ಲಾರಿಗಳ ಬೇಕಾಬಿಟ್ಟಿ ಸಂಚಾರದಿಂದ ಜನರಿಗೆ ತೊಂದರೆ

| Published : Oct 26 2024, 01:02 AM IST

ಸಾರಾಂಶ

ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಹಾದು ಹೋಗಿರುವ ಶಾದಿಪೂರ-ಚಿಕ್ಕನಿಂಗದಳ್ಳಿ ರಸ್ತೆಮಾರ್ಗದಲ್ಲಿ ಕೆಂಪುಮಣ್ಣು ತುಂಬಿದ ಲಾರಿಗಳು ಒಂದೇ ಸ್ಥಳದಲ್ಲಿ ಪಲ್ಟಿಯಾಗುತ್ತಿರುವುದರಿಂದ ವಾಹನ ಸವಾರರು ಭಯಭೀತರಾಗುತ್ತಿದ್ದಾರೆ.ಆದರೆ ಪೋಲಿಸರು ಯಾವುದೇ ಗಮನಹರಿಸುತ್ತಿಲ್ಲವೆಂದು ಕುಪೇಂದ್ರ ಶಾದೀಪೂರ ದೂರಿದ್ದಾರೆ.

ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಹಾದು ಹೋಗಿರುವ ಶಾದಿಪೂರ-ಚಿಕ್ಕನಿಂಗದಳ್ಳಿ ರಸ್ತೆಮಾರ್ಗದಲ್ಲಿ ಕೆಂಪುಮಣ್ಣು ತುಂಬಿದ ಲಾರಿಗಳು ಒಂದೇ ಸ್ಥಳದಲ್ಲಿ ಪಲ್ಟಿಯಾಗುತ್ತಿರುವುದರಿಂದ ವಾಹನ ಸವಾರರು ಭಯಭೀತರಾಗುತ್ತಿದ್ದಾರೆ.ಆದರೆ ಪೋಲಿಸರು ಯಾವುದೇ ಗಮನಹರಿಸುತ್ತಿಲ್ಲವೆಂದು ಕುಪೇಂದ್ರ ಶಾದೀಪೂರ ದೂರಿದ್ದಾರೆ.ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಕುಂಚಾವರಂ ಅಂಬೇಡ್ಕರ ವೃತ್ತದಿಂದ ಚಿಂದಾನೂರ ,ಶಾದಿಪೂರ, ಚಿಕ್ಕನಿಂಗದಳ್ಳಿ, ಕುಂಚಾವರಂ ಕ್ರಾಸವರೆಗೆ ಒಟ್ಟು ೪೦ಕಿಮಿರಸ್ತೆ ಮಾರ್ಗದಲ್ಲಿ ಪ್ರತಿನಿತ್ಯ ತೆಲಂಗಾಣ ರಾಜ್ಯದ ಮಲಚಲಮಾ, ತುರಮಾಮಡಿ,ಕೊಟ್ನಳ್ಳಿ ಮತ್ತು ಚಿಂದಾನೂರ,ಚಂದುನಾಯಕ ತಾಂಡಾದಿಂದ ಅಕ್ರಮವಾಗಿ ಟಿಪ್ಪರಗಳಲ್ಲಿ ಕೆಂಪು ಮಣ್ಣು ತುಂಬಿಕೊಂಡು ಅರಣ್ಯಪ್ರದೇಶದಲ್ಲಿ ಪ್ರತಿನಿತ್ಯ ಸಂಚರಿಸುತ್ತಿದೆ.

ಆದರೆ ಕುಂಚಾವರಂ ಏಕೈಕ ಮಾರ್ಗದಿಂದ ಧರ್ಮಸಾಗರ, .ವೆಂಕಟಾಪೂರ,ಸಂಗಾಪೂರ,ಪೆದ್ದಾತಾಂಡಾ,ವಂಟಿಚಿಂತಾ,ವಂಟಿಗುಡುಸಿ,ಮೋಟಿಮೋಕ,ಗೋಪುನಾಯಕ ತಾಂಡಾ,ಜಿಲವರ್ಷ,ಜವಾಹರನಗರ,ಚಾಪಲನಾನಾಯಕ ತಾಂಡಾ ಸವಾರರು ಇದೇ ಮಾರ್ಗವನ್ನು ಅವಲಂಬಿತರಾಗಿದ್ದಾರೆ.

ಆದರೆ ಹೆಚ್ಚಿನ ಪ್ರಮಾಣದಲ್ಲಿ ಕೆಂಪುಮಣ್ಣು ಲಾರಿಗಳಲ್ಲಿ ತುಂಬಿಕೊಂಡು ಸಂಚರಿಸುತ್ತಿರುವುದರಿಂದ ಒಂದು ದಿನದಲ್ಲಿ ೨-೩ ಲಾರಿಗಳು ಪಲ್ಟಿಯಾಗುತ್ತಿವೆ ಲಾರಿಗಳು ಏಕಾಏಕಿ ಪಲ್ಟಿ ಆಗುತ್ತಿರುವುದರಿಂದ ಪಕ್ಕದಲ್ಲಿ ಹಾಯ್ದು ಹೋಗುವ ಸವಾರರು ಜನರು ಭಯಪಡುವಂತಾಗಿದೆ ಎಂದರು.ವನ್ಯಜೀವಿಧಾಮದಲ್ಲಿ ಕೆಂಪುಮಣ್ಣು ಅನಧಿಕೃತವಾಗಿ ಅಕ್ರಮವಾಗಿ ಮಣ್ಣು ಸಾಗಿಸುವ ಲಾರಿಗಳಿಂದ ಶಾದೀಪೂರ ಗ್ರಾಮಸ್ಥರು ಭಯಪಡುವಂತಾಗಿದೆ ಲಾರಿಗಳು ವೇಗವಾಗಿ ಸಂಚರಿಸುತ್ತಿವೆ ಅಕ್ಕಪಕ್ಕದ ಚಹಾ ಹೋಟೇಲ,ಬಿಡಿಪಾನಶಾಪ ಅಂಗಡಿಗಳಿಗೆ ಬರುವ ಗ್ರಾಹಕರು ಭಯಪಡುವಂತಾಗಿದೆ.

ಅಧಿಕ ಕೆಂಪುಮಣ್ಣು ತುಂಬಿಕೊಂಡು ಬರುವ ಲಾರಿಗಳ ಕುರಿತು ತಹಸೀಲ್ದಾರವರಿಗೆ ಮತ್ತು ಕುಂಚಾವರಂ,ಮಿರಿಯಾಣ ಪೋಲಿಸರಿಗೆ ದೂರು ಸಲ್ಲಿಸಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕುಂಚಾವರಂ ವನ್ಯಜೀವಿಧಾಮ ವಲಯ ಅರಣ್ಯಅಧಿಕಾರಿಗಳು ಗಮನಹರಿಸಿಲ್ಲ ಅಕ್ರಮಕೆಂಪು ಮಣ್ಣು ನಿಲ್ಲಿಸುವಂತೆ ಶಾದೀಪೂರ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕುಪೇಂದ್ರ ಶಾದಿಪೂರ ತಿಳಿಸಿದ್ದಾರೆ.