ಸರ್ಕಾರಿ ಶಾಲೆಗಳಿಗೆ ಇನ್ನೂ ಪಠ್ಯ ಪುಸ್ತಕ ಪೂರ್ಣ ವಿತರಣೆಯಾಗಿಲ್ಲ

| Published : Jun 25 2024, 12:35 AM IST

ಸರ್ಕಾರಿ ಶಾಲೆಗಳಿಗೆ ಇನ್ನೂ ಪಠ್ಯ ಪುಸ್ತಕ ಪೂರ್ಣ ವಿತರಣೆಯಾಗಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

೮, ೯ ಮತ್ತು ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕ ಇನ್ನೂ ತಲುಪಿಲ್ಲ. ಮೇ ೩೧ರಿಂದ ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ. ಆದರೆ ಅವರ ಕಲಿಕೆಗೆ ಬೇಕಾದ ಪುಸ್ತಕಗಳೇ ಲಭ್ಯವಿಲ್ಲ.

ಕನ್ನಡಪ್ರಭ ವಾರ್ತೆ ಕೆಜಿಎಫ್ಶಾಲೆಗಳು ಪ್ರಾರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಇದುವರೆಗೂ ಮಕ್ಕಳಿಗೆ ಪಠ್ಯಪುಸ್ತಕ ಪೂರೈಕೆ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಸರಬರಾಜಾಗಿಲ್ಲ, ೮, ೯ ಮತ್ತು ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕ ಇನ್ನೂ ತಲುಪಿಲ್ಲ. ಮೇ ೩೧ರಿಂದ ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ. ಆದರೆ ಅವರ ಕಲಿಕೆಗೆ ಬೇಕಾದ ಪುಸ್ತಕಗಳೇ ಲಭ್ಯವಿಲ್ಲ.ಮಕ್ಕಳಿಗೆ ಪಠ್ಯ ಪುಸ್ತಕ ಕೊರತೆ

ಕೆಜಿಎಫ್ ತಾಲೂಕಿನಲ್ಲಿ ೨೦೫ ಸರಕಾರಿ ಶಾಲೆಗಳು ಇದ್ದು, ಇದರಲ್ಲಿ ೧೬ ಶಾಲೆಗಳು ಅನುದಾನಿತ, ೬೦ ಅನುದಾನ ರಹಿತ ಶಾಲೆಗಳಿವೆ, ಎಲ್ಲ ಕಡೆ ಪ್ರಾರಂಭದಲ್ಲಿಯೇ ಪಠ್ಯಪುಸ್ತಕದ ಕೊರತೆ ಎದುರಾಗಿದೆ, ೨೪ ಅನುದಾನ ರಹಿತ ಶಾಲೆ ಹೊರತು ಉಳಿದ ಎಲ್ಲ ಶಾಲೆಗಳಿಗೆ ಪುಸ್ತಕ ವಿತರಿಸಲಾಗಿದೆ, ಕೇಂದ್ರ ಕಚೇರಿಯಿಂದ ತಾಲೂಕು ಕಚೇರಿಗೆ ಪುಸ್ತಕ ಬರುವುದು ವಿಳಂಬವಾಗುತ್ತಿದೆ, ಇದೇ ಕಾರಣದಿಂದ ಸರಬರಾಜು ತಡವಾಗುತ್ತಿದೆ ಎಂಬುವುದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉತ್ತರ, ಆದರೆ ಸರ್ಕಾರಿ ಶಾಲೆಯ ಮಕ್ಕಳಿಗೂ ಈವರೆಗೆ ಪುಸ್ತಕ ತಲುಪಿಲ್ಲ ಎಂದು ಅಲ್ಲಿನ ಶಿಕ್ಷಕರೇ ಹೇಳುತ್ತಾರೆ.ಪ್ರಮುಖವಾಗಿ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್ಲ ವಿಭಾಗದ ಪಠ್ಯ ಪುಸ್ತಕ ಲಭಿಸಿಲ್ಲ, ಇದು ವಾರ್ಷಿಕ ಪರೀಕ್ಷೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹದು ಎಂಬ ಆತಂಕ ಮಕ್ಕಳು, ಪೋಷಕರನ್ನು ಕಾಡುತ್ತಿದೆ. ಶಾಲೆ ಆರಂಭದ ದಿನದಿಂದ ಆಭ್ಯಾಸದಲ್ಲಿ ತೊಡಗಿಸಿಕೊಂಡರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದು, ಮಕ್ಕಳು ಆಸಕ್ತಿಯಿಂದ ಶಾಲೆಗಳತ್ತ ಬರುತ್ತಿದ್ದಾರೆ, ಆದರೆ ಪಠ್ಯ ಪುಸ್ತಕ ಅವರ ಕೈ ತಲುಪಿಲ್ಲ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ

ರಜೆ ಇದ್ದ ಸಮಯದಲ್ಲಿಯೇ ಪಸ್ತಕ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕಿತ್ತು, ಮಕ್ಕಳು ಮರಳಿ ಶಾಲೆಗೆ ಬರುವ ಹೊತ್ತಿಗೆ ಎಲ್ಲ ಸಿದ್ದತೆ ಮಾಡಿಕೊಂಡು ಅವರವನ್ನು ಕಲಿಕೆಗೆ ಅಣಿಗೊಳಿಸಬೇಕಿತ್ತು, ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ, ತಾತ್ಸರ ಭಾವನೆಯಿಂದ ಮಕ್ಕಳು ಪಾಠದಿಂದ ದೂರ ಉಳಿಯುವಂತಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಈ ವರ್ಷ ಮತ್ತೆ ಪುಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹೊಸ ಪುಸ್ತಕ ಸಿಗುತ್ತಿಲ್ಲ, ಹಳೆಯ ಪುಸ್ತಕ ಮುಂದುವರಿಸಲು ಸಾಧ್ಯವಾಗುತ್ತಿಲ್ಲ, ಕನ್ನಡ, ಸಮಾಜ ವಿಜ್ಞಾನ ಪಠ್ಯಪುಸ್ತಕ ಇಲ್ಲದಿದ್ದರೆ ಪಾಠ ಮಾಡಲು ಆಗುವುದಿಲ್ಲ ಪುಸ್ತಕ ಸಿಗದೆ ಮಕ್ಕಳ ಭವಿಷ್ಯವೇ ಆತಂತ್ರವಾಗಿದೆ.ಮಕ್ಕಳಿಗೆ, ಶಿಕ್ಷಕರಿಗೆ ಹೊರೆ

ತಡವಾಗಿ ಪುಸ್ತಕ ಪೂರೈಸಿದರೆ ಮಕ್ಕಳು, ಶಿಕ್ಷಕರ ಮೇಲೆ ಹೊರೆಯಾಗಲಿದೆ, ಪರಿಪೂರ್ಣ ಕಲಿಕೆ ಸಾಧ್ಯವಾಗುವುದಿಲ್ಲ, ಶಿಕ್ಷಕರು ಒತ್ತಡದಲ್ಲಿ ಬೋಧನೆ ಮಾಡಬೇಕಾದ ಪರಿಸ್ಥತಿ ಉದ್ಬವಿಸುತ್ತದೆ, ವಾರ್ಷಿಕ ಪರೀಕ್ಷೆಯ ಒಳಗೆ ಎಲ್ಲ ಅಧ್ಯಯಗಳನ್ನು ಪೂರ್ಣಗೊಳಿಸಲು ಆಗುವುದಿಲ್ಲ, ಬೋಧನೆ, ಕಲಿಕೆ ಎರಡೂ ಅರ್ಧಂಬರ್ಧ ಆಗುತ್ತದೆ ಎಂದು ಶಿಕ್ಷರೊಬ್ಬರು ಅಳಲು ತೋಡಿಕೊಂಡರು.

ಕೋಟ್ಕೆಜಿಎಫ್ ತಾಲೂಕಿನಲ್ಲಿ ಪಠ್ಯ ಪುಸ್ತಕ ಸರಬರಾಜು ಆಗುತ್ತಿದೆ, ಯಾವುದೇ ಸಮಸ್ಯೆಯಾಗದಂತೆ ಪುಸ್ತಕ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅದ್ಯತೆ ಮೇರೆಗೆ ಪುಸ್ತಕ ತಲುಪಿಸಲಾಗುತ್ತಿದೆ ಸದ್ಯಕ್ಕೆ ಯಾವುದೇ ಸಮಸ್ಯೆಯಾಗುತ್ತಿಲ್ಲ.- ವೆಂಕಟರಮಣಚಾರಿ, ಬಿಇಒ.