ಸಾರಾಂಶ
ಹಣ ಇದ್ದವರು ರಾಜಕಾರಣಕ್ಕೆ ಬರುವುದು ಪುನಃ ಹಣ ಗಳಿಸುವುದಕ್ಕೆ. ಆದರೆ ಹಣ ಇರದವರು ರಾಜಕಾರಣಕ್ಕೆ ಬರುವುದು ಪ್ರಜಾತಂತ್ರ ವ್ಯವಸ್ಥೆ ಉಳಿಸುವುದಕ್ಕಾಗಿ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನದಾಸ್ ಅಗರವಾಲ್ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಹಣ ಇದ್ದವರು ರಾಜಕಾರಣಕ್ಕೆ ಬರುವುದು ಪುನಃ ಹಣ ಗಳಿಸುವುದಕ್ಕೆ. ಆದರೆ ಹಣ ಇರದವರು ರಾಜಕಾರಣಕ್ಕೆ ಬರುವುದು ಪ್ರಜಾತಂತ್ರ ವ್ಯವಸ್ಥೆ ಉಳಿಸುವುದಕ್ಕಾಗಿ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನದಾಸ್ ಅಗರವಾಲ್ ಹೇಳಿದರು.ನಗರದ ಸಂಗನಬಸವನ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ಈಗಾಗಲೇ ಸಂಸದನಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮುಂದಿನ 5 ವರ್ಷಗಳ ಕಾಲ ಬಾಕಿ ಉಳಿದಿರುವ ಎಲ್ಲ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.ಬೂತ್ ಮಟ್ಟದ ಕಾರ್ಯಕರ್ತರು ನಿಮ್ಮ ಬೂತ್ ಗಟ್ಟಿ ಮಾಡಿಕೊಂಡರೆ ಚುನಾವಣೆ ಗೆಲವು ಸರಳವಾಗಿ ಆಗುತ್ತದೆ. ಕಾರ್ಯಕರ್ತರು ತಮ್ಮ ಬಂಧು ಮಿತ್ರರನ್ನು ಫೋನ್ ಮೂಲಕ ಸಂಪರ್ಕಿಸಿ ಬಿಜೆಪಿಗೆ ಮತ ಹಾಕಲು ಮನವಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕೆಂದರು.
ಚುನಾವಣೆಯಲ್ಲಿ ಹಣ ಖರ್ಚು ಮಾಡದೇ ಪುಕ್ಸಟ್ಟೆ ಗಿರಾಕಿ ಆಗಿರಬಹುದು. ಆದರೆ ಮುಂದಿನ 5 ವರ್ಷಗಳಲ್ಲಿ ಜನರ ಕೆಲಸವನ್ನು ಪುಕ್ಸಟ್ಟೆಯಾಗಿ ಮಾಡಿ ಕೊಡುತ್ತೇನೆಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಎಸ್.ಕೆ.ಬೆಳ್ಳುಬ್ಬಿ, ಸೋಮನಗೌಡ ಪಾಟೀಲ, ಎ.ಎಸ್.ಪಾಟೀಲ ನಡಹಳ್ಳಿ, ಅರುಣ ಶಹಾಪೂರ, ರಾಜಶೇಖರ ಶೀಲವಂತ, ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಸ್ವಪ್ನಾ ಕಣಮುಚನಾಳ ಸೇರಿದಂತೆ ಹಲವರು ವೇದಿಕೆಯ ಮೇಲೆ ಇದ್ದರು. ಈರಣ್ಣ ರಾವೂರ ಸ್ವಾಗತಿಸಿದರು. ಮುಳುನಗೌಡ ಪಾಟೀಲ ನಿರೂಪಿಸಿದರು.