ಖಜಾನೆ ಖಾಲಿಯಾಗಲ್ಲ, ಅದು ಅಕ್ಷಯ ಪಾತ್ರೆ

| Published : Dec 24 2024, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳಿಗೆ ಆಸರೆಯಾಗಿವೆ. ಆಹಾರ ಹಾಗೂ ಬಡವರ ಮನೆಗಳ ಜ್ಯೋತಿಯಾಗಿ ಬೆಳಗುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಲ್ಲ. ಬದಲಾಗಿ ಅದು ಅಕ್ಷಯ ಪಾತ್ರೆ ಎಂದು ಶಾಸಕ ಮತ್ತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳಿಗೆ ಆಸರೆಯಾಗಿವೆ. ಆಹಾರ ಹಾಗೂ ಬಡವರ ಮನೆಗಳ ಜ್ಯೋತಿಯಾಗಿ ಬೆಳಗುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಲ್ಲ. ಬದಲಾಗಿ ಅದು ಅಕ್ಷಯ ಪಾತ್ರೆ ಎಂದು ಶಾಸಕ ಮತ್ತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಬಣ್ಣಿಸಿದರು.

ತಾಲೂಕು ಪಂಚಾಯತಿ ಕಟ್ಟಡದಲ್ಲಿ ತೆರೆಯಲಾಗಿರುವ ತಾಲೂಕು ಮಟ್ಟದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟಿಸಿ ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ತಾಲೂಕಿನಲ್ಲಿ ಬಾಕಿಯಿರುವ ಗ್ಯಾರಂಟಿ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡಲು ಶ್ರಮಿಸಬೇಕು. ಈ ಹುದ್ದೆ ಸಣ್ಣದಲ್ಲ ಸಾವಿರಾರು ಬಡವರಿಗೆ ಯೋಜನೆ ಮುಟ್ಟಿಸುವ ಹುದ್ದೆಯಾಗಿದೆ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿ. ಇದಕ್ಕೆ ಐದು ಗ್ಯಾರಂಟಿ ಇಲಾಖೆಗಳ ಅಧಿಕಾರಿಗಳು ಕೈಜೋಡಿಸಬೇಕು ಎಂದು ಹೇಳಿದರು.

ಇಂದಿನಿಂದಲೇ ತಮ್ಮ ಜವಾಬ್ದಾರಿ ಅರಿತು ಗ್ಯಾರಂಟಿ ಯೋಜನೆ ಅಧ್ಯಕ್ಷರು ಕೆಲಸ ಆರಂಭಿಸಬೇಕು. ಇದಕ್ಕೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು ಎಂದು ಸೂಚಿಸಿದರು.

ಇಂದಿನ ಬಿಜೆಪಿ ಸರ್ಕಾರ ಮಾಡಿದ ಸಾಲದಿಂದ ಇಷ್ಟು ವರ್ಷ ಬೇಕಾಯಿತು. ಆದರು, ಯಾವುದೇ ಅಭಿವೃದ್ಧಿ ಮತಕ್ಷೇತ್ರದಲ್ಲಿ ನಿಂತಿಲ್ಲ. ತಾಳಿಕೋಟಿ ₹ 8 ಕೋಟಿ, ಮುದ್ದೇಬಿಹಾಳ ₹ 8 ಕೋಟಿ ಹಾಗೂ ನಾಲತವಾಡ ಪಟ್ಟಣ ಅಭಿವೃದ್ಧಿಗೆ ₹ 4 ಕೋಟಿ ಬಿಡುಗಡೆಯಾಗಿದೆ. ಸರ್ಕಾರ ದಿವಾಳಿ ಆಗಿದ್ದರೆ ಈ ಹಣ ಹೇಗೆ ಬಿಡುಗಡೆ ಆಗುತ್ತಿತ್ತು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಈ ವೇಳೆ ಜಿಲ್ಲಾ ಪಂಚ ಗ್ಯಾರಂಟಿ ಯೋಜನಾ ಅಧ್ಯಕ್ಷರು ಇಲಿಯಾಸ್ ಬೋರಾಮಣಿ, ಉಪಾಧ್ಯಕ್ಷರು ಸದ್ದಾಂ ಕುಂಟೋಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ತಾ.ಪಂ ಇಓ ಎನ್.ಎಸ್ ಮಸಳಿ, ಎಮ್.ಬಿ ನಾವದಗಿ, ಮುದ್ದೇಬಿಹಾಳ ಸಾರಿಗೆ ಘಟಕದ ವ್ಯವಸ್ಥಾಪಕ ಎ ಎಚ್ ಮದಭಾವಿ, ಬಾಪುರಾಯ ದೇಸಾಯಿ, ಬಿ.ಕೆ ಬಿರಾದಾರ, ಶೋಭಾ ಶೆಳ್ಳಿಗಿ ಸೇರಿದಂತೆ ಇನ್ನೀತರರು ಇದ್ದರು.

ಬಾಕ್ಸ್‌

ಪಕ್ಷ ವಿರೋಧಿಗಳಿಗೆ ಪರೋಕ್ಷ ಎಚ್ಚರಿಕೆ

ನಲವತ್ತು ವರ್ಷದಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ನಿಮ್ಮಿಂದ ನಾನು ಕಲಿಯಬೇಕಿಲ್ಲ. ನಾನು ಸೌಮ್ಯ ಸ್ವಭಾವದ ರಾಜಕಾರಣಿ. ವಿರೋಧಿಗಳಿಗೆ ಹಾಗೆ ಮಾಡಬೇಕು ಹೀಗೆ ಎನ್ನುವುದು ಬೇಡ. ನಮ್ಮ ಪಾಡಿಗೆ ನಾವು ತಾಲೂಕು ಅಭಿವೃದ್ಧಿ ಮಾಡೋಣ. ಕಾಂಗ್ರೆಸ್ ಪಕ್ಷ ನಿಂತ ನೀರಲ್ಲ. ಹರಿಯುವ ನೀರು. ಯಾವ ರಾಜಕೀಯ ನಾಯಕರು ಪಕ್ಷ ಬಿಟ್ಟು ಹೋದರು ಪಕ್ಷಕ್ಕೆ ಯಾವುದೇ ಹಾನಿಯಾಗಲ್ಲ. ಇದೊಂದು ದೊಡ್ಡ ಆಲದ ಮರವಿದ್ದಂತೆ ಎಂದು ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.