿ ಬಸವರಾಜ ಸಿ. ತಹಸೀಲ್ದಾರ್ ಮಾತನಾಡಿದರು. ಇತರ ಗಣ್ಯರು ಉಪಸ್ತಿತರಿದ್ದರು.