ಸಾರಾಂಶ
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಸಂತೆಗೆ ತೆರಳುತ್ತಿದ್ದ ವೃದ್ಧನ ಬಳಿಯಿದ್ದ 3.5 ತೊಲೆ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.
ನಾಲತವಾಡ: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಸಂತೆಗೆ ತೆರಳುತ್ತಿದ್ದ ವೃದ್ಧನ ಬಳಿಯಿದ್ದ 3.5 ತೊಲೆ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ 8ನೇ ವಾರ್ಡ್ ನಿವಾಸಿ ಎಮ್.ಸಿ.ಕ್ಷತ್ರಿ ಸೋಮವಾರ ಬೆಳಗ್ಗೆ ಸಂತೆಗೆ ಬಂದಿದ್ದರು.
ಈ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತರು ನಾವು ಸಿಬಿಐ ಅಧಿಕಾರಿಗಳು. ಅನ್ಯರಾಜ್ಯದಿಂದ ಕಳ್ಳರ ಗ್ಯಾಂಗ್ ನಾಲತವಾಡಕ್ಕೆ ಬಂದಿದ್ದಾರೆ. ಚಿನ್ನ ಹಾಕಿಕೊಂಡವರಿಗೆ ಚಾಕು ತೋರಿಸಿ ದೋಚುತ್ತಿದ್ದಾರೆ.
ಮೈಮೇಲೆ ಬಂಗಾರ ಹಾಕಿಕೊಳ್ಳಬೇಡಿ ಎಂದು ನಂಬಿಸಿ ಆತನ ಬಳಿಯಿದ್ದ ಬಂಗಾರದ ಚೈನ ಹಾಗೂ ಉಂಗುರವನ್ನು ಪಡೆದಿದ್ದಾರೆ. ಎರಡನ್ನು ಚೀಲದಲ್ಲಿ ಇಡುವುದಾಗಿ ಹೇಳಿ ಪೇಪರ್‌ನಲ್ಲಿ ಮಣ್ಣು ಹಾಕಿ ಚೀಲದಲ್ಲಿ ಇಟ್ಟಿದ್ದಾರೆ.
ಬಳಿಕ, ವೃದ್ಧನಿಗೆ ಸಂಶಯ ಬಂದು ತೆಗೆದು ನೋಡಿದಾಗ ಅದರಲ್ಲಿ ಮಣ್ಣು ಮಾತ್ರ ಇತ್ತು. ನಂತರ ಅಪರಿಚಿತರನ್ನು ನೋಡಿದಾಗ ಅವರು ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ, ಆತನ ಬಳಿಯಿಂದ ಒಟ್ಟು 3.5 ತೊಲೆ ಬಂಗಾರದ ಆಭರಣ ದೋಚಿ ಅಪರಿಚಿತರು ಪರಾರಿಯಾಗಿದ್ದಾರೆ. ಕೂಡಲೆ ವೃದ್ಧೆ ರಸ್ತೆಯಲ್ಲಿಯೇ ಹೊರಠಾಣೆಗೆ ತೆರಳಿ ವೃದ್ಧ ಘಟನೆ ಬಗ್ಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾನೆ.