ಸಾರಾಂಶ
ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಕುಟುಂಬದ ಅಭಿವೃದ್ಧಿಗಾಗಿ ನೂರಾರು ಎಕರೆ ಭೂಮಿ, ಭವ್ಯ ಬಂಗಲೆಗಳನ್ನು ನಿರ್ಮಿಸಿಕೊಳ್ಳಲು ಹವಣಿಸುತ್ತಿರುತ್ತಾರೆ. ಆದರೆ. ಸಾಲುಮರದ ತಿಮ್ಮಕ್ಕ ತಮಗೆ ಧಕ್ಕಿರುವ ಹಲವು ಪ್ರಶಸ್ತಿಗಳನ್ನು ಸಹ ಸಮಾಜಕ್ಕೆ ಮುಡುಪಾಗಿಡುವ ಮೂಲಕ ತನ್ನ ಗ್ರಾಮಕ್ಕೆ ಆಸ್ಪತ್ರೆ ನಿರ್ಮಿಸಬೇಕೆಂದು ಅವಿರತ ಶ್ರಮಿಸಿ ಸಮಾಜಕ್ಕೆ ಮಾದರಿ ಮಹಿಳೆಯಾಗಿದ್ದಾರೆಂದು ಸ್ಮರಿಸಿದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ನಿಜವಾದ ಮಹಾತಾಯಿಯಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ವಿಶ್ವ ಮಾನವ ವಿಚಾರ ವೇದಿಕೆ ಅಧ್ಯಕ್ಷ ಬಿ.ಬಂಕ್ ಮಹದೇವು ತಿಳಿಸಿದರು.ಪಟ್ಟಣದ ವಿಶ್ವಮಾನವ ವಿಚಾರ ವೇದಿಕೆ ಕಚೇರಿಯಲ್ಲಿ ನಡೆದ ಸಾಲುಮರದ ತಿಮ್ಮಕ್ಕ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಶುಶಿಕ್ಷಿತರು, ಹಣ, ಆಸ್ತಿ ಉಳ್ಳವರು ಮಾಡದ ಸಾಧನೆಯನ್ನು ಅವಿದ್ಯಾವಂತೆ ಸಾಲು ಮರದ ತಿಮ್ಮಕ್ಕ ಮಾಡಿ ಪರಿಸರ ರಕ್ಷಣೆಗಾಗಿ ಸಾವಿರಾರು ಗಿಡಗಳನ್ನು ನೆಟ್ಟು ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಜೊತೆಗೆ ವೃಕ್ಷಮಾತೆಯಾಗಿ ಹೊರ ಹೊಮ್ಮಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಕುಟುಂಬದ ಅಭಿವೃದ್ಧಿಗಾಗಿ ನೂರಾರು ಎಕರೆ ಭೂಮಿ, ಭವ್ಯ ಬಂಗಲೆಗಳನ್ನು ನಿರ್ಮಿಸಿಕೊಳ್ಳಲು ಹವಣಿಸುತ್ತಿರುತ್ತಾರೆ. ಆದರೆ. ಸಾಲುಮರದ ತಿಮ್ಮಕ್ಕ ತಮಗೆ ಧಕ್ಕಿರುವ ಹಲವು ಪ್ರಶಸ್ತಿಗಳನ್ನು ಸಹ ಸಮಾಜಕ್ಕೆ ಮುಡುಪಾಗಿಡುವ ಮೂಲಕ ತನ್ನ ಗ್ರಾಮಕ್ಕೆ ಆಸ್ಪತ್ರೆ ನಿರ್ಮಿಸಬೇಕೆಂದು ಅವಿರತ ಶ್ರಮಿಸಿ ಸಮಾಜಕ್ಕೆ ಮಾದರಿ ಮಹಿಳೆಯಾಗಿದ್ದಾರೆಂದು ಸ್ಮರಿಸಿದರು.ಕಾರ್ಯಕ್ರಮದಲ್ಲಿ ವಿಶ್ವಮಾನವ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಲ್. ಭರತ್‌ರಾಜ್, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಹಿರಿಯ ವಕೀಲರಾದ ಗುರುಸ್ವಾಮಿ, ಮಾದೇಗೌಡ, ಕೆ.ಎನ್.ಮೂರ್ತಿ, ಮಹದೇವಯ್ಯ, ನಾಗಮಣಿ, ಸತೀಶ್, ಗುರುಸ್ವಾಮಿ, ಚಿಕ್ಕರಾಚಯ್ಯ, ದೊಡ್ಡ ಮರಿಗೌಡ, ಶಿವಲಿಂಗಯ್ಯ ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))